Advertisement

ಟಾಟಾ ಮೋಟಾರ್ಸ್‌ ವಾಹನಗಳ ಮಾರಾಟದಲ್ಲಿ ಕುಸಿತ

09:54 AM Nov 05, 2019 | sudhir |

ಹೊಸದಿಲ್ಲಿ : ಆಫ‌ರ್‌ಕೊಟ್ಟು ಮಾರಾಟ ಚಟುವಟಿಕೆಯನ್ನು ಹೆಚ್ಚಿಸಬೇಕು ಎಂದು ಅಂದುಕೊಂಡಿದ್ದ ಕೆಲ ಹೆಸರಾಂತ ಕಂಪನಿಗಳ ಲೆಕ್ಕಾಚಾರ ಉಲ್ಟಾ ಹೊಡೆದಿದೆ. ಸದ್ಯ ಆಟೋಮೊಬೈಲ್‌ ವಲಯದಲ್ಲಿ ಏರಿಳಿತದ ಆಟ ನಡೆಯುತ್ತಿದ್ದು, ಕುಸಿತದ ತಾಪ ಟಾಟಾ ಮೋಟಾರ್ಸ್‌ನತ್ತ ತಿರುಗಿದೆ.

Advertisement

ಕುಸಿಯುತ್ತಿದೆ ಟಾಟಾ ಮೋಟಾರ್ಸ್‌ ಮಾರುಕಟ್ಟೆ
ಅಕ್ಟೋಬರ್‌ ತಿಂಗಳಲ್ಲಿ ಟಾಟಾ ಮೋಟಾರ್ಸ್‌ ವಾಹನಗಳ ಮಾರಾಟ ಶೇ 33.58ರಷ್ಟು ಕುಸಿದಿದ್ದು, 41,354 ಯೂನಿಟ್‌ಗಳು ಮಾರಾಟ ಆಗಿವೆ ಎಂದು ಕಂಪನಿ ತಿಳಿಸಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ ಕಂಪನಿ 62,264 ಯೂನಿಟ್‌ಗಳನ್ನು ಮಾರಾಟ ಮಾಡಿತ್ತು. ಆದರೆ ಈ ಬಾರಿ ದಸರಾ-ದೀಪಾವಳಿ ಆಫ‌ರ್‌ ನೀಡಿದರೂ ಗ್ರಾಹಕರು ಮಾತ್ರ ಮಾರುಕಟ್ಟೆಯಿಂದ ದೂರ ಉಳಿದಿದ್ದಾರೆ ಎಂಬುದು ಕಂಪನಿ ಹಂಚಿಕೊಂಡ ಅಂಕಿ-ಅಂಶದಿಂದ ತಿಳಿಯುತ್ತಿದೆ.

ದೇಶಿಯ ಮಾರುಕಟ್ಟೆಯಲ್ಲಿಯೂ ಇಳಿಕೆ
ಇನ್ನೂ ದೇಶಿಯ ವಾಹನಗಳ ಮಾರುಕಟ್ಟೆಯಲ್ಲಿ ಶೇ.32ರಷ್ಟು ಕುಸಿತ ಕಂಡು ಬಂದಿದ್ದು. 39,152 ಯೂನಿಟ್‌ಗಳು ಮಾತ್ರ ಮಾರಾಟವಾಗಿವೆ. ಕಳೆದ ವರ್ಷದ ಅಕ್ಟೋಬರ್‌ ಅಲ್ಲಿ 57,710 ವಾಹನಗಳು ಮಾರಾಟವಾಗಿದ್ದು, ಸುಮಾರು 13,169 ಯುನಿಟ್‌ಗಳಷ್ಟು ಪ್ರಯಾಣಿಕರ ವಾಹನಗಳು ಸೇಲ್‌ ಆಗಿವೆ.

ವಾಣಿಜ್ಯ ವಾಹನಗಳ ಕಥೆ ಏನು
ವಾಣಿಜ್ಯ ವಾಹನಗಳ ಮಾರಾಟದಲ್ಲೂ ಶೇ.34 ರಷ್ಟು ಕುಸಿದಿದ್ದು, 25,983 ಯೂನಿಟ್‌ಗಳು ಖರೀದಿ ಆಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 39,420 ಯೂನಿಟ್‌ಗಳು ಮಾರಾಟ ಆಗಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next