Advertisement
ಪರಿಸ್ಥಿತಿ ಅರಿತು ತಾರಾಪುರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಎಸ್.ಬಿ. ಶೆಟ್ಟೆಣ್ಣವರ ಗ್ರಾಮದ ಇಚೆ ರಸ್ತೆ ಮೇಲೆ ನಿಂತು ಸಮಸ್ಯೆ ಆಲಿಸಿದರು. ಈ ಸಂದರ್ಭದಲ್ಲಿ ತಾವು ಭಯದ ವಾತವಾರಣದಲ್ಲಿ ನೆಲೆಸಿದ್ದೇವೆ ಎಂದು ಗ್ರಾಮದ ದೇವಪ್ಪಗೌಡ ಪಾಟೀಲ ತಮ್ಮ ಸಮಸ್ಯೆ ಹೇಳಿಕೊಂಡರು.ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು, ಅವಶಕ್ಯತೆ ಇದ್ದರೆ ಸೋಮವಾರ ಗಂಜಿಕೇಂದ್ರ ತೆರೆಯುವಂತೆ ಅಧಿಕಾರಿಗಳಿಗೆ ಸೂಚಿಸಿ ಕಾಲುವೆ ನೀರು ಮತ್ತು ಭೀಮಾನದಿ ಪಾತ್ರದ ನೀರು ಇನ್ನೂ ಹೆಚ್ಚಾಗುವ ಲಕ್ಷಣವಿದ್ದು ಜನರು ಎಚ್ಚರ ವಹಿಸಬೇಕೆಂದು ಹೇಳಿದರು. ಈ ಗ್ರಾಮ ಶಾಶ್ವತ ಪರಿಹಾರಕ್ಕಾಗಿ ಹೊಸೂರಲ್ಲಿ ಈಗಾಗಲೇ ನಿವೇಶನ ನೀಡಲಾಗಿದೆ ಮತ್ತು ಅವರ ಮನೆಗಳಿಗೆ ಯೋಗ್ಯಬೆಲೆಯನ್ನು ನೀಡಿದ್ದು ಅವರು ಈ ಹಳೆ ಊರಲ್ಲಿ ಇದ್ದರೆ ಸರಕಾರದಿಂದ ಯಾವುದೇ ಸೌಕರ್ಯಗಳು ಕೊಡಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಸ್ಥಳಾಂತರಗೊಳ್ಳದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ತಮಗೆ ನೀಡಿದ ನಿವೇಶನದಲ್ಲಿ ತಕ್ಷಣ ಬರಬೇಕು ಎಂದು ಎಚ್ಚರಿಸಿದರು.
Related Articles
ಮೀರಾಸಾಬ ಮುಲ್ಲಾ, ನಿರಾಶ್ರಿತ
Advertisement
ತಾರಾಪುರದಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಇಂಡಿ ಉಪವಿಭಾಗಾಧಿಕಾರಿ ಮತ್ತು ಸಿಂದಗಿ ತಹಶೀಲ್ದಾರ್‌ಗೆ ಸೂಚಿಸಿದ್ದೇನೆ. ಗ್ರಾಮದಲ್ಲಿ ಎಲ್ಲ ಜನಾಂಗದ ಮುಖಂಡರ ನೇತೃತ್ವದಲ್ಲಿ ಸಭೆ ನಡೆಸಿ ಅವರಿಗೆ ಸರಿ ಹೋಗುವ ರೀತಿಯಲ್ಲಿ ನಿವೇಶನ ಹಂಚಿಕೆ ಮಾಡಲು ಹೇಳಿದ್ದೇನೆ. ಅದುಬಗೆಹರಿಯದಿದ್ದರೆ ಸ್ವತಃ ನಾನೆ ಸಭೆ ಕರೆದು ಸಮಸ್ಯೆ ಬಗೆಹರಿಸುತ್ತೇನೆ.
ಎಸ್.ಬಿ. ಶೆಟ್ಟೆಣ್ಣವರ, ಜಿಲ್ಲಾಧಿಕಾರಿ