ಬೆಂಗಳೂರು: ಸರ್ಕಾರ ಅನುಮೋದಿಸಿದ ಪರಿಷ್ಕೃತ ಬಿಬಿಎಂಪಿ ಬಜೆಟ್‌ನಲ್ಲಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ, ಆಡಳಿತ ಪಕ್ಷದ ನಾಯಕರಾದಿಯಾಗಿ ಪ್ರತಿಪಕ್ಷದ ನಾಯಕರನ್ನು ಟಾರ್ಗೆಟ್ ಮಾಡಲಾಗಿದ್ದು, ಇದು ತೀವ್ರ ಅಸಮಾಧಾನಕ್ಕೆ ಎಡೆಮಾಡಿಕೊಟ್ಟಿದೆ. ಪರಿಷ್ಕೃತ ಬಜೆಟ್ನಲ್ಲಿ ಕ್ರಮಸಂಖ್ಯೆ 51ರ ನಂತರ ಬರುವ ಯೋಜನೆಗಳನ್ನು ಸೂಕ್ಷ್ಮವಾಗಿ ಗಮನಿಸಿ ದಾಗ, ನಾಯಕರ ಅನುದಾನಕ್ಕೇ ಕತ್ತರಿ ಹಾಕಿರುವುದು ಕಾಣಬಹು ದು.
ಅದರಲ್ಲೂ ಮುಖ್ಯವಾಗಿ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್ ಪ್ರತಿನಿಧಿಸುವ ಮನೋರಾಯನಪಾಳ್ಯ ವಾರ್ಡ್‌ನ ವಿಶೇಷ ಅಭಿವೃದ್ಧಿ ಕಾಮಗಾರಿಗೆ ನೀಡಲಾಗಿದ್ದ 13 ಕೋಟಿ ರೂ.ಗಳಿಂದ 8 ಕೋಟಿ ರೂ.ಗೆ ಸೀಮಿತಗೊಳಿಸಲಾಗಿದೆ. ಜೆಡಿಎಸ್ ನಾಯಕಿ ನೇತ್ರಾ ನಾರಾಯಣ್ ಅವರು ಪ್ರತಿನಿಧಿಸುವ ಕಾವಲ್‌ಭೈರಸಂದ್ರ ವಾರ್ಡ್‌ನ ವಿಶೇಷ ಅಭಿವೃದ್ಧಿ ಕಾಮಗಾರಿಗೆ ನೀಡಲಾಗಿದ್ದ ಅನುದಾನದಲ್ಲಿ 10 ಕೋಟಿ ರೂ.ಗಳಲ್ಲಿ 5 ಕೋಟಿ ರೂ. ಕಡಿತ ಮಾಡಲಾಗಿದೆ. ಇದರೊಂದಿಗೆ ಆಡಳಿತ ಪಕ್ಷದ ನಾಯಕರಾದ ಮುನೀಂದ್ರ ಕುಮಾರ್ ಅವರ ಜಕ್ಕೂರು ವಾರ್ಡ್‌ಗೆ ನೀಡಲಾಗಿದ್ದ 20 ಕೋಟಿ ಯಲ್ಲಿ 5 ಕೋಟಿ ರೂ. ಕಡಿತ ಮಾಡಲಾಗಿದೆ.
ಬಿಬಿಎಂಪಿಯ 2020-21ನೇ ಸಾಲಿನ ಬಜೆಟ್‌ಗೆ ಸರ್ಕಾರ ಅನುಮೋದನೆ ನೀಡಿದ್ದು, ಒಟ್ಟಾರೆ ಪಾಲಿಕೆ ಸದಸ್ಯರ ಕ್ಷೇತ್ರಾ ಭಿವೃದ್ಧಿ ಅನುದಾನದಲ್ಲಿ 25 ಕೋಟಿ ರೂ. ಕಡಿತಗೊಳಿಸಲಾ ಗಿದೆ. ಈ ಸಂಬಂಧ ಉದಯವಾಣಿ ಯೊಂದಿಗೆ ಮಾತನಾಡಿದ ಮೇಯರ್ ಎಂ.ಗೌತಮ್ ಕುಮಾರ್ ಅವರು, ಈ ಹಿಂದಿನ ಯಾವುದೇ ಸರ್ಕಾರ ಇಷ್ಟು ಶೀಘ್ರವಾಗಿ ಬಜೆಟ್ ಮಂಡನೆ ಮಾಡಿಲ್ಲ. ನಮ್ಮ ಸರ್ಕಾರ ಇಷ್ಟು ಬೇಗ ಅನುಮೋ ದನೆ ನೀಡಿದೆ. ಎಲ್ಲರೊಂದಿಗೆ ಚರ್ಚೆ ಮಾಡಿಯೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿದೆ. ಬೆಂಗಳೂರಿನ ಹೊರ ವಲಯಗಳಲ್ಲಿ 25 ಕೋಟಿ ರೂ. ಹಾಗೂ 10 ಕೋಟಿ ರೂ. ರೀತಿ ಅನುದಾನ ನೀಡಿದ್ದೇವೆ. ಹೀಗಾಗಿ, ಯಾರಿಗೂ ಅಸಮಾಧಾನವಾಗಿಲ್ಲ. ಉತ್ತಮ ಬಜೆಟ್ ಮಂಡಿಸಿದ್ದೇವೆ ಎಂದು ಸಮರ್ಥಿಸಿಕೊಂಡರು.
ಹೇಳಿಕೊಳ್ಳುವಂತಿಲ್ಲ ಬಿಡುವಂತಿಲ್ಲ: ಬಿಬಿಎಂಪಿಯ 2020-21ನೇ ಸಾಲಿನ ಬಜೆಟ್‌ನಲ್ಲಿ ಬಿಜೆಪಿ ಆಡಳಿತದಲ್ಲಿ ಈ ರೀತಿ ಯೋಜನೆ ನೀಡಿದ್ದೆವು ಎಂದು ಹೇಳಿಕೊಳ್ಳುಂತಹ ಯಾವುದೇ ಯೋಜನ ಗಳನ್ನು ಅನುಷ್ಠಾನ ಮಾಡಿಲ್ಲ. ಈ ಮೂಲಕ ಒಂದು ಉತ್ತಮ ಅವಕಾಶವನ್ನು ಕಳೆದುಕೊಂಡಿ ದ್ದೇವೆ ಎನ್ನುವುದು ಬಿಜೆಪಿ ನಾಯಕರ ಅಸಮಾಧಾನ. ಕಳೆದ ನಾಲ್ಕು ವರ್ಷಗಳಿಂದ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರ ನಡೆಸಿರಲಿಲ್ಲ. ಕೊನೆಯ ವರ್ಷದಲ್ಲಿ ಹಾಗೂ ಇಂತಹ ಕೊರೊನಾದಂತಹ ತುರ್ತು ಸಂದರ್ಭದಲ್ಲಿ ಉತ್ತಮ ಯೋಜನೆಗಳನ್ನು ನೀಡುವ ಅವಕಾಶವಿತ್ತು. ಆದರೆ, ಈಗ ಮಂಡನೆ ಮಾಡಿರುವ ಬಜೆಟ್‌ನಲ್ಲಿ ಹೇಳಿಕೊಳ್ಳುವಂತಹ ಯೋಜನೆಗಳು ಇಲ್ಲ ಎಂದರು.
ಕೌನ್ಸಿಲ್ನಲ್ಲಿ ಅನುಮೋದನೆ ಯಾದ ಬಜೆಟ್ ಅನ್ನು ಸರ್ಕಾರಕ್ಕೆ ಕಳುಹಿಸಿದ್ದೇನೆ. ಬಜೆಟ್‌ನಲ್ಲಿ ಕೆಲವು ಬದಲಾವಣೆಗಳನ್ನು ಸರ್ಕಾರ ಮಾಡಿ ಕಳುಹಿಸಿದೆ. ಇದರ ಅನ್ವಯ ಮುಂದಿನ ಕ್ರಮ ಕೈಗೊಳ್ಳಲಾಗುವುದು.
-ಬಿ.ಎಚ್.ಅನಿಲ್‌ಕುಮಾರ್, ಬಿಬಿಎಂಪಿ ಆಯುಕ್ತ