Advertisement

ಟಾಸ್ಕ್ ನೆಪ: 1.60 ಲ.ರೂ. ವಂಚನೆ

12:34 AM Jul 01, 2023 | Team Udayavani |

ಮಂಗಳೂರು: ಗೂಗಲ್‌ ರಿವ್ಯೂ ಟಾಸ್ಕ್ ನೆಪದಲ್ಲಿ 1.60 ಲಕ್ಷ ರೂ. ವಂಚಿಸಿರುವ ಬಗ್ಗೆ ನಗರದ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ದೂರುದಾರರಿಗೆ ಜೂ. 26ರಂದು ಬೆಳಗ್ಗೆ ಅಪರಿಚಿತ ವ್ಯಕ್ತಿ ವಾಟ್ಸ್‌ ಆ್ಯಪ್‌ ಸಂದೇಶ ಹಾಕಿ ಆನ್‌ಲೈನ್‌ ಗೂಗಲ… ರಿವ್ಯೂ ಟಾಸ್ಕ್ ಕೆಲಸ ಮಾಡಿದರೆ ಕಮಿಷನ್‌ ನೀಡುವುದಾಗಿ ತಿಳಿಸಿ ಲಿಂಕ್‌ ಕಳುಹಿಸಿದ್ದ. ಬಳಿಕ ಗ್ರೂಪ್‌ನಲ್ಲಿ ಗೂಗಲ… ರಿವ್ಯೂ ಟಾಸ್ಕ್ಗಳನ್ನು ಕಳುಹಿಸಿದ್ದ. ದೂರುದಾರರು 10 ಟಾಸ್ಕ್ಗಳನ್ನು ಪೂರ್ಣಗೊಳಿಸಿದ್ದು ಒಂದು ಟಾಸ್ಕ್ಗೆ 25 ರೂ.ನಂತೆ ಒಟ್ಟು 250 ರೂ.ಗಳನ್ನು ದೂರುದಾರರ ಖಾತೆಗೆ ಅಪರಿಚಿತ ಪಾವತಿಸಿದ್ದ.

ಅನಂತರ ಬೇರೆ ಬೇರೆ ರೀತಿಯ ಗೂಗಲ್‌ ರಿವ್ಯೂ ಟಾಸ್ಕ್ಗಳನ್ನು ಕಳುಹಿಸಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಕಮಿಷನ್‌ ನೀಡುವುದಾಗಿ ತಿಳಿಸಿದ. ಅದನ್ನು ನಂಬಿದ ದೂರುದಾರರು ಹಲವು ಹಂತಗಳಲ್ಲಿ ಒಟ್ಟು 1.60 ಲ.ರೂ. ಪಾವತಿ ಮಾಡಿದ್ದಾರೆ.

ಆದರೆ ಅವರಿಗೆ ಯಾವುದೇ ಕಮಿಷನ್‌ ಹಣ ನೀಡದೆ ಮೋಸ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next