Advertisement

ತರುಣ್ ತೇಜ್‍ ಪಾಲ್ ಪ್ರಕರಣ : ವಿಚಾರಣೆಯನ್ನು ಜುಲೈ 29 ಕ್ಕೆ ಮುಂದೂಡಿಕೆ

03:44 PM Jun 24, 2021 | Team Udayavani |

ಪಣಜಿ: ತೆಹೆಲ್ಕಾ ಪತ್ರಿಕೆಯ ಮಾಜಿ ಸಂಪಾದಕ ತರುಣ್ ತೇಜ್‍ ಪಾಲ್ ರವರ ಪ್ರಕರಣದ ವಿಚಾರಣೆ ಮುಂಬಯಿ ಹೈಕೋರ್ಟನಲ್ಲಿ ಗುರುವಾರ ನಡೆದು ಮುಂದಿನ ವಿಚಾರಣೆಯನ್ನು ಜುಲೈ 29 ಕ್ಕೆ ಮುಂದೂಡಲಾಗಿದೆ.

Advertisement

ಮಾಪ್ಸಾ ಸೆಷನ್ಸ ಕೋರ್ಟ ಸಾಕ್ಷಾಧಾರಗಳ ಕೊರತೆಯಿಂದಾಗಿ ತೇಜ್‍ ಪಾಲ್ ನಿರ್ದೋಷಿ ಎಂದು ಇತ್ತೀಚೆಗಷ್ಟೇ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಗೋವಾ ಸರ್ಕಾರವು ಮುಂಬಯಿ ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಗೋವಾ ಸರ್ಕಾರವು ಈ ಪ್ರಕರಣದಲ್ಲಿ 66 ಪುಟಗಳ ಹೊಸ ತಿದ್ಧುಪಡಿ ಅರ್ಜಿಯನ್ನು ನ್ಯಾಯಾಲಯದಲ್ಲಿ ದಾಖಲಿಸಿದೆ. ಈ ತಿದ್ಧುಪಡಿ ಅರ್ಜಿಯ ಇತರ ದಸ್ತಾವೇಜನ್ನು ಅರ್ಜಿದಾರರು ನೀಡಿಲ್ಲ, ಈ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮುಂದಕ್ಕೆ ಗಹಾಕುವಂತೆ ನ್ಯಾಯಾಲಯದಲ್ಲಿ ತೇಜ್‍ ಪಾಲ್ ಪರ ವಕೀಲರು ಮನವಿ ಮಾಡಿದರು.

ಅರ್ಜಿದಾರ ರಾಜ್ಯ ಸರ್ಕಾರದ ಪರ ವಕೀಲ ದೇವಿದಾಸ್ ಪಾಂಗಮ್ ರವರು ಈ ದಸ್ತಾವೇಜುಗಳನ್ನು ಇನ್ನು ಒಂದು ವಾರದಲ್ಲಿ ಸಲ್ಲಿಸುವುದಾಗಿ ಹೇಳಿದರು. ನಂತರ ನ್ಯಾಯಾಲಯವು ಈ ಪ್ರಕರಣದ ವಿಚಾರಣೆಯನ್ನು ಜುಲೈ 29 ಕ್ಕೆ ಮುಂದೂಡಿದೆ.
ಸಹೋದ್ಯೋಗಿ ಪತ್ರಕರ್ತೆಯ ಮೇಲೆ ಲೈಂಗಿಕ ಅತ್ಯಾಚಾರ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಹೆಲ್ಕಾ ಪತ್ರಿಕೆಯ ಮಾಜಿ ಸಂಪಾದಕ ತರುಣ್ ತೇಜ್‍ಪಾಲ್ ರವರನ್ನು ಮಾಪ್ಸಾ ಸೆಷನ್ಸ ಕೋರ್ಟ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಾಧಾರಗಳ ಕೊರತೆಯಿಂದಾಗಿ ತೇಜ್‍ಪಾಲ್‍ರನ್ನು ದೋಷಮುಕ್ತ ಎಂದು ಮೇ 21 ರಂದು ಅಂತಿಮ ತೀರ್ಪು ನೀಡಿತ್ತು.

2013 ರಲ್ಲಿ ಗೋವಾದ ಬಾಂಬೋಲಿಂ ಬಳಿಯಿರುವ ಪಂಚತಾರಾ ಹೋಟೆಲ್‍ವೊಂದರಲ್ಲಿ ಆಯೋಜಿಸಿದ್ದ ಥಿಂಕ್ ಫೆಸ್ಟಿವಲ್ ಕಾರ್ಯಕ್ರಮದ ಸಂದರ್ಭದಲ್ಲಿ ಸಹೋದ್ಯೋಗಿ ಪತ್ರಕರ್ತೆಯ ಮೇಲೆ ತರುಣ್ ತೇಜ್‍ಪಾಲ್ ಬಲಾತ್ಕಾರ ನಡೆಸಿದ್ದರು ಎಂಬ ಆರೋಪವನ್ನು ತೇಜ್‍ಪಾಲ್ ಎದುರಿಸುತ್ತಿದ್ದರು. ಈ ಕುರಿತಂತೆ ಭಾರತೀಯ ದಂಡ ಸಂಹಿತೆ ಖಾಯ್ದೆ ಕಲಂ 376,341,342,354ಅವ,354ಬ, ಕಲಂ ಅಡಿಯಲ್ಲಿ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next