ನವದೆಹಲಿ: 2021ರ ಡಿಸೆಂಬರ್‌ನಲ್ಲಿ ಕಾರು ವ್ಯಾಪಾರದಲ್ಲಿ ಹುಂಡೈ ಸಂಸ್ಥೆಯನ್ನು ಹಿಂದಿಕ್ಕುವ ಮೂಲಕ ಟಾಟಾ ಮೋಟಾರ್ ಸಂಸ್ಥೆಯು ದೇಶದ ಎರಡನೇ ಅತಿದೊಡ್ಡ ಕಾರು ಸಂಸ್ಥೆಯಾಗಿ ಹೊರಹೊಮ್ಮಿದೆ.
ಟಾಟಾ ಮೋಟಾರ್ ಡಿಸೆಂಬರ್‌ನಲ್ಲಿ 35,300 ಕಾರುಗಳನ್ನು ಮಾರಾಟ ಮಾಡಿದ್ದರೆ, ಹುಂಡೈ ಸಂಸ್ಥೆ 32,312 ಕಾರುಗಳನ್ನು ಮಾರಾಟ ಮಾಡಿದೆ.
ಅಂತಾರಾಷ್ಟ್ರೀಯವಾಗಿ ಸೆಮಿಕಂಡಕ್ಟರ್ ಚಿಪ್‌ಗ್ಳ ಕೊರತೆಯಿದ್ದರೂ ಟಾಟಾ ಸಂಸ್ಥೆ ದಾಖಲೆಯ ಪ್ರಮಾಣದಲ್ಲಿ ಕಾರು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ.
ಈ ವಿತ್ತೀಯ ವರ್ಷದ ಮೂರನೇ ತ್ತೈಮಾಸಿಕದಲ್ಲಿ ಸಂಸ್ಥೆಯಿಂದ 99,002 ಕಾರುಗಳನ್ನು ಮಾರಾಟ ಮಾಡಲಾಗಿದೆ. ಕಳೆದ ವಿತ್ತೀಯ ವರ್ಷದ 3ನೇ ತ್ತೈಮಾಸಿಕಕ್ಕೆ ಹೋಲಿಸಿದರೆ ಇದು ಶೇ.44 ಏರಿಕೆಯಾಗಿದೆ.
ಇದನ್ನೂ ಓದಿ:ನಾಗಮಂಗಲ: ಬಸ್ ಢಿಕ್ಕಿ; ಕಾರಿನಲ್ಲಿದ್ದ ನವ ದಂಪತಿ ಸೇರಿ, ಮೂವರು ದಾರುಣ ಸಾವು
2021ರ ಕ್ಯಾಲೆಂಡರ್ ವರ್ಷದಲ್ಲಿ 3.31 ಲಕ್ಷ ಕಾರುಗಳನ್ನು ಮಾರಾಟ ಮಾಡಿದೆ. 2020ರ ಡಿಸೆಂಬರ್‌ಗೆ ಹೋಲಿಸಿದರೆ ಈ ವರ್ಷದ ಡಿಸೆಂಬರ್‌ನಲ್ಲಿ ಟಾಟಾ ಕಾರು ಮಾರಾಟ ಶೇ.50 ಏರಿಕೆಯಾಗಿದೆ.