Advertisement

ಶ್ರೀ ಲಕ್ಷ್ಮೀ ವಿಷ್ಣು ಮಹಾಯಜ್ಞ, ಕೊರಗಜ್ಜ ದೈವದ ನೇಮ, ಶೋಭಯಾತ್ರೆ

12:08 PM Jun 06, 2022 | Team Udayavani |

ಮುಂಬಯಿ: ಮಲಾಡ್‌ ಪೂರ್ವದ ಧಾರ್ಮಿಕ ಸಂಸ್ಥೆಗಳಲೊಂದಾದ ತಥಾಸ್ತು ಮಿತ್ರ ಮಂಡಳಿ (ರಿ.) ಇದರ ವತಿಯಿಂದ ಜೂನ್‌ 4ರಂದು ಶ್ರೀ ಲಕ್ಷ್ಮೀ ವಿಷ್ಣು ಮಹಾಯಜ್ಞ ಮತ್ತು ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವವು ಸಕಲ ಧಾರ್ಮಿಕ ಕಾರ್ಯಗಳು ವೇ|ಮೂ| ಸತೀಶ್‌ ಭಟ್‌, ಚಂದ್ರಶೇಖರ ಗುರೂಜಿ ಇವರ ಪೌರೋಹಿತ್ಯದಲ್ಲಿ ಮತ್ತು ನರೇಶ್‌ ಪೂಜಾರಿ ಇವರ ನೇತೃತ್ವದಲ್ಲಿ ನೆರವೇರಿತು.

Advertisement

ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಮಲಾಡ್‌ ಪೂರ್ವದ ಗೋವಿಂದ್‌ ನಗರದಲ್ಲಿರುವ ಶ್ರೀ ರುದ್ರ ಭದ್ರಕಾಳಿ ದೇವಸ್ಥಾನದಿಂದ ಭವ್ಯ ಶೋಭಯಾತ್ರೆ ಮೂಲಕ ಮಲಾಡ್‌ ಪೂರ್ವದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಸಾಗಿ ಬಂದು ಉತ್ಕರ್ಷ ಶಾಲಾ ಮೈದಾನಕ್ಕೆ ತಲುಪಿತು. ಮಲಾಡ್‌ ಪೂರ್ವದ ಕುರಾರ್‌ ವಿಲೇಜ್‌ನಲ್ಲಿರುವ ಕೊರಗಜ್ಜ ಸಾನಿಧ್ಯದ ಪ್ರಧಾನ ಅರ್ಚಕ ನರೇಶ್‌ ಪೂಜಾರಿ ಇವರ ಮುಂದಾಳತ್ವದಲ್ಲಿ ಕೊರಗಜ್ಜನ ನೇಮೋತ್ಸವಕ್ಕೆ ಸಕಲ ಸಿದ್ಧತೆಯೊಂದಿಗೆ ನೇಮಕ ಪೂರ್ವಭಾವಿ ಪನಿಯಾರ ಸೇವೆ, ಅಗೇಲ್‌ ಸೇವೆ, ಕಾರ್ಯಗಳು ಜರಗಿತು. ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು.

ಬಳಿಕ ಸತೀಶ್‌ ಭಟ್‌ ಮತ್ತು ವಿಪ್ರಾ ವೃಂದದವರಿಂದ ಶ್ರೀ ಲಕ್ಷ್ಮೀ ವಿಷ್ಣು ಮಹಾಯಜ್ಞ, ಶೋಭಯಾತ್ರೆ ಯಶಸ್ವಿಯಾಗಿ ನಡೆಯುವಲ್ಲಿ ತಥಾಸ್ತು ಫೌಂಡೇಶನ್‌ನ ಪದಾಧಿಕಾರಿಗಳು, ಧನರಾಜ್‌ ಶೆಟ್ಟಿ, ನವೀನ್‌ ಅಂಚನ್‌, ಜಗನ್ನಾಥ ಕೋಟ್ಯಾನ್‌, ಸೋನಮ್‌ ನಾಯರ್‌, ವಿಜಯಾ ಶೆಟ್ಟಿ, ದಿನೇಶ್‌ ಅಮೀನ್‌. ದಿನೇಶ್‌ ಸಾಲ್ಯಾನ್‌, ದಿನೇಶ್‌ ಪೂಜಾರಿ ಸಹಕರಿಸಿದರು. ಸಂಜೆ ಕೊರಗಜ್ಜನ ನೇಮೋತ್ಸವ ನಡೆಯಿತು. ಈ ಎಲ್ಲ ಧಾರ್ಮಿಕ ಕಾರ್ಯಗಳಿಗೆ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರಸಾದ ಸ್ವೀಕರಿಸಿದರು.

ಧಾರ್ಮಿಕ ಮುಂದಾಳು, ಪುರೋಹಿತ ವೇ|ಮೂ|ಸತೀಶ್‌ ಭಟ್‌ ಅವರು ಸ್ಥಾಪಿಸಿರುವ ತಥಾಸ್ತು ಮಿತ್ರ ಮಂಡಳಿ ಮಲಾಡ್‌ ಕಳೆದ ಹಲವಾರು ವರ್ಷಗಳಿಂದ ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ಕೆಲಸಗಳನ್ನು ಮಾಡುತ್ತಿದ್ದು, ಅಯ್ಯಪ್ಪನ ಮಹಾಪೂಜೆ ಪ್ರತಿವರ್ಷ ಸಂಭ್ರಮದಿಂದ ಮಾಡುತ್ತಿದ್ದು ಅದರೊಂದಿಗೆ ಅನ್ನಸಂತರ್ಪಣೆಯನ್ನು ನೆರವೇರಿಸಿಕೊಂಡು ಬರುತ್ತಿದ್ದಾರೆ. ಅಲ್ಲದೆ ಕಡುಬಡತನದ ಕುಟುಂಬಗಳಿಗೆ ಆರ್ಥಿಕ ನೆರವು, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಾ ಬಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next