ಪಣಜಿ: ತೆಹಲ್ಕಾ ಮ್ಯಾಗಜೀನ್ ಸ್ಥಾಪಕ ಸಂಪಾದಕ ತರುಣ್ ತೇಜ್ ಪಾಲ್ ವಿರುದ್ಧದ ಎಲ್ಲಾ ಲೈಂಗಿಕ ದೌರ್ಜನ್ಯದ ಆರೋಪದಿಂದ ಗೋವಾ ಕೋರ್ಟ್ ಖುಲಾಸೆಗೊಳಿಸಿ ಶುಕ್ರವಾರ(ಮೇ 21) ತೀರ್ಪನ್ನು ಪ್ರಕಟಿಸಿದೆ.
ಇದನ್ನೂ ಓದಿ:ಶೃಂಗೇರಿ ತಾಲೂಕು ಕಚೇರಿಯಲ್ಲೇ ತಹಶೀಲ್ದಾರ್ ಬರ್ತ್ ಡೇ ಸೆಲಬ್ರೇಷನ್: ವಿಡಿಯೋ ವೈರಲ್
2013ರಲ್ಲಿ ಗೋವಾದ ಪಂಚತಾರಾ ಹೋಟೆಲ್ ನಲ್ಲಿ ಕಾನ್ಫರೆನ್ಸ್ ಆಯೋಜಿಸಿದ್ದ ಸಂದರ್ಭದಲ್ಲಿ ಸಹೋದ್ಯೋಗಿಗೆ ತರುಣ್ ತೇಜ್ ಪಾಲ್ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಲಾಗಿತ್ತು. 2017ರಲ್ಲಿ ವಿಚಾರಣಾ ನ್ಯಾಯಾಲಯ ತೇಜ್ ಪಾಲ್ ವಿರುದ್ಧ ಅತ್ಯಾಚಾರ, ಲೈಂಗಿಕ ಕಿರುಕುಳ ಆರೋಪದ ಮೇಲೆ ವಿಚಾರಣೆ ನಡೆಸಿತ್ತು. ಏತನ್ಮಧ್ಯೆ ತೇಜ್ ಪಾಲ್ ಅವರು ಈ ಆರೋಪದ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ನಂತರ ಸುಪ್ರೀಂ ಆದೇಶದಂತೆ ಗೋವಾದಲ್ಲಿಯೇ ವಿಚಾರಣೆ ಮುಂದುವರಿದಿತ್ತು.
ಈ ಸುಳ್ಳು ಆರೋಪದ ಪರಿಣಾಮ ಕಳೆದ ಏಳೂವರೆ ವರ್ಷದಿಂದ ನನ್ನ ಕುಟುಂಬ ಸದಸ್ಯರು ನೋವನ್ನು ಅನುಭವಿಸುವಂತಾಗಿತ್ತು. ಅಲ್ಲದೇ ನಮ್ಮ ವೈಯಕ್ತಿಕ, ವೃತ್ತಿಪರ ಮತ್ತು ಸಾರ್ವಜನಿಕ ಜೀವನವೂ ಕೂಡಾ ಹಾಳಾಗುವಂತಾಯ್ತು ಎಂದು ತರುಣ್ ತೇಜ್ ಪಾಲ್ ಖುಲಾಸೆಗೊಂಡ ನಂತರ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದರು.
ವಿದ್ಯುತ್ ವೈಫಲ್ಯದ ಕಾರಣದಿಂದಾಗಿ ಹೆಚ್ಚುವರಿ ಸೆಷನ್ಸ್ ಕೋರ್ಟ್ ನ್ಯಾಯಾಧೀಶರಾಗಿರುವ ಕ್ಷಮಾ ಜೋಷಿ ಅವರಿಗೆ ತೀರ್ಪು ಪ್ರಕಟಿಸಲು ಸಾಧ್ಯವಾಗಲಿಲ್ಲ. ಹೀಗಾಗಿ, ಮೇ 21ಕ್ಕೆ ತೀರ್ಪು ಪ್ರಕಟಿಸಲಾಗುತ್ತದೆ’ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಫ್ರಾನ್ಸಿಸ್ ತವೊರಾ ತಿಳಿಸಿದ್ದರು.
“ತೌಕ್ತೇ’ ಚಂಡಮಾರುತದ ಹಿನ್ನೆಲೆಯಲ್ಲಿ ಗೋವಾದ ಹಲವು ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಮೂರನೇ ಬಾರಿಗೆ ತೀರ್ಪು ನೀಡುವುದನ್ನು ಮುಂದೂಡಿತ್ತು.