Advertisement

ಪೆಟ್ಟಿಗೆ ಅಂಗಡಿ ತೆರವು ಕಾರ್ಯಾಚರಣೆ

06:02 PM Feb 20, 2020 | Naveen |

ತರೀಕೆರೆ: ಪಟ್ಟಣದ ತಾಲೂಕು ಪಂಚಾಯಿತಿ ಮುಂಭಾಗ, ಸಾರ್ವಜನಿಕ ಆಸ್ಪತ್ರೆ ಮಾರ್ಗದಲ್ಲಿದ್ದ ಮತ್ತು ಬಯಲುರಂಗ ಮಂದಿರದಲ್ಲಿ ಹಾಕಿಕೊಂಡಿದ್ದ ಪೆಟ್ಟಿಗೆ ಅಂಗಡಿ, ದೂಡುವ ಕೈಗಾಡಿಗಳನ್ನು ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಮತ್ತು ಪುರಸಭೆ ಅಧಿಕಾರಿಗಳು ಪೊಲೀಸರ ಸಹಕಾರದೊಂದಿಗೆ ತೆರವುಗೊಳಿಸಿದರು.

Advertisement

ಬುಧವಾರ ಬೆಳಗ್ಗೆ 6 ಗಂಟೆಗೆ ಆರಂಭಗೊಂಡ ಕಾರ್ಯಾಚರಣೆ ಮಧ್ಯಾಹ್ನದ ವರೆಗೂ ನಡೆಯಿತು. ಅಂಗಡಿ ಹಾಕಿಕೊಂಡಿದ್ದ ಮಾಲಿಕರು ಪ್ರತಿಭಟನೆ ನಡೆಸಲು ಮುಂದಾದರು. ಆದರೆ, ವಿರೋಧವನ್ನು ಲೆಕ್ಕಿಸದೆ ತೆರವುಗೊಳಿಸಲಾಯಿತು. ಕೆಲವರು ತಮ್ಮ ಅಂಗಡಿಗಳನ್ನು ತಾವೇ ತೆರವುಗೊಳಿಸಲು ಮುಂದಾದರು.

ವಿರೋಧ ವ್ಯಕ್ತಪಡಿಸಿದವರ ಅಂಗಡಿಗಳನ್ನು ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಲಾಯಿತು. 11 ವರ್ಷಗಳಿಂದಲೂ ಬೀದಿ ಬದಿಯಲ್ಲಿ ಅಂಗಡಿಗಳನ್ನು ಹಾಕಿಕೊಂಡು ಜೀವನಕ್ಕೆ ಆಧಾರ ಮಾಡಿಕೊಂಡಿದ್ದವರು ಅನೇಕರು. ಇವರಲ್ಲಿ ಬಹುತೇಕರು ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರು ಮತ್ತು ಬಡವರು ಎಂಬುದು ಗಮನಾರ್ಹ. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನೀಡಿದ ಲಿಖೀತ ದೂರಿನ ಹಿನ್ನೆಲೆಯಲ್ಲಿ ಅಂಗಡಿಗಳನ್ನು ತೆರವುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಕಾರ್ಯಾಚರಣೆ ಯಲ್ಲಿ ಪುರಸಭೆಯ ಸಿಬ್ಬಂದಿ, ಸ್ಥಳೀಯ ಪೊಲೀಸರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next