Advertisement

ಮಾರಿಗುಡಿಯ ಮಲೆನಾಡ ರುಚಿ

08:58 PM Sep 27, 2019 | Lakshmi GovindaRaju |

ದಕ್ಷಿಣ ಭಾರತದ ಶಕ್ತಿ ಪೀಠಗಳಲ್ಲಿ ಒಂದು, ಶಿರಸಿಯ ಮಾರಿಕಾಂಬೆ. ನಂಬಿದ ಭಕ್ತರನ್ನು ಕೈ ಹಿಡಿಯುವ ಕಾಷ್ಠದೇವಿ. ನಾಲ್ಕು ನೂರು ವರ್ಷಗಳ ಇತಿಹಾಸ ಇರುವ ಈ ದೇಗುಲದಲ್ಲಿ, ಎಂಟು ಅಡಿ ಎತ್ತರದ ದೇವಿಯ ಮೂರ್ತಿ ಇದೆ. 1991ರಿಂದ ಇಲ್ಲಿ ಅನ್ನಸಂತರ್ಪಣೆ ನಡೆಯುತ್ತಿದ್ದು, ಅಮ್ಮನ ಸನ್ನಿಧಾನದ ಭೋಜನ, ಮಲೆನಾಡು ಶೈಲಿಯಿಂದ ಬಲು ಜನಪ್ರಿಯ…

Advertisement

ಪ್ರತಿನಿತ್ಯ ಇಲ್ಲಿ 4 ಸಾವಿರಕ್ಕೂ ಅಧಿಕ ಭಕ್ತರು: ಭೋಜನ ಸವಿಯುತ್ತಾರೆ. ಶುಕ್ರವಾರ, ಮಂಗಳವಾರ, ಶರನ್ನವರಾತ್ರಿ, ಶ್ರಾವಣ ಮಾಸ, ಕಾರ್ತೀಕ ಮಾಸದಲ್ಲಿ ಭಕ್ತರ ಸಂಖ್ಯೆ ಹೆಚ್ಚುತ್ತದೆ. ಡಿಸೆಂಬರ್‌ನಲ್ಲಿ ಶಾಲಾ ಶೈಕ್ಷಣಿಕ ಪ್ರವಾಸದ ಮಕ್ಕಳು, ಶಬರಿಮಲೈ ಭಕ್ತರು ಆಗಮಿಸುವುದರಿಂದ, ಭೋಜನಕ್ಕೆ ಸಾಲುಗಟ್ಟುತ್ತದೆ.

ಅಡುಗೆ ಮನೆಯೊಳಗೆ…: 4 ಸಣ್ಣ ಬಾಯ್ಲರ್‌ಗಳಿಂದ ನಿತ್ಯದ ಅಡುಗೆ ಸಿದ್ಧಗೊಳ್ಳುತ್ತದೆ. ಸ್ವತ್ಛತೆಗೆ ಹೆಚ್ಚು ಆದ್ಯತೆ ನೀಡಲಾಗಿದೆ. ನಾಲ್ವರು ಅಡುಗೆ ಭಟ್ಟರು, 25 ಸಹಾಯಕ ರಿಂದ ರುಚಿಕರ ಅಡುಗೆ ತಯಾರಾಗುತ್ತದೆ.

ಭಕ್ಷ್ಯ ಸಮಾಚಾರ: ಉಪ್ಪು, ಉಪ್ಪಿನಕಾಯಿ, ಪಲ್ಯ, ಅಕ್ಕಿ- ಬೆಲ್ಲದ ಸ್ವಾದಿಷ್ಟ ಪಾಯಸ, ಅನ್ನ, ಸಾಂಬಾರ್‌, ತಿಳಿಸಾರು, ಮಜ್ಜಿಗೆ.

ಹೆಚ್ಚು ಭಕ್ತರಿದ್ದರೆ, ಬಫೆ…: ಏಕಕಾಲದಲ್ಲಿ 450ಕ್ಕೂ ಅಧಿಕ ಭಕ್ತರು ಕುಳಿತು ಊಟ ಮಾಡಬಹುದು. ಹೆಚ್ಚು ಭಕ್ತರಿದ್ದರೆ, ಬಫೆಯಲ್ಲೂ ಪ್ರಸಾದ ಭೋಜನದ ವ್ಯವಸ್ಥೆ ಇರುತ್ತದೆ. ಸ್ಟೀಲ್‌ ತಟ್ಟೆಯಲ್ಲಿ ಊಟ.

Advertisement

ಭಕ್ತಕೋಟಿ ನಿಧಿ: ದೇವಸ್ಥಾನದ ಆದಾಯದಲ್ಲಿ ಮಾತ್ರವಲ್ಲದೇ, ಇಲ್ಲಿ ಭಕ್ತರೂ ಅನ್ನದಾನದ ಸೇವೆಗೆ ಕೈಜೋಡಿಸುತ್ತಾರೆ. ಜನ್ಮ ದಿನ, ಹಿರಿಯರ ನೆನಪಿನಲ್ಲಿ ಭೋಜನ ನಿಧಿಗೆ ನೆರವಾಗುವ ಪರಂಪರೆಯೂ ಇಲ್ಲಿದೆ.

ಹೆಚ್ಚು ಬಳಕೆಯಾಗುವ ತರಕಾರಿ: ಕ್ಯಾಬೇಜ್‌, ಬದನೆಕಾಯಿ, ನವಿಲುಕೋಸು, ಅಲೂಗಡ್ಡೆ, ಬೆಂಡೆಕಾಯಿ

ಊಟದ ಸಮಯ: ಮಧ್ಯಾಹ್ನ 1ರಿಂದ 3 ಗಂಟೆ

* ರಾಘವೇಂದ್ರ ಬೆಟ್ಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next