Advertisement

ಟಾಟಾಏಸ್ –ಟ್ರ್ಯಾಕ್ಟರ್ ಢಿಕ್ಕಿ: ಮಹಿಳೆ ಸಾವು; 22 ಮಂದಿಗೆ ಗಾಯ

06:06 PM Apr 12, 2022 | Shwetha M |

ಸೊರಬ: ಟಾಟಾಏಸ್ ಹಾಗೂ ಟ್ರ್ಯಾಕ್ಟರ್ ಢಿಕ್ಕಿಯಾಗಿ ಮಹಿಳೆಯೊರ್ವರು ಮೃತಪಟ್ಟು, 22 ಜನ ಗಾಯಗೊಂಡಿರುವ ಘಟನೆ ತಾಲೂಕಿನ ಕೊಡಕಣಿ ಗ್ರಾಮದ ಸಮೀಪ ಸೋಮವಾರ ತಡರಾತ್ರಿ ನಡೆದಿದೆ.

Advertisement

ಶಿರಸಿಯ ಗಣೇಶ ನಗರ ನಿವಾಸಿ ಸಾವಿತ್ರಿಬಾಳು ಗೋಸಾವಿ (58) ಮೃತ ದುರ್ದೈವಿ.

ಶಿರಸಿಯಿಂದ ಹಿರೇಕೆರೂರಿಗೆ ಚಲಿಸುತ್ತಿದ್ದ ಟಾಟಾಏಸ್ ವಾಹನ ಶಿರಾಳಕೊಪ್ಪದಿಂದ ಸೊರಬಕ್ಕೆ ಆಗಮಿಸುತ್ತಿದ್ದ ವೇಳೆ ಟ್ರ್ಯಾಕ್ಟರ್ ಗೆ ಢಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಸಾವಿತ್ರಿ ಬಾಳು ಗೋಸಾವಿ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಶಿರಾಳಕೊಪ್ಪ ಹಾಗೂ ಶಿಕಾರಿಪುರ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next