Advertisement

ಘಮ ಘಮ ಮಸಾಲೆ, ಖಾಲಿ ದೋಸೆ ಹೋಟೆಲ್‌

02:27 PM May 14, 2018 | Harsha Rao |

ಬಿಸಿ ಬಿಸಿ ತುಪ್ಪದ ಕಾಲಿ, ಸ್ಪೆಷಲ್‌ ಮಸಾಲೆ ದೋಸೆ ಬೇಕು, ರುಚಿಯಲ್ಲಿ ವೈವಿಧ್ಯತೆ ಇರಬೇಕು, ಮನೆಯಲ್ಲಿ ಮಾಡಿದಂತೆ ಇರಬೇಕು ಹೀಗೆ ಬೇಕುಗಳ ಪಟ್ಟಿ ಇದ್ದರೆ. ಬೆಂಗಳೂರಿನ ಊರ್ವಶಿ ಸರ್ಕಲ್‌ನಲ್ಲಿ ನಿಲ್ಲಿ.  ತುಪ್ಪದ ಪರಿಮಳ ಮೂಗಿಗೆ ಅಡರುತ್ತದೆ. ಅದನ್ನು ಅರಸುತ್ತಾ ಮುಂದೆ ಹೋದರೆ ಹಾಗೇ ಕೊಳದ ಮಠದ ರಸ್ತೆಯ ಕಾರ್ನರ್‌ನಲ್ಲಿ ಹೋಗಿ ನಿಲ್ಲುತ್ತೀರಿ. ಅಲ್ಲಿದೆ ಈ ನಂದೀಶ್ವರ ಲಂಚ್‌ಹೊàಂ.  

Advertisement

ನೀವು ಹೋಟೆಲ್‌ ಮುಂದೆ ನಿಂತಾಗ ಕಾಡುವ ಅನುಮಾನ ಒಂದೇ. 

“ಅರೆ, ಮುಖ್ಯ ರಸ್ತೆಯ ಪಕ್ಕದಲ್ಲೇ ಹೋಟೆಲ್‌ ಇದೆ. ಅಂದ ಮೇಲೆ, ಇಲ್ಲಿ ಸಿಗುವ ತಿಂಡಿಯಲ್ಲಿ ಧೂಳು ಗೀಳು ಇರಬಹುದೇ ?’ ಖಂಡಿತ ಇಲ್ಲ.  ಒಳಗೆ ಹೊಕ್ಕು ನೋಡಿ. ಎಲ್ಲವೂ ಮಿಸ್ಟರ್‌ ಕ್ಲೀನ್‌. 

 ಬೆಂಗಳೂರಲ್ಲಿ ದರ್ಶನಿಗಳು ಹೆಚ್ಚಾಗಿರುವುದರಿಂದ ನಿಂತು ತಿನ್ನುವುದು ಅನಿವಾರ್ಯ.  ಆದರೆ ಈ ಪುಟ್ಟ ಹೋಟೆಲ್‌ನಲ್ಲಿ ಕುಳಿತು ತಿನ್ನುವ ವ್ಯವಸ್ಥೆ ಇದೆ.  

ಇಲ್ಲಿನ ವಿಶೇಷ ಎಂದರೆ ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟ, ಮತ್ತೆ ಸಂಜೆ ತಿಂಡಿ. ಮೂರು ಹೊತ್ತೂ ಹತ್ತಾರು ರೀತಿಯ ರುಚಿ, ರುಚಿಯಾದ ಥರ ಥರ ಖಾದ್ಯಗಳು ಸಿಗುತ್ತವೆ.  ಕ್ಯಾಷಿಯರ್‌ ಪಕ್ಕ ತಿಂಡಿಗಳ ಪಟ್ಟಿ ಇರುತ್ತದೆ.  ನೀವು ದೋಸೆ ಕೊಡಿ ಅಂದರೆ ಸಾಕು, ಅವತ್ತಿನ ಸ್ಪೆಷಲ್‌ ಏನು ಅನ್ನೋದರ ಬಗ್ಗೆ ಬಹಳ ಪ್ರೀತಿಯಿಂದ ಮಾಹಿತಿ ಕೊಟ್ಟು ನಾಲಿಗೆಯಲ್ಲಿ ನೀರು ಬರಿಸುತ್ತಾರೆ.  ಈ ಹೋಟೆಲ್‌ನ ಇನ್ನೊಂದು ವಿಶೇಷ ಎಂದರೆ ಇಲ್ಲಿ ಚಿಲ್ಲರೆ ಸಮಸ್ಯೆ ಇಲ್ಲ. ಅಕಸ್ಮಾತ್‌ ಎದುರಾದರೆ ಚಾಕೊಲೇಟ್‌, ಬರ್ಫಿ ಕೊಡೋದಿಲ್ಲ. ಬದಲಿಗೆ ಕಾಫಿ ಕೊಡುತ್ತಾರೆ.   

Advertisement

 ಹೋಟೆಲ್‌ ಅನ್ನು ಶುರು ಮಾಡಿದ್ದು ಕುಂದಾಪುರದ ಮೂಲದ ಐ.ಎನ್‌. ಕೆ. ಕೃಷ್ಣ ಮಧ್ಯಸ್ಥ. ದೇಶಕ್ಕೆ ಸ್ವಾತಂತ್ರÂ ಸಿಗುವ 6 ತಿಂಗಳ ಮೊದಲು ಈ ಹೋಟೆಲ್‌ ಶುರುಮಾಡಿದರು. ಹೆಚ್ಚುಕಮ್ಮಿ 70 ವರ್ಷದಿಂದ ಹೋಟೆಲ್‌ ನಡೆಸುತ್ತಿದ್ದು, ಈಗ ಹೋಟೆಲ್‌ನ ಜವಾಬ್ದಾರಿಯನ್ನು ಮಗ ಹರೀಶ್‌ ವಹಿಸಿಕೊಂಡಿದ್ದಾರೆ. 

“ನಮ್ಮ ತಂದೆ ಹೋಟೆಲ್‌ ಆರಂಭ ಮಾಡಿದಾಗ ಶುಚಿ, ರುಚಿ, ಬೆಲೆ ಈ ಮೂರಕ್ಕೂ ಮಹತ್ವ ಕೊಟ್ಟಿದ್ದರು. ನಾನು ಕೂಡ  ಅದನ್ನು ಮುಂದುವರಿಸಿಕೊಂಡು ಬರುತ್ತಿದ್ದೇನೆ. ಹಾಗಾಗಿ, ಜನ ಹುಡುಕಿಕೊಂಡು ನಮ್ಮ ಹೋಟೆಲ್‌ಗೆ ಬರುತ್ತಿದ್ದಾರೆ ಎನ್ನುತ್ತಾರೆ ಹರೀಶ್‌.

ಟೊಮೆಟೋ ಬಾತ್‌ ಇದೆಯÇÉ; ಬಹುಶಃ ಇಷ್ಟೊಂದು ರುಚಿ, ರುಚಿಯಾದ ರೈಸ್‌ಬಾತ್‌ ಬೇರೆ ಸಿಗೋದು ಕಷ್ಟ. ಅದರ ಜೊತೆಗೆ ಕೊಡುವ ಹುರಿಗಡಲೆ, ಕೊಬ್ಬರಿ, ಕಡಲೇಬೀಜ ಮಿಶ್ರಿತ ಚಟ್ನಿ ಸೂಪರ್‌.  ಇದಲ್ಲದೇ ಪೂರಿ-ಸಾಗು, ವಾವ್‌. ಪೂರಿ ಜೊತೆ ಸಿಗುವ ತರಕಾರಿ ಸಾಗುವಿನ ಖದರೇ ಬೇರೆ. ಉದ್ದಿನವಡೆ, ಬೋಂಡಾ ಮಾಮೂಲಿ. 
  ಮುಖ್ಯವಾಗಿ ಹೇಳಬೇಕಾದುದು ಇಲ್ಲಿನ ಬಿಸಿ ಬಿಸಿ ತುಪ್ಪದ ದೋಸೆ ಬಹಳ ಫೇಮಸ್ಸು. ಎಕ್ಸ$r$Åಮೈಲೇಜ್‌ ಅಂತ ಕೇಳಿದರಂತೂ ತುಪ್ಪದ ಮಸಾಲೆ ದೋಸೆ ಸಿಗುತ್ತದೆ. ತುಪ್ಪದ ದೋಸೆಗೆ ಚಟ್ನಿ ಯೊಂದಿಗೆ ಬಟಾಣಿ/ತರಕಾರಿ ಸಾಗು ರುಚಿಯನ್ನು ಹೆಚ್ಚಿಸುತ್ತದೆ. ಇಲ್ಲಿ ದೋಸೆ ವಿಶೇಷ ಎಂದರೆ ರೋಸ್ಟ್‌ ಆಗಿರುವುದು.  
 ಇವಿಷ್ಟೇ ಅಲ್ಲ, ಇಲ್ಲಿ ಮಸಾಲೆ ವಡೆ, ಬೋಂಡಾ, ಬಜ್ಜಿ ಕೂಡ ಇಲ್ಲಿ ರುಚಿಕಟ್ಟೆ. 

 ಮಧ್ಯಾಹ್ನ 12.30ಕ್ಕೆ ಎಲ್ಲ ತಿಂಡಿಗಳು ಬಂದ್‌. ಬರೀ ಅನ್ನ ರಸಂ.  ಹಬೆಯಾಡುವ ತಿಳಿಸಾರು, ಅನ್ನ, ಪಲ್ಯ, ಹಪ್ಪಳ ಮೃಷ್ಟಾನ್ನ ಭೋಜನವೇ. ಏಕೆಂದರೆ ಇದರ ರುಚಿ ಹಾಗಿರುತ್ತದೆ. ಇದರ ಜೊತೆಗೆ ಮೊಸರನ್ನ, ಚಿತ್ರಾನ್ನ, ಬೆಣ್ಣೆ ಮುರುಕು ಸಿಗುತ್ತದೆ.  ಮಿಕ್ಚರ್‌ ಕೇಳಿ ಕೊಳ್ಳವುದನ್ನು ಮರೆಯಬೇಡಿ. 

 ಸಂಜೆಯ ವೇಳೆ ಬಿಸಿಬಿಸಿ ಇಡ್ಲಿ, ರವೆ ಇಡ್ಲಿ, ಸ್ಪೆಷಲ್‌ ದೋಸೆ ಅಂದರೆ ತುಪ್ಪದ ದೋಸೆ.  ಬಿಸಿ ಬಿಸಿ ಬಜ್ಜಿ ತಿನ್ನಲೆಂದೇ ಪರ್ಮನೆಂಟ್‌ ಗ್ರಾಹಕರು ಬರುತ್ತಾರೆ.  ಟೊಮೆಟೊ, ತುಂಡು ಕೊಬ್ಬರಿಯ ರವೆ ಇಡ್ಲಿà ಬಿಸಿಬಿಸಿಯಾಗೇ ಸಿಗುತ್ತದೆ. ಇದಕ್ಕೆ ಸೂಪರ್‌ ಕಾಂಬಿನೇಷನ್‌ ಬಟಾಣಿ ಸಾಗು. ಅದಕ್ಕೆ ಕಡಲೇ ಚಟ್ನಿ ಸೇರಿಸಿ ತಿಂದು ನೋಡಿ. 

ರಾಜಕಾರಣಿಗಳು, ಕಿರುತೆರೆ ಕಲಾವಿದರಿಗೆ ಇದು ಫೇವರೆಟ್‌ ಅಡ್ಡ. ಬೆಂಗಳೂರಿಗೆ ಬಂದು, ಲಾಲ್‌ಬಾಗ್‌ ರೌಂಡ್‌ಗೆ ಬಂದಾಗ  ನಂದೀಶ್ವರನ ಲಂಚ್‌ ಹೋಂಗೆ ಭೇಟಿ ನೀಡಲು ಮರೆಯಬೇಡಿ. ನೆನಪಿರಲಿ, ಈ ಹೋಟೆಲ್‌ ಬೆಳಗ್ಗೆ 7ಕ್ಕೆ ಶುರು. ರಾತ್ರಿ 8ಕ್ಕೆ ಕ್ಲೋಸ್‌.  ಭಾನುವಾರ ರಜೆ. 

–  ಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next