Advertisement

ಟಾಟಾ ಟಿಗೋರ್‌ ವಿದ್ಯುತ್‌ ಕಾರು ಬಿಡುಗಡೆ

10:16 AM Oct 11, 2019 | |

ನವದೆಹಲಿ: ಕಾರು ತಯಾರಿಕಾ ಸಂಸ್ಥೆ ಟಾಟಾ, ತನ್ನ ಜನಪ್ರಿಯ ಮಾಡೆಲ್‌ ಆದ ಟಾಟಾ ಟಿಗೋರ್‌ ಕಾರಿನ “ವಿದ್ಯುತ್‌ ಚಾಲಿತ ಆವೃತ್ತಿ’ಯನ್ನು ಬುಧವಾರ ಬಿಡುಗಡೆ ಮಾಡಿದೆ.

Advertisement

ಒಂದು ಬಾರಿ ಚಾರ್ಚ್‌ ಮಾಡಿದರೆ,213 ಕಿ.ಮೀ.ವರೆಗೆ ಸಾಗಬಲ್ಲ ಶಕ್ತಿಶಾಲಿ ರೀಚಾರ್ಜಬಲ್‌ ಬ್ಯಾಟರಿ ಹೊಂದಿರುವುದು ಈ ಕಾರಿನ ವಿಶೇಷ. ಈ ಕಾರು, ಎಕ್ಸ್‌ಎಂ, ಎಕ್ಸ್‌ ಟಿ, ಎಕ್ಸ್‌ಇ ಪ್ಲಸ್‌, ಎಕ್ಸ್‌ ಎಮ್‌ ಪ್ಲಸ್‌ ಹಾಗೂ ಎಕ್ಸ್‌ಟಿ ಪ್ಲಸ್‌ ಎಂಬ ಮೂರು ಮಾದರಿಗಳಲ್ಲಿ ಲಭ್ಯವಿರಲಿದ್ದು, ಇವೆಲ್ಲವೂ ಆಟೋಮ್ಯಾಟಿಕ್‌ ಗೇರ್‌ ವ್ಯವಸ್ಥೆಯಲ್ಲಿ ಮಾತ್ರ ಲಭ್ಯ.

ಇವುಗಳ ಬೆಲೆ ದೆಹಲಿ ಎಕ್ಸ್‌-ಶೋರೂಂ ಬೆಲೆಗಳ ಪ್ರಕಾರ, 9.44ರಿಂದ 13.41 ಲಕ್ಷ ರೂ.ವರೆಗೆ ಇದೆ. ಬೆಂಗಳೂರು ಎಕ್ಸ್‌ -ಶೋರೂಂ ಬೆಲೆಗಳ ಪ್ರಕಾರ, 10.99ರಿಂದ 13.41 ಲಕ್ಷ ರೂ.ವರೆಗೆ ಇದೆ.

ಹೋಂಡಾ ಸಿಟಿ ಮುನ್ನಡೆ: ಸಿ-ಸೆಗ್ಮೆಂಟ್ ಸೆಡಾನ್‌ ಕಾರುಗಳ ಮಾರಾಟದಲ್ಲಿ ಕಳೆದ ತಿಂಗಳು ಹೋಂಡಾ ಸಿಟಿ, ತನ್ನ ಪ್ರತಿಸ್ಪರ್ಧಿಗಳಾದ ಹುಂಡೈ ವರ್ನಾ, ಮಾರುತಿ ಸಿಯಾಜ್‌ಗಳನ್ನು ಹಿಂದಿಕ್ಕಿದೆ. ಸೆಪ್ಟೆಂಬರ್‌ನಲ್ಲಿ 1,819 ಹೋಂಡಾ ಸಿಟಿ ಕಾರುಗಳು ಮಾರಾಟವಾಗಿದ್ದರೆ, ವರ್ನಾ 1,938 ಮತ್ತು ಸಿಯಾಜ್‌ 1,715 ಕಾರುಗಳು ಮಾರಾಟವಾಗಿವೆ.

ಬಜಾಜ್‌ ಇ-ಸ್ಕೂಟರ್‌

Advertisement

ದಶಕಗಳ ಹಿಂದೆ ಭಾರತದಲ್ಲಿ ಜನಪ್ರಿಯವಾಗಿದ್ದ ಬಜಾಜ್‌ನ ಚೇತಕ್‌ ಸ್ಕೂಟರನ್ನು ಮತ್ತೆ ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ. ಅ. 16ರಂದು ಅನಾವರಣಗೊಳ್ಳಲಿರುವ ಆ ಸ್ಕೂಟರ್‌ ವಿದ್ಯುತ್‌ ಚಾಲಿತ ಮಾದರಿಯಲ್ಲಿ ಇರಲಿದೆ. ಈ ಹೊಸ ವಿನ್ಯಾಸಕ್ಕೆ “ಅರ್ಬನೈಟ್‌’ ಎಂದು ಹೆಸರಿಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next