Advertisement

ಗುರಿಪಳ್ಳ ಅಪಘಾತ: ಮನೆ ಸಮೀಪವೇ ಕಾದಿತ್ತು ಸಾವು

06:00 AM Mar 25, 2018 | Team Udayavani |

ಬೆಳ್ತಂಗಡಿ: ಇನ್ನೇನು ಮನೆ ತಲುಪಿತು, ಮನೆ ಮಂದಿ ಜತೆ ಊಟ ಮುಗಿಸಿ ಸುಖ ನಿದ್ರೆಗೆ ಜಾರಬೇಕೆಂದು ಭಾವಿಸಿದ್ದವರು ವಿಧಿಯ ಅಟ್ಟಹಾಸಕ್ಕೆ ಬಲಿಯಾಗಿ ಚಿರನಿದ್ರೆಗೆ ಜಾರಿದ್ದಾರೆ.

Advertisement

ಸುಧೀರ್‌ ಶೆಟ್ಟಿ (40) ಹಾಗೂ ಅವರ ಅಪ್ಪನ ತಂಗಿಯ ಮಗ ಹರೀಶ್‌ ಶೆಟ್ಟಿ (38)  ಮಾ.23ರಂದು ರಾತ್ರಿ 9.45ರ ಸುಮಾರಿಗೆ ಸುಧೀರ್‌ನ ದ್ವಿಚಕ್ರ ವಾಹನದಲ್ಲಿ ತಮ್ಮ ಗುತ್ತಿಲಾರಬೈಲು ಮನೆಗೆ ತೆರಳುತ್ತಿದ್ದರು. ಉಜಿರೆಯ ಅಳಿಕೆ ಬಳಿ ಗುರಿಪಳ್ಳ ಕಡೆಯಿಂದ ಉಜಿರೆಗೆ ತೆರಳುತ್ತಿದ್ದ ಟ್ಯಾಂಕರ್‌  ಬೈಕಿಗೆ ಢಿಕ್ಕಿ ಹೊಡೆದಿದೆ. ಈ ವೇಳೆ 10ರಿಂದ  20 ಅಡಿ ದೂರಕ್ಕೆ ಟ್ಯಾಂಕರ್‌ ಇಬ್ಬರನ್ನೂ ಎಳೆದುಕೊಂಡು ಹೋಗಿದೆ. ಗಂಭೀರ ಗಾಯಗೊಂಡಿದ್ದ  ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ  ಫ‌ಲಕಾರಿಯಾಗಿಲ್ಲ. ಚಾಲಕ ಪುಷ್ಪರಾಜ್‌ ಅತಿವೇಗ ಹಾಗೂ ಅಜಾಗರೂಕತೆಯಿಂದ ಟ್ಯಾಂಕರ್‌ ಚಲಾಯಿಸಿದ್ದೇ ಘಟನೆಗೆ ಕಾರಣ ಎಂದು  ಬೆಳ್ತಂಗಡಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

3 ವರ್ಷ ಹಿಂದೆ  ಮದುವೆಯಾಗಿದ್ದ  ಹರೀಶ್‌ ಹರೀಶ್‌ ಉಜಿರೆಯ ಹೊಟೇಲ್‌ನಲ್ಲಿ  ಅಡುಗೆ ಕೆಲಸ ಮಾಡುತ್ತಿದ್ದು,  ತಾಯಿ, ಪತ್ನಿ ಸ್ನೇಹಾ ಹಾಗೂ ಒಂದೂವರೆ ವರ್ಷದ ಪುತ್ರಿ ಹಂಸಿಕಾ ಅವರನ್ನು ಅಗಲಿದ್ದಾರೆ.  ಮುಂಬಯಿಯಲ್ಲಿ ಕೆಲಸ ಮಾಡುತ್ತಿದ್ದ ಇವರು ಮದುವೆಯಾದ ಬಳಿಕ ಊರಿನಲ್ಲಿಯೇ  ನೆಲೆಸಿದ್ದರು. ಪ್ರತಿದಿನ ರಿಕ್ಷಾದಲ್ಲಿ ಪ್ರಯಾಣ ಹರೀಶ್‌ ಪ್ರತಿದಿನ ಕೆಲಸ ಮುಗಿಸಿ ಸಂಜೆ ರಿಕ್ಷಾದಲ್ಲಿ ಮನೆಗೆ ತೆರಳುತ್ತಿದ್ದರು. ಆದರೆ ಶುಕ್ರವಾರ ರಾತ್ರಿ ಸುಧೀರ್‌ ಜತೆ ಬೈಕ್‌ನಲ್ಲಿ ಆಗಮಿಸಿದ್ದರು. ಹರೀಶ್‌ಗೆ ಓರ್ವ ಸಹೋದರನಿದ್ದು, ಅವರು ತಮ್ಮ ಕುಟುಂಬದೊಂದಿಗೆ  ಮುಂಬಯಿಯಲ್ಲಿ ನೆಲೆಸಿದ್ದಾರೆ.

ಶುಕ್ರವಾರವೇ ಮುಂಬಯಿಗೆ  ತೆರಳಬೇಕಿದ್ದ ಸುಧೀರ್‌ ಮುಂಬಯಿಯಲ್ಲಿ ಬೀಡಾ ಮಾರಾಟ ಮಾಡುತ್ತಿದ್ದ ಸುಧೀರ್‌ 15 ದಿನಗಳ ಹಿಂದೆಯಷ್ಟೇ ಊರಿಗೆ ಆಗಮಿಸಿದ್ದರು. ತಾಯಿ ಹಾಗೂ ತಮ್ಮನಿಗಾಗಿ ಮನೆಯನ್ನೂ  ಕಟ್ಟಲಾಗುತ್ತಿದೆ. ಶುಕ್ರವಾರ ರಾತ್ರಿಯೇ ಸುಧೀರ್‌ ಮುಂಬಯಿಗೆ ಪ್ರಯಾಣಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಶನಿವಾರ ರಾತ್ರಿ  ತೆರಳಲು   ಬಸ್‌ ಟಿಕೆಟ್‌  ಮಾಡಲಾಗಿತ್ತು.  9 ವರ್ಷಗಳ ಹಿಂದೆ ಇವರಿಗೆ ವಿವಾಹವಾಗಿದ್ದು, ಪತ್ನಿ ಅಶ್ವಿ‌ನಿ ಹಾಗೂ ಪುತ್ರಿಯರಾದ  ವಿದ್ಯಾ ಮತ್ತು ಆದ್ಯಾ ಜತೆ ಮುಂಬಯಿಯಲ್ಲೇ ನೆಲೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next