Advertisement

ಮನದಲ್ಲಿದ್ದ ತೀವ್ರ ಬಯಕೆಯೇ ಜಿಂಕೆಯ ಜನ್ಮ ತಾಳಲು ಕಾರಣವಾದ ‘ಜಡ ಭರತ’ನ ರೋಚಕ ಕಥೆ!

06:07 PM Aug 13, 2020 | Hari Prasad |

ಜನ್ಮ ಜನ್ಮಾಂತರದ ಬಂಧ, ಋಣಾನುಬಂಧ, ಏಳೇಳು ಜನ್ಮಗಳ ಬಂಧ… ಇಂತಹ ಹಲವಾರು ಪದಬಳಕೆಗಳನ್ನು ಜನರ ಆಡುಮಾತಿನಲ್ಲಿ ನಾವು ಪ್ರತಿನಿತ್ಯವೆಂಬಂತೆ ಕೇಳುತ್ತಲೇ ಇರುತ್ತೇವೆ. ದೇಹ ಮಾತ್ರವೇ ನಶಿಸುತ್ತದೆ, ಆತ್ಮಕ್ಕೆ ಸಾವಿಲ್ಲ ಎಂಬ ನಂಬಿಕೆಯೂ ಇದೆ. ಪುನರ್ಜನ್ಮ ಎಂಬುದು ಸಾಮಾನ್ಯರಿಗೆ ಭಯಮಿಶ್ರಿತ ಕುತೂಹಲದ, ತತ್ವಜ್ಞಾನಿಗಳಿಗೆ ಶೋಧನೆಯ, ವಿಜ್ಞಾನಿಗಳಿಗೆ ಅನ್ವೇಷಣೆಯ ಮತ್ತು ನಾಸ್ತಿಕರಿಗೆ ‘ಹಾಗೇನಿಲ್ಲ ಬಿಡಿ’ ಎಂಬ ಕುತೂಹಲದ ವಿಷಯವಾಗಿದೆ. ಈ ಹಿನ್ನಲೆಯಲ್ಲಿ ಪುನರ್ಜನ್ಮ ವಿಷಯದ ಕುರಿತಾಗಿ ಒಂದಷ್ಟು ವಿಚಾರಗಳನ್ನು ನಿಮಗೆ ತಿಳಿಸಿಕೊಡುವ ಪ್ರಯತ್ನ ನಮ್ಮದು.

Advertisement

ಈ ಹಿಂದೆ ‘ತರಂಗ’ ವಾರಪತ್ರಿಕೆಯಲ್ಲಿ ಪ್ರಕಟಗೊಂಡು ಜನಮನ್ನಣೆ ಪಡೆದುಕೊಂಡಿದ್ದ ಈ ಲೇಖನದ ಯಥಾವತ್ ರೂಪ ಇದೀಗ ನಿಮ್ಮ ಮುಂದೆ…

– ಡಾ| ಎನ್‌. ಗೋಪಾಲಕೃಷ್ಣ

ಶ್ರಿಮದ್‌ ಭಾಗವತದಲ್ಲಿ ಬರುವ ಭರತ ರಾಜನ ಕಥೆ ಕೂಡ ಪುನರ್ಜನ್ಮದ ತತ್ವಗಳನ್ನು ವಿಶದವಾಗಿ ತಿಳಿಸುತ್ತದೆ.

ಕೌಟುಂಬಿಕ ಜೀವನದಿಂದ ತನ್ನನ್ನು ತಾನು ಬಿಡುಗಡೆ ಮಾಡಿಕೊಂಡ ಮಹಾರಾಜ ಭರತ ವಾಸುದೇವನ ತೃಪ್ತಿಗಾಗಿ ವಾನಪ್ರಸ್ಥಕ್ಕೆ ತೆರಳುತ್ತಾನೆ.

ಅಲ್ಲಿ ಸೂರ್ಯ ಭಗವಾನನ ಆರಾಧನೆಯಲ್ಲಿ ಭರತ ತನ್ನನ್ನು ತಾನು ತೊಡಗಿಸಿಕೊಂಡಿರುತ್ತಾನೆ.

Advertisement

ಹೀಗೆ, ಹಿಮಾಲಯದ ತಪ್ಪಲಿನಲ್ಲಿ, ಗಂಡಕೀ ನದಿಯ ತಟದಲ್ಲಿ ಕುಳಿತು ಮಹಾರಾಜ ಭರತ ಪುನರ್ಜನ್ಮದಿಂದ ಮುಕ್ತಿ ಪಡೆಯಲೆಂದು ಕೆಲವು ಕಾಲ ಏಕಾಂತದಲ್ಲಿರುತ್ತಾನೆ.

ಹೀಗೆ, ತಪಸ್ಸಿನಲ್ಲಿ ನಿರತನಾಗಿ ಭರತ ಮುಕ್ತಿ ಮಾರ್ಗದತ್ತ ಸಾಗುತ್ತಿರುತ್ತಾನೆ.

ಒಂದು ದಿನ ನದೀ ತಿರದಲ್ಲಿ ಸಿಂಹವೊಂದು ಗರ್ಭಿಣಿ ಜಿಂಕೆಯನ್ನು ಅಟ್ಟಿಸಿಕೊಂಡು ಬರುತ್ತದೆ. ಜಿಂಕೆ ಜೀವ ಭಯದಿಂದ ನದಿಯ ಬಳೆ ಮರಿ ಜಿಂಕೆಗೆ ಜನ್ಮಕೊಟ್ಟು, ಗುಹೆಯೊಂದನ್ನು ಸೇರಿ ಅಲ್ಲೇ ಸತ್ತು ಹೋಗುತ್ತದೆ. ಭರತನು ನದಿಯೊಳಗೆ ಬಿದ್ದ ಜಿಂಕೆ ಮರಿಯನ್ನು ಎತ್ತಿ ತಂದು ಪೋಷಿಸುತ್ತಾನೆ.

ಇದನ್ನೂ
ಓದಿ: ತರಂಗಾಂತರಂಗ: ಪುನರ್ಜನ್ಮ- ಹುಟ್ಟು, ಸಾವು, ಮರುಹುಟ್ಟು ; ಇವುಗಳ ಗುಟ್ಟೇನು?


ಕ್ರಮೇಣ ಅದರ ಬಗ್ಗೆ ಅಪಾರ ಮೋಹ ಬೆಳೆಯುತ್ತದೆ. ಒಂದು ದಿನ ಜಿಂಕೆ ಮರಿ ಎಲ್ಲೋ ತಪ್ಪಿಸಿಕೊಂಡು ಹೋದಾಗ ಅದನ್ನು ಹುಡುಕುತ್ತಾ ಹೋದ ರಾಜ ಅಪಾಯಕ್ಕೆ ಸಿಲುಕಿ, ಸಾಯುವ ಸ್ಥಿತಿಗೆ ಬರುತ್ತಾನೆ. ಆಗ ಮುದ್ದಿನ ಜಿಂಕೆ ಮರಿಯ ಚಿತ್ರವೇ ಕಣ್ಣಮುಂದೆ ನಿಂತಿರುತ್ತದೆ. ಅದರ ಫ‌ಲವಾಗಿ ಭರತನು ಮುಂದಿನ ಜನ್ಮದಲ್ಲಿ ಒಂದು ಜಿಂಕೆಮರಿಯಾಗಿ ಹುಟ್ಟುತ್ತಾನೆ.

ಇದನ್ನೂ
ಓದಿ: ಪುರಾಣಗಳಲ್ಲಿ ಪುನರ್ಜನ್ಮದ ಉಲ್ಲೇಖ : ಅಭಿಮನ್ಯುವಿಗೆ ಗರ್ಭಾವಸ್ಥೆಯಲ್ಲೇ ಚಕ್ರವ್ಯೂಹದ ಪಾಠ!

ಆದರೆ ಈ ಬಾರಿ ಪೂರ್ವಜನ್ಮದ ಸ್ಮರಣೆ ಹೊಂದಿರುವುದರಿಂದ ಆಮಿಷಗಳಿಗೆ ಒಳಗಾಗದೆ, ಸರಳ ಜೀವನ ನಡೆಸುತ್ತಾ ತನ್ನ ಅಂತ್ಯಕಾಲದಲ್ಲಿ ಪರಮಾತ್ಮನ ಸ್ಮರಣೆಯಲ್ಲೇ ನಿರತನಾಗಿರುತ್ತಾನೆ. ಹೀಗೆಂದೇ ಮುಂದಿನ ಜನ್ಮದಲ್ಲಿ ಬ್ರಾಹ್ಮಣ ಅರ್ಚಕನೊಬ್ಬನ ಮನೆಯಲ್ಲಿ ಜನಿಸುತ್ತಾನೆ. ಅವನೇ ಮಹಾಜ್ಞಾನಿ ಜಡಭರತ.

ತನ್ನ ದೇಹಾಂತ್ಯದ ಕಾಲದಲ್ಲಿ ಯಾವ ಸ್ಥಿತಿಯನ್ನು ಮನಸ್ಸಿಗೆ ತಂದುಕೊಳ್ಳುವೆವೋ ಆ ಸ್ಥಿತಿಯ, ಪ್ರಾಣಿಯ ಜೀವ ನಮಗೆ ಬಂದು, ಮುಂದಿನ ಜನ್ಮದಲ್ಲಿ ಹಾಗೇ ಹುಟ್ಟುತ್ತೇವೆ ಎನ್ನುವ ಬಗ್ಗೆ ಇದೊಂದು ದೃಷ್ಟಾಂತ ಕಥೆ.

ಇದನ್ನೂ ಓದಿ: ‘ನನಗೆ ಸಾವಿರಾರು ಜನ್ಮಗಳಾಗಿವೆ ; ಅವೆಲ್ಲದರಲ್ಲೂ ತಂದೆ- ತಾಯಿಗಳಿದ್ದರು ಅದರಲ್ಲಿ ನಿವ್ಯಾರು?’

(ಮುಂದುವರಿಯುತ್ತದೆ…)

Advertisement

Udayavani is now on Telegram. Click here to join our channel and stay updated with the latest news.

Next