Advertisement
ಅಕ್ಟೋಬರ್ ತಿಂಗಳಿನ ಅಬ್ಬರದ ಪ್ರಚಾರ, ಕೊರೊನಾವನ್ನು ಲೆಕ್ಕಿಸದೆ ನಡೆದ ಬೃಹತ್ ಚುನಾವಣ ಸಭೆಗಳು, ಕಳಪೆ ಮಟ್ಟದ, ಕಳೆಗುಂದಿದ ಸಾಂಪ್ರದಾಯಿಕ ಅಧ್ಯಕ್ಷೀಯ ಚರ್ಚೆಗಳು, ಚುನಾವಣೆ ಸಂದರ್ಭದಲ್ಲಷ್ಟೇ ಹುಟ್ಟಿಕೊಳ್ಳುವ ಆರೋಪ- ಪ್ರತ್ಯಾರೋಪಗಳು, ಇವುಗಳ ಮಧ್ಯೆ ಕೊರೊನಾ ಸೋಂಕಿಗೆ ತುತ್ತಾದ ಅಧ್ಯಕ್ಷರು ಮತ್ತವರ ತಂಡ, ಎಲ್ಲದ್ದಕ್ಕೂ ಮಿಗಿಲಾಗಿ 4 ವರ್ಷಗಳಿಂದ ಅಧ್ಯಕ್ಷರಾಗಿದ್ದು ಹೆಚ್ಚು ಚರ್ಚೆಗೊಳಗಾದ ಅಭ್ಯರ್ಥಿ…
Related Articles
Advertisement
ಎಲ್ಲ ರಾಜ್ಯಗಳಲ್ಲಿ ಬೆಳಗಿನಿಂದಲೇ ಮತದಾನದ ಪ್ರಕ್ರಿಯೆ ಪ್ರಾರಂಭವಾಗಿದ್ದಲ್ಲದೇ, ಮೇಲ್-ಇನ್-ಬ್ಯಾಲೆಟ್ (ಅಂಚೆ ಮತಗಳು) ವ್ಯವಸ್ಥೆಯೂ ಮೊದಲೇ ಆಗಿದ್ದು, ಕೊರೊನಾ ಕಾಲದಲ್ಲಿ ಅನುಕೂಲಕರವಾಗಿತ್ತು. ಅಂಚೆ, ಡ್ರಾಪ್ ಬಾಕ್ಸ್ ಮೂಲಕ ಮತ ಚಲಾಯಿಸಿ ಐ Vಟಠಿಛಿಛ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ, ಅಮೆರಿಕದ ಪ್ರಭುತ್ವ ಪಡೆದು, ಮೊದಲ ಬಾರಿಗೆ ಮತ ಚಲಾಯಿಸುವ ಹಕ್ಕನ್ನು ಪಡೆದ ಅಮೆರಿಕನ್ನಡಿಗರ ಉತ್ಸಾಹ ಸಾಮಾಜಿಕ ಜಾಲತಾಣಗಳಲ್ಲಿ ಎದ್ದುಕಂಡಿತ್ತು.
ಮತ ಚಲಾವಣೆ ತನ್ನ ಪಾಡಿಗೆ ನಡೆದಿದ್ದರೂ, ಟ್ರಂಪ್ ಮತ್ತು ಬೈಡನ್ ಸಮರ್ಥಕರ ನಡುವಿನ ಸಮರಕ್ಕೆ ಕೊನೆಯಿರಲಿಲ್ಲ. 4 more years ಎನ್ನುವ ಕೂಗಿಗೆ, No more years ಎನ್ನುವ ಉತ್ತರ. ಒಬ್ಬರನ್ನೊಬ್ಬರು ನಿಂದಿಸಿ, ಜಗಳವಾಡಿಕೊಂಡು ಪೊಲೀಸರು ಮಧ್ಯೆ ಪ್ರವೇಶಿಸುವಂತಾಗಿದ್ದು, ಚುನಾವಣೆಯ ಇನ್ನೊಂದು ಮುಖವನ್ನು ಅನಾವರಣಗೊಳಿಸಿತು. ಆದರೆ ಎಲ್ಲರೂ ಎದುರು ನೋಡುತ್ತಿದ್ದ ಮತ ಎಣಿಕೆ ಸಂಜೆ ಎಂಟು ಗಂಟೆಗೆ ಪ್ರಾರಂಭವಾಗಿ, ಟಾರ್ಗೆಟ್ 270 ಎನ್ನುವ ವಿಷಯ ಇಲ್ಲಿನ ಎಲ್ಲರ ಚರ್ಚೆಯ ಕೇಂದ್ರವಾಯಿತು. ಕೆಲ ಸಮಯ ಫೋನನ್ನು ನೋಡದೆ ಕೆಲಸದಲ್ಲಿ ತೊಡಗಿಕೊಂಡಿದ್ದ ನನಗೆ, ನವೆಂಬರ್ 3 ರ ಸಂಜೆಯಿಂದ ರಾತ್ರಿ ಎಂಟರ ತನಕ ಚುನಾವಣೆಯ ಬಗ್ಗೆ ವಾಟ್ಸಾಪಿನಲ್ಲಿ ಬಂದ ಸಂದೇಶಗಳ ಸಂಖ್ಯೆ ಬರೋಬ್ಬರಿ 228! ಇದೆಂತಹ ಕುತೂಹಲ ಗುಂಪಿನಲ್ಲಿ? ಈ ಉತ್ಸಾಹ ಇವರೆಲ್ಲ ಭಾರತದಲ್ಲಿದ್ದಾಗ ನಡೆದಿದ್ದ ಚುನಾವಣೆಗಳಲ್ಲಿಯೂ ಇತ್ತೇ? ಅಥವಾ ಇಂದಿನ ದಿನಗಳಲ್ಲಿ “ಹರಟೆಕಟ್ಟೆ’ಯಾಗಿರುವ ವಾಟ್ಸಾ$ಪಿನ ಪ್ರಭಾವವೋ?
ರಾತ್ರಿ ಎಂಟರಿಂದ ಹನ್ನೆರಡರವರೆಗೆ ನಡೆದ ಮತ ಎಣಿಕೆಯಲ್ಲಿ ಮುನ್ನಡೆ ಸಾಧಿಸಿದ್ದ ಅಧ್ಯಕ್ಷ ಟ್ರಂಪ್ ತನ್ನ ಸಮರ್ಥಕರಲ್ಲಿ ಸಂತಸ ವನ್ನು ಮೂಡಿಸಿದ್ದರು. ನಮ್ಮ ಸ್ನೇಹಿತರೊಬ್ಬರು ಎಲ್ಲರಿಗೂ ಲಾಡು ಹಂಚುವ ಯೋಚನೆಯನ್ನೂ ಮಾಡಿದ್ದರು. ಇದಕ್ಕೆ ವಿರುದ್ಧವಾಗಿ ಬೈಡನ್ ಸಮರ್ಥಕರು, ಬೆಳಗಾಗುವಷ್ಟರಲ್ಲಿ ಏನಾದರೂ ಚಮತ್ಕಾರವಾಗುವುದೇನೋ ಎಂದು ಕಾಯುವಂತಾಯಿತು. ಮಧ್ಯರಾತ್ರಿಯಲ್ಲಿ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಟ್ರಂಪ್, ತನ್ನ ಗೆಲುವನ್ನು ಘೋಷಿಸಿಯೂ ಬಿಟ್ಟರು. ಆದರೆ ನವೆಂಬರ್ 4ರ ಬೆಳಗ್ಗೆ ಹತ್ತು ಗಂಟೆಯಷ್ಟರಲ್ಲಿ ಟ್ರಂಪ್ ಮುನ್ನಡೆ ಸಾಧಿಸಿದ್ದ ಮಿಶಿಗನ್ ಮತ್ತು ವಿಸ್ಕಾನ್ಸಿನ್ ರಾಜ್ಯಗಳಲ್ಲಿ ಬೈಡನ್ ಗೆಲುವು ಸಾಧಿಸಿ 264 ಇಲೆಕ್ಟೋರಲ್ ಮತ ಗಳಿಸಿದ್ದು ಇಡೀ ಅಮೆರಿಕೆಯನ್ನು ಆಶ್ಚರ್ಯದಲ್ಲಿ ಮುಳುಗಿಸಿತು. ಬೈಡನ್ ಸಿಕ್ಸರ್ ಬಾರಿಸಿ 270 ಮತಗಳಿಸಿ ಅಧ್ಯಕ್ಷರಾಗುವರೋ ಎನ್ನುವ ಕುತೂಹಲ ಮೂಡಿಸಿತ್ತು. ಟ್ರಂಪ್ ಹಿಡಿತದಲ್ಲಿದ್ದ ನೆವಾಡಾ ರಾಜ್ಯದಲ್ಲಿ ಮುನ್ನಡೆ ಸಾಧಿಸಿ, 6 ಇಲೆಕ್ಟೋರಲ್ ಮತ ಗಳಿಸಿ ಬೈಡನ್ ವಿಜಯಿಯಾಗುವರೋ? ಕ್ರಿಕೆಟ್ ಮ್ಯಾಚಿನ ಕೊನೆಯ ಬಾಲಿನಲ್ಲಿ ಬೈಡೆನ್ ಸಿಕ್ಸರ್ ಬಾರಿಸುವರೋ ಎಂಬುದು ಗೆಳೆಯರ ಬಳಗದ ಚರ್ಚೆಯ ವಿಷಯವಾಯಿತು.
ಆದರೆ ಇಂದಿನ ದಿನಗಳಲ್ಲಿನ ಚುನಾವಣೆಯಲ್ಲಿ ಕಂಡು ಬರುವ ಇ.ವಿ.ಎಂ.ಗಳಿಲ್ಲದೇ ಮತಪತ್ರವನ್ನು ಎಣಿಸುವ ಗತಕಾಲದ ರೂಢಿಯಲ್ಲಿರುವ ಅಮೆರಿಕೆಯಲ್ಲಿ ಇದು ಸಾಧ್ಯವೇ ಎನಿಸಿತ್ತು. ಬೈಡನ್ ಅವರು “ಲಗಾನ್’ ಚಿತ್ರದ ನಾಯಕ ಭುವನ್‌ನಾಗುವರೋ ಇಲ್ಲವೇ ಎಂಬತ್ತರ ದಶಕದಲ್ಲಿ ಚೇತನ್ ಶರ್ಮಾರ ಕೊನೆಯ ಬಾಲಿಗೆ ಸಿಕ್ಸರ್ ಬಾರಿಸಿ, ಪಂದ್ಯ ಗೆದ್ದ ಜಾವೇದ್ ಮಿಯಾಂದಾದಾರಂತೆ ಇತಿಹಾಸ ಸೃಷ್ಟಿಸುವರೋ ಎನ್ನುವ ಯೋಚನೆ ಮೂಡಿತು. ಇಷ್ಟೊಂದು ಕುತೂಹಲ ಮೂಡಿಸಿದ ಟಾರ್ಗೆಟ್ 270 ಪಂದ್ಯ ಸಮಯ ಕಳೆದಂತೆ ನೀರಸ ಟೆಸ್ಟ್ ಮ್ಯಾಚಿನಂತೆ ಬದಲಾಗಿದ್ದು ಎಲ್ಲರಲ್ಲಿಯೂ ನಿರಾಸೆ ಮೂಡಿಸಿತು. ಅಂಚೆ ಮತಗಳ (ಮೇಲ್-ಇನ್ ಬ್ಯಾಲೆಟ್)ಎಣಿಕೆ ತನ್ನ ಪಾಡಿಗೆ ತಾನು ಸಾಗಿತ್ತು. ಇಡೀ ವಿಶ್ವವೇ ದೊಡ್ಡಣ್ಣದ ಆಯ್ಕೆಯನ್ನು ಕಾಯುವಂತಾಯಿತು. ಅಂಚೆ ಮತಗಳ ಸಂಖ್ಯೆಯೇ ಬೈಡನ್ ಗೆಲುವಿಗೆ ಕಾರಣವಾಗುವಂತೆ ಕಂಡುಬಂದಾಗ, ಬೈಡನ್ ಗೆಲುವು ಸಾಧಿಸಿದ ರಾಜ್ಯಗಳಲ್ಲಿ ಮತ ಎಣಿಕೆಯಲ್ಲಿ ಮೋಸ ನಡೆಯುತ್ತಿದೆ ಎನ್ನುವ ಆರೋಪವೂ ಕೇಳಿಬಂತು. ಆ ರಾಜ್ಯಗಳಲ್ಲಿನ ಫಲಿತಾಂಶವನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರುವ ಬಗ್ಗೆ ಟ್ರಂಪ್ ತಂಡ ಆಲೋಚಿಸಿತು.
ಕನ್ನಡ ಬಳಗದ ಚರ್ಚೆಯೀಗ “ಅಧ್ಯಕ್ಷರ ಕುರ್ಚಿ ನಂದೇ’ ಎನ್ನುವ ಟ್ರಂಪ್-ಬೈಡನ್‌ರ ವಿಷಯದಿಂದ ಸರಿದು, “ಈ ಸಲ ಕಪ್ ನಮೆªà’ ಎನ್ನುತ್ತ 13 ವರ್ಷಗಳಿಂದ ಕ್ರಿಕೆಟ್ ಅಭಿಮಾನಿಗಳಲ್ಲಿ ಆಸೆ ಹುಟ್ಟಿಸಿರುವ ಆರ್‌ಸಿಬಿಯ ಪಂದ್ಯದತ್ತ ತಿರುಗಿತು. ಆರ್.ಸಿ.ಬಿ. ಪಂದ್ಯ ಗೆಲ್ಲದಿದ್ದರೂ, ಟ್ರಂಪ್ ಹಿಡಿತದಲ್ಲಿದ್ದ ಜಾರ್ಜಿಯಾ ಮತ್ತು ಫಿಲಡೆಲ್ಫಿಯಾ ರಾಜ್ಯಗಳಲ್ಲಿ ಹೆಚ್ಚಿನ ಮತ ಪಡೆದು ಟಾರ್ಗೆಟ್ 270 ತಲುಪಿದ ಬೈಡನ್ ಅಮೆರಿಕಾದ ಅಧ್ಯಕ್ಷರಾಗಿ ಆಯ್ಕೆಯಾದರು. ಏಕದಿನದ ಕ್ರಿಕೆಟ್ ಪಂದ್ಯದಂತೆ ಪ್ರಾರಂಭವಾದ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆಯ ಪ್ರಕ್ರಿಯೆ, ಐದು ದಿನಗಳವರೆಗೆ ಟೆಸ್ಟ್ ಪಂದ್ಯದಂತೆ ನಡೆಯಿತು. ಪುಣ್ಯಕ್ಕೆ ಪಂದ್ಯ ಡ್ರಾ ಆಗಲಿಲ್ಲ ಎನ್ನುವುದೇ ಸಮಾಧಾನ.