Advertisement
ಆತ ಬಿಹಾರದ ಬೋಧ್‌ಗಯಾ ಸ್ಫೋಟಕ್ಕೆ ಸಂಚು ನಡೆಸಿದ್ದು, ಅಲ್ಲಿಗೆ ಸ್ಫೋಟಕ ಸಾಮಗ್ರಿಗಳನ್ನು ಸಾಗಿಸಿದ್ದ ಹಾಗೂ ರಾಷ್ಟ್ರದ ಹಲವು ಕಡೆಗಳಲ್ಲಿ ಸ್ಫೋಟಗಳನ್ನು ನಡೆಸಲು ಸಂಚು ನಡೆಸಿದ್ದ ಎಂಬ ಆತಂಕಕಾರಿ ಮಾಹಿತಿ ಲಭ್ಯವಾಗಿದೆ.
Related Articles
Advertisement
ಬಟ್ಟೆ ವ್ಯಾಪಾರಿಯಾಗಿ ಗುರುತಿಸಿಕೊಂಡಿದ್ದ ಉಗ್ರ2014ರಲ್ಲಿ ಆರೋಪಿ ಕರ್ನಾಟಕದ ಕೋಲಾರಕ್ಕೆ ಕುಟುಂಬ ಸಮೇತ ಬಂದು, ಖಾಸಗಿ ಕಾರ್ಖಾನೆಯೊಂದರಲ್ಲಿ ನೌಕರಿ ಪಡೆದುಕೊಂಡಿದ್ದ. ಆ ಸಂದರ್ಭದಲ್ಲಿ ಬೇರೆ ಬೇರೆ ಸ್ಥಳಗಳಿಗೆ ವಾಸ್ತವ್ಯ ಬದಲಾಯಿಸಿ, ತನ್ನ ಪೊಲೀಸ್ ಕಣ್ಣಿನಿಂದ ತಪ್ಪಿಸಿಕೊಂಡಿದ್ದ ಆತ, ಇತ್ತೀಚೆಗೆ ರಾಮನಗರದ ಖಾಸಗಿ ಕಾರ್ಖಾನೆ ಮಾಲಿಕನ ಮನೆಯಲ್ಲಿ ಬಾಡಿಗೆ ವಾಸವಿದ್ದ. ತಾನು ಬಟ್ಟೆ ವ್ಯಾಪಾರಿ ಎಂದು ಪರಿಚಯಿಸಿಕೊಂಡಿದ್ದ ಆತ, 50 ಸಾವಿರ ಮುಂಗಡ ಹಣ ನೀಡಿ ಬಾಡಿಗೆ ಮನೆ ಪಡೆಯುವಲ್ಲಿ ಯಶಸ್ವಿಯಾಗಿದ್ದ. ಸೋಮವಾರವಷ್ಟೇ ಮುನೀರ್ ಜೊತೆಗೆ ಮನೆ ಬಾಡಿಗೆಯ ಕರಾರು ಮಾಡಿಕೊಳ್ಳಬೇಕಿತ್ತು ಎನ್ನಲಾಗಿದೆ. ಹಿನ್ನೆಲೆ: 2008 ಮತ್ತು 2013 ರ ಪಂಚಾಯತ್ ಚುನಾವಣೆಯಲ್ಲಿ ಬುದ್ವಾìನ್‌ನಲ್ಲಿ ನ ಮನೆಯನ್ನು ತೃಣಮೂಲ ಕಾಂಗ್ರೆಸ್‌ನ ಕಚೇರಿಯಾಗಿ ಬಳಸಲಾಗಿತ್ತು. ಚೌಧರಿಯವರು, ಶಕೀಲ್ ಆಹಮದ್ ಎಂಬವನಿಗೆ ಮನೆ ಬಾಡಿಗೆ ನೀಡಿದ್ದರು. 2014 ಅಕ್ಟೋಬರ್ 2ರಂದು ಆ ಮನೆಯಿಂದ ಸ್ಫೋಟದ ಸದ್ದು ಕೇಳಿ ಮತ್ತು ಹೊಗೆ ಬರುತ್ತಿರುವುದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಲ್ಲಿದ್ದ ಇಬ್ಬರು ಮಹಿಳೆಯರು ಬಂದೂಕು ತೋರಿಸಿ ಅಲ್ಲಿಗೆ ಧಾವಿಸಿದ ಪೊಲೀಸರನ್ನು ತಡೆದು, ಕಟ್ಟಡವನ್ನೇ ಸ್ಫೋಟಿಸುವುದಾಗಿ ಬೆದರಿಸಿದ್ದರು. ಆ ವೇಳೆಗೆ ಅಲ್ಲಿದ್ದ ಮಹತ್ವದ ದಾಖಲೆಗಳನ್ನು ನಾಶಪಡಿಸಿದ್ದರು. ಆ ಸಂದರ್ಭದಲ್ಲಿ ನಡೆದ ಪೊಲೀಸ್ ಕಾರ್ಯಾಚರಣೆಯಲ್ಲಿ ಶಕೀಲ್ ಆಹಮದ್ ಸ್ಥಳದಲ್ಲೆ ಅಸುನೀಗಿದ್ದರು. ಗಾಯಗೊಂಡಿದ್ದ ಶೋಭನ್ ಮಂಡಲ್ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಪೊಲೀಸರಿಗೆ ಪ್ರತಿರೋಧ ತೋರಿದ್ದ ಶಕೀಲ್ ಆಹಮದ್ ಪತ್ನಿ ಮತ್ತಿನ್ನೊಬ್ಬ ಮಹಿಳೆ ಹಾಗೂ ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ತಪ್ಪಿಸಿಕೊಂಡಿದ್ದು, ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದರು. ಪೊಲೀಸರು ಬಳಿಕ 50ಕ್ಕೂ ಹೆಚ್ಚು ಜೀವಂತ ಬಾಂಬ್‌ಗಳನ್ನು, ಸ್ಫೋಟಕ ತಯಾರಿಕೆಗೆ ಇಟ್ಟಿದ್ದ ಟೈಮರ್ ಗಡಿಯಾರಗಳು, ಸಿಮ್ ಕಾರ್ಡ್ ಮತ್ತಿತರ ಸಲಕರಣೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ರಾಜ್ಯದ ಹಲವು ದೇಗುಲಗಳನ್ನು, ಪ್ರವಾಸಿ ತಾಣಗಳನ್ನು, ಮಸೀದಿಗಳನ್ನು, ಅಣೆಕಟ್ಟೆಗಳನ್ನು ಧ್ವಂಸ ಮಾಡಲು ಈತ ಸಂಚು ರೂಪಿಸಿದ್ದ ಎನ್ನಲಾಗಿದ್ದು, ಇದಕ್ಕೆ ಸಂಬಂಧಿಸಿದ ಚಿತ್ರಗಳು, ನಕ್ಷೆಗಳನ್ನು ಶಂಕಿತ ಉಗ್ರನಿಂದ ವಶಪಡಿಕೊಳ್ಳಲಾಗಿದೆ. ಆಗಸ್ಟ್ 3 (ಶುಕ್ರವಾರ) ಎನ್‌ಐಎ ತಂಡ, ಕೇರಳದಲ್ಲಿ ಇಬ್ಬರು ಉಗ್ರರನ್ನು ಬಿಹಾರದ ಬೋಧ್‌ಗಯಾ ಸ್ಫೋಟ ಸಂಚಿನ ಆರೋಪದಲ್ಲಿ ಬಂಧಿಸಲಾಗಿತ್ತು. ಮುರ್ಷಿದಾಬಾದ್‌ನ ಅಬ್ದುಲ್ ಕರೀಮ್, ಮುಝಾಫರ್ ರೆಹಮಾನ್ ಎಂಬಿಬ್ಬರನ್ನು ಬಂಧಿಸಲಾಗಿತ್ತು. ಬಾಂಗ್ಲಾದೇಶೀಯರಾದ ಆರೋಪಿಗಳು ಬೋಧ್‌ಗಯಾದಲ್ಲಿ ಬಾಂಬ್ ಸ್ಫೋಟಕ್ಕೆ ಸಂಚು ನಡೆಸಿದ್ದರು. ಆ ಇಬ್ಬರೂ ಆರೋಪಿಗಳು ಬೊಮಾ ಮಿಝಾನ್ ಅಲಿಯಾಸ್ ಕೌಸರ್ ಅಲಿಯಾಸ್ ಮುನ್ನಾ ಅಲಿಯಾಸ್ ಬಡಾಭಾಯಿ ಮತ್ತು ಮುಸ್ತಾಫಿಝುರ್ ಅಲಿಯಾಸ್ ತುಹಿನ್ ಎಂಬಿಬ್ಬರು ಬಾಂಗ್ಲಾದೇಶೀ ಭಯೋತ್ಪಾದಕರ ಸಹಚರರೆಂದು ಮೂಲಗಳು ತಿಳಿಸಿವೆ. ಕೌಸರ್ ಎಂಬವನು ಈಗ ರಾಮನಗರದಲ್ಲಿ ಬಂಧಿತನಾಗಿರುವ ಮುನೀರ್ ಎಂಬವನೇ ಎಂಬ ಬಗ್ಗೆ ಅಧಿಕಾರಿಗಳು ಸ್ಪಷ್ಟಪಡಿಸಿಲ್ಲ. ಆದರೆ, ಕೇರಳದಲ್ಲಿ ನಡೆಸಿದ ಕಾರ್ಯಾಚರಣೆ ಬಳಿಕ ರಾಮನಗರದಲ್ಲಿ ಮುನೀರ್ ಬಂಧನವಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.