ತರೀಕೆರೆ: ಪಟ್ಟಣದ ಶ್ರೀ ಸಾಲುಮರದಮ್ಮ ದೇವಸ್ಥಾನದ ಬಳಿ ಶ್ರೀ ಗಣೇಶೋತ್ಸವದ ದಿನ ಪ್ರತಿಷ್ಠಾಪನೆಗೊಂಡಿದ್ದ ಹಿಂದು ಮಹಾಸಭಾ ಗಣಪತಿ ಮೂರ್ತಿಯನ್ನು ಚಿಕ್ಕೆರೆಯಲ್ಲಿ ವಿಜೃಂಭಣೆಯಿಂದ ವಿಸರ್ಜನೆ ಮಾಡಲಾಯಿತು.
ರಾಷ್ಟ್ರೀಯ ಹೆದ್ದಾರಿ, ಲಿಂಗದಹಳ್ಳಿ ರಸ್ತೆ ಮತ್ತು ಎಂ.ಜಿ.ರಸ್ತೆಯಲ್ಲಿ ಸಾಗಿ ಬಂದ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ಮೆರವಣಿಗೆ ಜೊತೆಯಲ್ಲಿ ಶಾಸಕ ಡಿ.ಎಸ್.ಸುರೇಶ್ ಜಾನಪದ ಕಲಾವಿದರೊಂದಿಗೆ ಹೆಜ್ಜೆ ಹಾಕಿ ನೃತ್ಯ ಮಾಡುವ ಮೂಲಕ ಗಮನ ಸೆಳೆದರು. ಇದರಿಂದ ಹುರುಪು ಪಡೆದ ಯುವ ಸಮೂಹ ಸಹ ಶಾಸಕರ ಜೊತೆ ಹುಚ್ಚೆದ್ದು ಕುಣಿದು ಕುಪ್ಪಳಿಸಿದರು. ಮೆರವಣಿಗೆಯಲ್ಲಿ ಜಾನಪದ ಕಲಾತಂಡ, ಮಹಿಳೆಯರ ವೀರಗಾಸೆ, ಡೊಳ್ಳು ಕುಣಿತದ ತಂಡಗಳು ಭಾಗವಹಿಸಿದ್ದವು.
ಹಿಂದು ಮಹಾಸಭಾ ಸಮಿತಿ ಅದ್ಯಕ್ಷ ಕೆ.ಎಚ್.ಮಹೇಂದ್ರ, ಮಾಜಿ ಎಂಎಡಿಬಿ ಅಧ್ಯಕ್ಷ ಎನ್.ಮಂಜುನಾಥ್, ದಕ್ಷಿಣ ಭಾರತ ಅಖಂಡ ಶಾರೀರಿಕ್ ಪ್ರಮುಖ ರಂಗನಾಥ್, ಭಜರಂಗದಳದ ತಾಲೂಕು ಸಂಚಾಲಯ ಜಗದೀಶ್, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಆರ್.ಆನಂದಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ಎಸ್.ಬಿ.ಆನಂದಪ್ಪ, ಬಿಜೆಪಿ ಕಾರ್ಯದರ್ಶಿಗಳಾದ ಮನೋಜ್‌ಕುಮಾರ್, ಅಜಯ್, ಟಿ.ಜಿ.ಮಂಜುನಾಥ್, ಟಿ.ಜಿ.ಸದಾನಂದ್, ಸತೀಶ್ಚಂದ್ರ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ವಿಜಯ ನಾಯ್ಕ, ಅವಿನಾಶ್, ಮಿಲಿó ಶ್ರೀನಿವಾಸ್, ಟಿ.ಎಂ.ಭೋಜರಾಜ್, ಹಿಂದು ಮಹಾಸಭಾ ಸಮಿತಿ ಪದಾಧಿಕಾರಿಗಳು, ಭಜರಂಗದಳದ ಕಾರ್ಯಕರ್ತರು ಮುಂತಾದವರು ಭಾಗವಹಿಸಿದ್ದರು.