Advertisement
ಮಂಗಳೂರು ದಕ್ಷಿಣದ ಸಹಾಯಕ ಪೊಲೀಸ್ ಆಯುಕ್ತ ಮಹೇಶ್ ಕುಮಾರ್ ಬಿಡುಗಡೆಗೊಳಿಸಿ, ಏರುತ್ತಿರುವ ಜಾಗತಿಕ ತಾಪಮಾನ ನಿಯಂತ್ರಿಸಲು ಪರಿಸರ ಸಹ್ಯ ವಾಹನಗಳ ಬಳಕೆ ಹೆಚ್ಚಬೇಕಿದೆ. ಈ ನಿಟ್ಟಿನಲ್ಲಿ ಎಲೆಕ್ಟ್ರಿಕ್ ಕಾರುಗಳು ಹೆಚ್ಚು ಜನಪ್ರಿಯಗೊಳ್ಳುತ್ತಿವೆ. ಸರಕಾರವೂ ಉತ್ತೇಜನ ನೀಡುತ್ತಿದೆ ಎಂದರು.
ಕಾರು ಝಿಪ್ಟ್ರಾನ್ ತಂತ್ರಜ್ಞಾನ ಆಧರಿಸಿದೆ. ಭಾರತೀಯ ಡ್ರೈವಿಂಗ್ ಮತ್ತು ಹವಾಮಾನ ಪರಿಸ್ಥಿತಿಗೆ ಪೂರಕವಾಗಿ ವಿನ್ಯಾಸಗೊಳಿಸಲಾಗಿದೆ. ಟಿಯಾಗೋ ಇವಿ ಕಾರ್ಯಕ್ಷಮತೆ, ತಂತ್ರಜ್ಞಾನ, ವಿಶ್ವಾಸಾರ್ಹತೆ, ಚಾರ್ಜಿಂಗ್ ಮತ್ತು ಸೌಕರ್ಯವನ್ನು ಕಲ್ಪಿಸಿದೆ. ಯಾವುದೇ ರಸ್ತೆಗಳಲ್ಲಿ ಆಹ್ಲಾದಕರ ಚಾಲನೆಗೆ ಪೂರಕವಾಗಿದೆ.ಐಪಿ67 ರೇಟೆಡ್ ಬ್ಯಾಟರಿ ಪ್ಯಾಕ್‌ಗಳ (ನೀರು ಹಾಗೂ ಧೂಳು ನಿರೋಧಕ) ಬಹು ಸಂಯೋಜನೆಯಲ್ಲಿ ನೀಡ ಲಾ ಗಿದೆ. 24 ಕೆಡಬ್ಲ್ಯುಎಚ್ ಬ್ಯಾಟರಿ ಪ್ಯಾಕ್ ಸಣ್ಣ ಮತ್ತು ಕಿರು ಪ್ರಯಾಣಕ್ಕಾಗಿ ಅಂದಾಜು 315 ಕಿ.ಮೀ. ರೇಂಜ್ ಹೊಂದಿರುತ್ತದೆ.
Related Articles
ಚಾರ್ಜಿಂಗ್ ಪ್ರಮಾಣ 3.3 ಕೆಡಬ್ಲ್ಯು ಎಸಿ ಚಾರ್ಜರ್ ಬಳಸಿ 7 ಗಂಟೆಯಲ್ಲಿ ಹಾಗೂ 7.2 ಕೆಡಬ್ಲ್ಯು ಎಸಿ ಹೋಂಫಾಸ್ಟ್ ಚಾರ್ಜರ್ ಬಳಸಿ 3.36 ಗಂಟೆಯಲ್ಲಿ ಪೂರ್ಣ ಚಾರ್ಜ್ ಮಾಡಬಹುದು. ಡಿಸಿ ವೇಗದ ಚಾರ್ಜಿಂಗ್ ಕೇವಲ 30 ನಿಮಿಷಗಳ ಚಾರ್ಜಿಂಗ್‌ನಲ್ಲಿ 110 ಕಿ.ಮೀ. ಕ್ರಮಿಸಬಹುದು ಹಾಗೂ ಕೇವಲ 58 ನಿಮಿಷಗಳಲ್ಲಿ ಶೇ. 80ರಷ್ಟು ಚಾರ್ಜ್ ಮಾಡಬಹುದು.
Advertisement
ಕಾರು ಝೆಡ್‌ಕನೆಕ್ಟ್ ಅಪ್ಲಿಕೇಶನ್, ತಾಪಮಾನ ಸೆಟ್ಟಿಂಗ್, ರಿಮೋಟ್ ಜಿಯೋ ಫೆನ್ಸಿಂಗ್ ಮತ್ತು ಕಾರು ಸ್ಥಳ ಟ್ರ್ಯಾಕಿಂಗ್, ಸ್ಮಾರ್ಟ್ ವಾಚ್ ಕನೆಕ್ಟಿವಿಟಿ, ರಿಮೋಟ್ ವೆಹಿಕಲ್, ಹೆಲ್ಪ್ ಡಯಾಗ್ನಸ್ಟಿಕ್ಟ್, ರಿಯಲ್ ಟೈಮ್ ಚಾರ್ಜ್, ಡೈನಾಮಿಕ್ ಚಾರ್ಜರ್ ಲೊಕೇಟರ್, ಡ್ರೈವಿಂಗ್ ಸ್ಟೈಲ್ ಅನಾಲಿಟಿಕ್ಸ್ ಜತೆಗೆ ರಿಮೋಟಿ ಎಸಿ ಆನ್/ಆಫ್ ಸೇರಿದಂತೆ ಹಲವು ವೈಶಿಷ್ಟ್ಯಹೊಂದಿದೆ. ಹೆಚ್ಚಿನ ಮಾಹಿತಿಗೆ ಆಟೋಮ್ಯಾಟ್ರಿಕ್ಸ್, ಬಿಜೈ, ಉಡುಪಿ, ಪುತ್ತೂರು, ಸುಳ್ಯ, ಬಿ.ಸಿ.ರೋಡ್, ಚಿಕ್ಕಮಗಳೂರು, ಕಡೂರು ಹಾಗೂ ಹಾಸನ ಮಳಿಗೆಯನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.