Advertisement

2025ರೊಳಗೆ ಟಾಟಾ ಸಂಸ್ಥೆಯಿಂದ 10 ಹೊಸ ವಿದ್ಯುತ್‌ ಚಾಲಿತ ಕಾರುಗಳ ಬಿಡುಗಡೆ

08:39 PM Jun 28, 2021 | Team Udayavani |

ನವದೆಹಲಿ: ದೇಶದ ಖ್ಯಾತ ಕಂಪನಿ ಟಾಟಾ ಮೋಟಾರ್ಸ್‌ 2025ರೊಳಗೆ 10 ಹೊಸ ವಿದ್ಯುತ್‌ ಚಾಲಿತ ಕಾರುಗಳನ್ನು ಬಿಡುಗಡೆ ಮಾಡುವುದಾಗಿ ಕಂಪನಿಯ ಮುಖ್ಯಸ್ಥ ಎನ್‌. ಚಂದ್ರಶೇಖರನ್‌ ತಿಳಿಸಿದ್ದಾರೆ.

Advertisement

ಷೇರುದಾರರ 76ನೇ ಸಮಾವೇಶದಲ್ಲಿ ಮಾತನಾಡಿದ ಅವರು, “2020ರಲ್ಲಿ ಕಂಪನಿಯು ಭಾರತದಲ್ಲಿ ಟಾಟಾ ನೆಕ್ಸಾನ್‌ ಇವಿ ಎಂಬ ಮೊಟ್ಟಮೊದಲ ವಿದ್ಯುತ್‌ ಕಾರನ್ನು ಬಿಡುಗಡೆ ಮಾಡಿತು.

ಆ ಕಾರಿಗೆ ಉತ್ತಮ ಸ್ಪಂದನೆ ಸಿಕ್ಕಿದ್ದು ಈವರೆಗೆ ಸುಮಾರು 4,000 ಕಾರುಗಳು ಮಾರಾಟವಾಗಿವೆ. ಜನರ ಸ್ಪಂದನೆ ಉತ್ತಮವಾಗಿರುವುದರಿಂದ ಮುಂದಿನ ನಾಲ್ಕು ವರ್ಷಗಳಲ್ಲಿ ಮತ್ತಷ್ಟು ವಿದ್ಯುತ್‌ ಚಾಲಿತ ಕಾರುಗಳನ್ನು ಮಾರುಕಟ್ಟೆಗೆ ತರಲು ಕಂಪನಿ ನಿರ್ಧರಿಸಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ :ಸಿಎಂ ಸ್ಥಾನಕ್ಕೆ ಕಾಂಗ್ರೆಸ್‌ ನಾಯಕರು ಬಡಿದಾಡುತ್ತಿರುವುದು ವಿಪರ್ಯಾಸ : ಜೋಶಿ ಲೇವಡಿ

Advertisement

Udayavani is now on Telegram. Click here to join our channel and stay updated with the latest news.

Next