Advertisement

ಡಿಸಿ ಮನ್ನಾ ಅರ್ಜಿ ತನಿಖೆಗೆ ಟಾಸ್ಕ್ ಫೋರ್ಸ್: ತಹಶೀಲ್ದಾರ್‌

02:18 AM Jun 30, 2019 | sudhir |

ಬೆಳ್ತಂಗಡಿ: ತಾಲೂಕಿನಾದ್ಯಂತ 94ಸಿಯಲ್ಲಿ ಬಡ ಫಲಾನುಭವಿಗಳ ಅರ್ಜಿಗಳೇ ಹೆಚ್ಚು ತಿರಸ್ಕೃತಗೊಂಡಿದ್ದು, ಅರ್ಹರನ್ನು ಗುರುತಿಸಿ ಹಕ್ಕುಪತ್ರ ನೀಡಿ ಎಂದು ತಾ.ಪಂ. ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಗ್ರಹಿಸಿದರು.

Advertisement

ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ ಅಧ್ಯಕ್ಷತೆ ಯಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆ ಯಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧ ಪಟ್ಟ ವಿಷಯಗಳ ಕುರಿತು ಚರ್ಚೆಗಳು ನಡೆದವು. ಕಲ್ಮಂಜದಲ್ಲಿ 23 ಎಕ್ರೆ ಡಿಸಿ ಮನ್ನಾ ಜಾಗ ಪರಿಶೀಲಿಸಿ ಗಡಿಗುರುತು ಮಾಡಿಕೊಡುವಂತೆ ಸದಸ್ಯ ಶಶಿಧರ ಪ್ರಸ್ತಾವಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್‌ ಡಿಸಿ ಮನ್ನಾ ಜಾಗಕ್ಕೆ ಸಂಬಂಧಪಟ್ಟಂತೆ 398 ಅರ್ಜಿಗಳು ಬಂದಿವೆ. ತನಿಖೆಗಾಗಿ ಟಾಸ್ಕ್ಫೋರ್ಸ್‌ ರಚಿಸಲಾಗಿದೆ ಎಂದು ತಿಳಿಸಿದರು.

94ಸಿ ಯೋಜನೆ ದುರುಪಯೋಗ ಬಗ್ಗೆ ಚರ್ಚೆ ನಡೆಯಿತು. ಪ್ರಾಮಾ ಣಿಕವಾಗಿ ಅರ್ಜಿ ಸಲ್ಲಿಸಿದವರಿಗೆ ಹಕ್ಕುಪತ್ರ ನೀಡಲು ಸದಾ ಸಿದ್ಧ ಸಮಸ್ಯೆಯಿದ್ದಲ್ಲಿ ಖುದ್ದಾಗಿ ಜಾಗಕ್ಕೆ ತೆರಳಿ ಪರಿಶೀಲಿಸುತ್ತಿದ್ದೇನೆ ಎಂದು ತಹಶೀಲ್ದಾರ್‌ ತಿಳಿಸಿದರು.

ಅಕ್ರಮ ಮದ್ಯಕ್ಕೆ ಇಲಾಖೆ ಕುಮ್ಮಕ್ಕು

ತಾಲೂಕಿನಾದ್ಯಂತ ಮದ್ಯ ಅಕ್ರಮ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಕೆಲವು ವೈನ್‌ಶಾಪ್‌ ಮಾಲಕರೇ ಗೂಡಂಗಡಿಗಳಿಗೆ ಮದ್ಯ ವಿತರಿಸುತ್ತಿದ್ದಾರೆ. ಅಬಕಾರಿ ಇಲಾಖೆ ಕಣ್ಮುಚ್ಚಿ ಕುಳಿತಿದೆ ಎಂದು ಆರೋಪ ಕೇಳಿಬಂತು. ತಾ.ಪಂ. ಸದಸ್ಯ ರೆಲ್ಲರೂ ಅಬಕಾರಿ ಇಲಾಖೆ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡರು.

Advertisement

ಮಚ್ಚಿನ ಗ್ರಾಮದಲ್ಲಿ ವ್ಯಾಪಕ ವಾಗಿ ಕಳ್ಳಭಟ್ಟಿ ಸಾರಾಯಿ ವ್ಯಾಪಾರ ನಡೆಯುತ್ತಿದ್ದು, ಮಹಿಳೆಯರಿಂದ ಸಾಕಷ್ಟು ದೂರುಗಳಿವೆ ಎಂದು ಸದಸ್ಯೆಯೊಬ್ಬರು ಆರೋಪಿಸಿದರು. ಇತರ ಸದಸ್ಯರೂ ಧ್ವನಿಗೂಡಿಸಿದರು.

ಕಂದಾಯ ಇಲಾಖೆಯಲ್ಲಿ ಕೆಲವು ಸಂದರ್ಭ ಹಣ ಸಂಗ್ರಹಿಸಿ ರಾಷ್ಟ್ರೀಯ, ಇನ್ನಿತರ ಕಾರ್ಯಕ್ರಮಗಳಿಗೆ ವಿನಿಯೋಗಿಸ ಲಾಗುತ್ತಿದೆ. ಆದರೆ ಅಬಕಾರಿಯವರು ಹಣ ಸಂಗ್ರಹಿಸಿ ಏನು ಕಾರ್ಯಕ್ರಮ ಮಾಡುತ್ತಿದ್ದೀರಿ. ನಾಳೆ ಸಂಜೆಯೊಳಗೆ ಕಾರ್ಯವೈಖರಿ ಕುರಿತು ವರದಿ ನೀಡಬೇಕು ಎಂದು ತಾ.ಪಂ. ಇಒ ಕೆ.ಇ. ಜಯರಾಮ್‌ ಅಬಕಾರಿ ಅಧಿಕಾರಿಗೆ ಸೂಚಿಸಿದರು.

ತಂತಿ ಬದಲಾವಣೆಗಿಲ್ಲ ಕ್ರಮ

ಕಕ್ಕಿಂಜೆ, ನೆರಿಯ ಪ್ರದೇಶದಲ್ಲಿ ಹಳೆಯ ವಿದ್ಯುತ್‌ ತಂತಿ ಬದಲಾವಣೆ ಬಗ್ಗೆ ಹಲವು ಬಾರಿ ಪ್ರಸ್ತಾವ ಸಲ್ಲಿಸಿದರೂ ಕ್ರಮ ಕೈಗೊಳ್ಳ ಲಿಲ್ಲ ಎಂದು ಸದಸ್ಯ ಕೊರಗಪ್ಪ ಗೌಡ ಆರೋಪಿಸಿದಾಗ ಈಗಾಗಲೇ 30 ಲಕ್ಷ ರೂ. ಪ್ರಸ್ತಾವನೆ ಕಳುಹಿಸಲಾಗಿದ್ದು, ಇದಕ್ಕೆ ಮಂಜುರಾತಿ ದೊರಕಿದೆ. ಟೆಂಡರ್‌ ಪ್ರಕ್ರಿಯೆ ಶೀಘ್ರವೇ ಕರೆಯಲಾಗುವುದು. ಕುದುರೆಮುಖ ರಾಷ್ಟ್ರೀಯ ಉದ್ಯಾನ ದೊಳಗೆ ದೀನ್‌ದಯಾಳ್‌ ಯೋಜನೆಯಡಿ ಈಗಾಗಗಲೇ 94 ಸಂಪರ್ಕ ನೀಡಲಾಗಿದ್ದು 114 ಬೇಡಿಕೆ ಇದೆ ಮೆಸ್ಕಾಂ ಎಇಇ ಶಿವಶಂಕರ್‌ ತಿಳಿಸಿದರು.

ದುಃಸ್ಥಿತಿಯಲ್ಲಿರುವ ತಣ್ಣೀರುಪಂತ ಸರಕಾರಿ ಶಾಲೆ ತೆರವಿಗೆ 4 ವರ್ಷಗಳಿಂದ ಮನವಿ ನೀಡಿದರೂ ಇಲಾಖೆ ಸ್ಪಂದಿಸುತ್ತಿಲ್ಲ ಎಂದು ಸದಸ್ಯೆ ಕೇಶವತಿ ತಿಳಿಸಿದರು. ಇನ್ನುಳಿದಂತೆ ತಾಲೂಕಿನಲ್ಲಿ 94ಸಿಯಲ್ಲಿ ವಿಳಂಬ, ಒತ್ತುವರಿ ಕೆರೆಗಳ ತೆರವು, ಅಪಾಯಕಾರಿ ಮರಗಳ ತೆರವು, ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಬಿಡುಗಡೆ, ಕೊಕ್ಕಡ ಘನತ್ಯಾಜ್ಯ ಘಟಕದ ಅವ್ಯವಹಾರದ ಕುರಿತು, ಕೊಕ್ಕಡ ಕೆಸಿಡಿಸಿ ಇಲಾಖೆ ಡಿಸಿ ಮನ್ನಾ ಭೂಮಿಯ ಅತಿಕ್ರಮಣ, ಸರಕಾರಿ ಉಪಯೋಗಕ್ಕೆ ಇರುವ ನಿವೇಶನಗಳ ಗಡಿಗುರುತು ಮಾಡುವ ಕುರಿತು ಸರ್ವೇ ಇಲಾಖೆ ನಿರ್ಲಕ್ಷ್ಯ ಮೊದಲಾದ ವಿಷಯಗಳನ್ನು ಸಭೆಯಲ್ಲಿ ಸದಸ್ಯರು ಪ್ರಸ್ತಾವಿಸಿದರು.

ಸಾರ್ವಜನಿಕ ಕೆರೆಗಳ ಜಾಗವನ್ನು ಆರ್‌ಟಿಸಿಯಲ್ಲಿ ನೋಂದಾಯಿಸಬೇಕು ಹಾಗೂ ವೇಣೂರಿನ 8.5 ಎಕ್ರೆ ಜಾಗದ ಅಜಿಲಕೆರೆಯ 1ರಿಂದ 54ರ ವರದಿ ನೀಡುವಂತೆ ಕೇಳಿದರೂ ಇದುವರೆಗೆ ಕ್ರಮ ಕೈಗೊಂಡಿಲ್ಲ ಎಂದು ತಾ.ಪಂ. ಸದಸ್ಯ ವಿಜಯ ಗೌಡ ಆರೋಪಿಸಿದರು. ಇದಕ್ಕೆ ತಹಶೀಲ್ದಾರ್‌ ಉತ್ತರಿಸಿ, ಕೆರೆ ಅಭಿವೃದ್ಧಿ ಹಾಗೂ ಒತ್ತುವರಿ ಬಗ್ಗೆ ಗಂಭೀರವಾಗಿ ಚಿಂತಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇದರ ಮಾಹಿತಿ ನೀಡಲಾಗುವುದು ಎಂದರು.

ಇಲಾಖೆ ಸ್ಪಂದನೆಯಿಲ್ಲ

ಕೆರೆ ಅಭಿವೃದ್ಧಿಗೆ ಗಂಭೀರ ಚಿಂತನೆ

ಸಾರ್ವಜನಿಕ ಕೆರೆಗಳ ಜಾಗವನ್ನು ಆರ್‌ಟಿಸಿಯಲ್ಲಿ ನೋಂದಾಯಿಸಬೇಕು ಹಾಗೂ ವೇಣೂರಿನ 8.5 ಎಕ್ರೆ ಜಾಗದ ಅಜಿಲಕೆರೆಯ 1ರಿಂದ 54ರ ವರದಿ ನೀಡುವಂತೆ ಕೇಳಿದರೂ ಇದುವರೆಗೆ ಕ್ರಮ ಕೈಗೊಂಡಿಲ್ಲ ಎಂದು ತಾ.ಪಂ. ಸದಸ್ಯ ವಿಜಯ ಗೌಡ ಆರೋಪಿಸಿದರು. ಇದಕ್ಕೆ ತಹಶೀಲ್ದಾರ್‌ ಉತ್ತರಿಸಿ, ಕೆರೆ ಅಭಿವೃದ್ಧಿ ಹಾಗೂ ಒತ್ತುವರಿ ಬಗ್ಗೆ ಗಂಭೀರವಾಗಿ ಚಿಂತಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇದರ ಮಾಹಿತಿ ನೀಡಲಾಗುವುದು ಎಂದರು.
Advertisement

Udayavani is now on Telegram. Click here to join our channel and stay updated with the latest news.

Next