ಹೊಸದಿಲ್ಲಿ: ಟಾಟಾ ಮೋಟಾರ್ ಶೀಘ್ರದಲ್ಲೇ ಭಾರತದಲ್ಲಿ ‘ನ್ಯಾನೋ’ ಉತ್ಪಾದನೆ ನಿಲ್ಲಿಸಲಿದೆ! ಹೌದು, ಮಾರುಕಟ್ಟೆಯಲ್ಲಿ ಬೇಡಿಕೆಯೇ ಕಡಿಮೆಯಾದರೆ ಯಾರು ತಾನೇ ನಷ್ಟ ಮಾಡಿಕೊಂಡು ಉತ್ಪಾದನೆಗೆ ಮುಂದಾಗಬೇಕಲ್ಲವೇ? ಸಾಮಾನ್ಯರಲ್ಲಿ ಕಾರು ಕೊಳ್ಳುವ ಕನಸನ್ನು ಈಡೇರಿಸುವ ಉದ್ದೇಶದೊಂದಿಗೆ ಅತಿ ಕಡಿಮೆ ಬೆಲೆಯಲ್ಲಿ ‘ನ್ಯಾನೋ’ ಕಾರು ಪರಿಚಯಿಸಿದ್ದ ಟಾಟಾ ಮೋಟಾರ್ ಈಗ ಪುಟಾಣಿ ಕಾರಿನ ಮೇಲೆ ಮತ್ತೆ ಹೂಡಿಕೆ ಮಾಡದಿರುವ ನಿರ್ಧಾರಕ್ಕೆ ಬಂದಿದೆ. ಪ್ರಾದೇಶಿಕ ಮಾರುಕಟ್ಟೆಯಲ್ಲಿ ಬೇಡಿಕೆ ಕಳೆದುಕೊಳ್ಳುತ್ತಿರುವ ಕಾರಣ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹಿಂದೂ ಬ್ಯುಸಿನೆಸ್ ಲೈನ್ ವರದಿ ಮಾಡಿದೆ. ಆದರೆ ರಫ್ತ್ತು ಮಾರುಕಟ್ಟೆಗಳಿಗೆ ಬೇಡಿಕೆ ಇರುವ ತನಕ ರಫ್ತ್ತು ಮಾಡಲಿದೆ ಎಂದು ಹೇಳಲಾಗಿದೆ.
ರತನ್ ಟಾಟಾ ಅವರ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಒಂದಾಗಿದ್ದ ನ್ಯಾನೋ ಆರಂಭದಲ್ಲಿ ಪ್ರಾದೇಶಿಕ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡಿತ್ತು. 2008ರಲ್ಲಿ ಒಂದು ಲಕ್ಷ ರೂ.ಗೆ ಪೂರೈಕೆ ಮಾಡುವ ಮೂಲಕ ವಿಶ್ವದ ಆಟೋಮೊಬೈಲ್ ಕ್ಷೇತ್ರದಲ್ಲೇ ಸಂಚಲನ ಮೂಡಿಸಿತ್ತು. ಸಾವಿರಾರು ಮಂದಿ ಜೀವನದಲ್ಲಿ ಒಂದು ಕಾರುಕೊಂಡಿದ್ದೇವೆ ಎಂಬ ಖುಷಿಗೂ ಟಾಟಾ ಕಾರಣರಾಗಿದ್ದರು.
14,150: 2015-16ರಲ್ಲಿ ಮಾರಾಟವಾದ ಕಾರುಗಳು
481 : 2017ರಲ್ಲಿ ಮಾರಾಟವಾದ ಕಾರುಗಳು
595 : 2015-16ರಲ್ಲಿ ರಫ್ತ್ತು ಮಾಡಿದ್ದು