ಹೊಸದಿಲ್ಲಿ: ಕಳೆದ ತಿಂಗಳು ಕಾರುಗಳ ಮಾರಾಟದ ವಿವರ ಶುಕ್ರವಾರ ಪ್ರಕಟಗೊಂಡಿದೆ. ಟಾಟಾ ಮೋಟರ್ಸ್ 24,632 ಪ್ರಯಾಣಿಕ ವಾಹನಗಳ ಮಾರಾಟ ಮಾಡಿದೆ.
2020ರ ಸೆಪ್ಟಂಬರ್‌ನಲ್ಲಿ 20,891 ವಾಹನಗಳು ಮಾರಾಟವಾಗಿದ್ದವು. ಶೇಕಡಾವಾರು ಲೆಕ್ಕಾಚಾರದಲ್ಲಿ ಶೇ.18ರಷ್ಟು ಮಾರಾಟ ಹೆಚ್ಚಾಗಿದೆ. ಮೋರಿಸ್ ಗ್ಯಾರೆಜ್ ಕಂಪೆನಿಯ ಕಾರುಗಳ ಮಾರಾಟದಲ್ಲಿ ಶೇ.28 ಹೆಚ್ಚಳವಾಗಿದೆ.
ಸ್ಕೋಡಾ ಸಂಸ್ಥೆಯು ಶೇ. 131 (3,027 ಕಾರುಗಳು) ಮತ್ತು ನಿಸ್ಸಾನ್ ಸಂಸ್ಥೆಯು ಶೇ. 261 ಏರಿಕೆ ದಾಖ ಲಿ ಸಿವೆ. ಈ ಎರಡೂ ಸಂಸ್ಥೆಗಳ ಮಾರಾಟ ಕಳೆದ ವರ್ಷ ಇದೇ ಅವಧಿಯಲ್ಲಿ ಕುಸಿದಿತ್ತು. ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಕೂಡ ಏರಿಕೆಯಾಗಿದೆ. ಟಿವಿಎಸ್ ಮೋಟರ್ ಕಂಪೆನಿ ಕಳೆದ ತಿಂಗಳು 3,47,156 ಬೈಕ್‌ಗಳನ್ನು ಮಾರಾಟ ಮಾಡಿದೆ.
ಇದನ್ನೂ ಓದಿ:ಕೊಲೊಂಬೊ ಬಂದರಿನಲ್ಲಿ ಅದಾನಿ ಗ್ರೂಪ್‌ನ 5 ಸಾವಿರ ಕೋಟಿ ರೂ. ಹೂಡಿಕೆ
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಶೇ.6ರಷ್ಟು ಏರಿಕೆಯಾಗಿದೆ. ದೇಶಿಯ ಮಾರುಕಟ್ಟೆಯಲ್ಲಿ 2,44,084 ಬೈಕ್‌ಗಳು ಮಾರಾಟವಾಗಿವೆ. ಇದೇ ವೇಳೆ ಬಜಾಜ್ ಅಟೋ ಕಂಪೆನಿಯ ವಾಹನಗಳ ಮಾರಾಟ ಶೇ.16ರಷ್ಟು ಕುಸಿದಿತ್ತು.
ಮಾರುತಿ ಸುಜುಕಿಯ ಕಾರುಗಳ ಮಾರಾಟ ಪ್ರಮಾಣ ಕಳೆದ ತಿಂಗಳು ಶೇ.57.33 ಕುಸಿದಿದೆ. ಹುಂಡೈ ಕಾರು ಮಾರಾ ಟವೂ ಶೇ. 34.2 ಇಳಿಕೆಯಾಗಿದೆ. ಕಾರು ಉತ್ಪಾದನೆಗೆ ಬೇಕಾದ ಸೆಮಿಕಂಡಕ್ಟರ್ ಕೊರತೆಯಿಂದಾಗಿ ಉತ್ಪಾದನೆ ಕಡಿಮೆಯಾಗಿರುವುದೇ ಈ ಇಳಿಕೆಗೆ ಕಾರಣ ಎನ್ನಲಾಗಿದೆ.