Advertisement

2ನೇ ತ್ತೈಮಾಸಿದಕದಲ್ಲಿ ಟಾಟಾ ಮೋಟರ್ ಗೆ 216 ಕೋಟಿ ರೂ. ನಷ್ಟ

09:39 AM Oct 26, 2019 | |

ಮುಂಬಯಿ: ಆರ್ಥಿಕ ಹಿಂಜರಿತ, ಕಾರುಗಳಿಗೆ ಬೇಡಿಕೆ ಕಡಿಮೆಯಾದ ಹಿನ್ನೆಲೆಯಲ್ಲಿ ದೇಶದ ಪ್ರಮುಖ ಕಾರು ತಯಾರಿಕೆ ಕಂಪೆನಿ ಟಾಟಾ ಮೋಟಾರ್ ಮೇಲೆ ವ್ಯತಿರಿಕ್ತ ಪರಿಣಾಮವಾಗಿದೆ.

Advertisement

ಎರಡನೇ ತ್ತೈಮಾಸಿಕದಲ್ಲಿ 216 ಕೋಟಿ ರೂ. ನಷ್ಟವಾಗಿದೆ ಎಂದು ಕಂಪೆನಿ ವರದಿ ಹೇಳಿದೆ. ಪ್ರಯಾಣಿಕ ಕಾರು ಮಾರಾಟದಲ್ಲಿ ತೀವ್ರ ಕುಸಿತದ ನೇರ ಪರಿಣಾಮ ಇದಾಗಿದೆ. ಇದೇ ವೇಳೆ ಕಂಪೆನಿಯ ಒಟ್ಟಾರೆ ಆದಾಯ ಈ ವರ್ಷ 64, 763 ಕೋಟಿ ರೂ. ಆಗಿದ್ದು, ಕಳೆದ ವಿತ್ತೀಯ ವರ್ಷದಲ್ಲಿ 71,293 ಕೋಟಿ ರು. ಆಗಿತ್ತು.

ಇನ್ನು ಕಂಪೆನಿಯ ಹಣಕಾಸು ವೆಚ್ಚ 609 ಕೋಟಿ ರೂ.ಗಳಷ್ಟು ಹೆಚ್ಚಳವಾಗಿದೆ. ಅಂದರೆ 2019ರ 2ನೇ ತ್ತೈಮಾಸಿಕದಲ್ಲಿ ಇದು 1835 ಕೋಟಿ ರೂ. ಇತ್ತು. ಹೆಚ್ಚಿನ ಪ್ರಮಾಣದಲ್ಲಿ ಸಾಲ ಪಡೆದಿರುವುದು ಹಣಕಾಸು ವೆಚ್ಚ ಏರಲು ಕಾರಣವಾಗಿದೆ. ಇದೇ ವೇಳೆ ಟಾಟಾದ ಲಕ್ಸುರಿ ಕಾರು ಬ್ರ್ಯಾಂಡ್‌ ಜಾಗ್ವಾರ್‌ ಆ್ಯಂಡ್‌ ರೋವರ್‌ ಸ್ಥಿತಿ ಸುಧಾರಣೆ ಕಂಡಿದೆ. ಚೀನಾದಲ್ಲಿ ಮಾರಾಟ ಉತ್ತಮವಾಗಿದೆ. ಎಲ್ಲ ಹಂತದಲ್ಲೂ ಉತ್ತಮ ಫ‌ಲಿತಾಂಶವನ್ನು ಕಂಪೆನಿಯ ಈ ಯುನಿಟ್‌ ನೀಡಿದೆ. ಲಾಭ 1416 ಕೋಟಿ ರೂ. ಆಗಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next