Advertisement

Taranga Ugadi Dhamaka2024; ಓದಿನಿಂದ ಜ್ಞಾನದ ವ್ಯಾಪ್ತಿ ವಿಸ್ತರಣೆ: ಡಾ| ಸಂಧ್ಯಾ ಎಸ್‌.ಪೈ

01:52 AM Jul 27, 2024 | Team Udayavani |

ಮಂಗಳೂರು: “ತರಂಗ’ ವಾರಪತ್ರಿಕೆಯ ಪ್ರತೀ ಸಂಚಿಕೆಯಲ್ಲೂ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಯಾವುದಾದರೊಂದು ವಿಷಯವನ್ನು ಕೈಗೆತ್ತಿಕೊಂಡು ಓದುಗರಿಗೆ ನೀಡಲು ಪ್ರಯತ್ನಿಸುತ್ತೇವೆ. “ತರಂಗ’ವನ್ನು ಓದುವುದರಿಂದ ನಿಜವಾಗಿಯೂ ಜ್ಞಾನದ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಬಹುದು. ಈ ಕಾರಣ ಕ್ಕಾಗಿಯೇ ರಾಜ್ಯದ ನಂ.1 ವಾರ ಪತ್ರಿಕೆಯಾಗಿ ಮೂಡಿ ಬಂದಿದೆ ಎಂದು “ತರಂಗ’ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್‌. ಪೈ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಹಂಪನಕಟ್ಟೆಯ ಎಸ್‌.ಎಲ್‌. ಶೇಟ್‌ ಜುವೆಲರ್ ಆ್ಯಂಡ್‌ ಡೈಮಂಡ್‌ ಹೌಸ್‌ನ ಪ್ರಾಯೋಜಕತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ “ತರಂಗ ಯುಗಾದಿ ಧಮಾಕ-2024’ರ ಅದೃಷ್ಟಶಾಲಿಗಳಿಗೆ ಮಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಶುಕ್ರವಾರ ಜರಗಿದ ಬಹುಮಾನ ವಿತರಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಮನುಷ್ಯನ ನಿಜವಾದ ಆಸ್ತಿ ಎಂದರೆ ಅದು “ಜ್ಞಾನ’. ಎಷ್ಟೇ ದುಡ್ಡು, ಸಂಪತ್ತು ಇರಲಿ, ಮನುಷ್ಯನಿಗೆ ಪ್ರಪಂಚ ಜ್ಞಾನ ಇಲ್ಲದಿದ್ದರೆ ಅದು ವ್ಯರ್ಥ ಎಂದ ಅವರು, ಪ್ರತೀ ಸಲ ಎಷ್ಟೋ ಸಾವಿರ ಮಂದಿ ವಿಶೇಷಾಂಕ ಖರೀದಿಸಿ ಓದಿ, ಅದಕ್ಕೆ ಪ್ರತಿಕ್ರಿಯೆ ನೀಡುತ್ತಾರೆ. ಅದರಲ್ಲಿ ಅದೃಷ್ಟವಂತರು ಆಯ್ಕೆಯಾಗುವುದು ಸಂತಸದ ಸಂಗತಿ ಎಂದರು.

ಬಹುಮಾನ ವಿಜೇತರು ಪ್ರಶ್ನೆಗಳಿಗೆ ಉತ್ತರ ಕಂಡು ಹಿಡಿಯಲು ಎಷ್ಟು ಸಲ ಓದುತ್ತಾರೋ ಗೊತ್ತಿಲ್ಲ. ಹಾಗಾಗಿ ಒಂದು ರೀತಿಯಲ್ಲಿ ನಮ್ಮ ಉದ್ದೇಶವೂ ಅದರಿಂದ ಈಡೇರುತ್ತದೆ. ನಾವು ಪ್ರತೀ ಬಾರಿಯೂ ಕಣ್ಣಲ್ಲಿ ಕಣ್ಣಿಟ್ಟು ಏನಾದರೂ ಸತ್ವ ಇರಬೇಕು ಎಂದು ಉತ್ತಮ ಲೇಖನಗಳನ್ನು ಆಯ್ಕೆ ಮಾಡುತ್ತೇವೆ. ಓದಿದವರಿಗೆ ಏನಾದರೂ ಲಾಭವಾಗ ಬೇಕು ಎನ್ನುವುದು ನಮ್ಮ ಉದ್ದೇಶ ಎಂದರು.

ಬಹುಮಾನದ ಪ್ರಾಯೋಜಕರಾದ ಹಂಪನಕಟ್ಟೆಯ ಎಸ್‌.ಎಲ್‌. ಶೇಟ್‌ ಜುವೆಲರ್ ಆ್ಯಂಡ್‌ ಡೈಮಂಡ್‌ ಹೌಸ್‌ನ ಮಾಲಕರಾದ ಪ್ರಶಾಂತ್‌ ಶೇಟ್‌ ಅವರು ನೀಡುತ್ತಿರುವ ಪ್ರಾಯೋಜಕತ್ವವೂ ಶ್ಲಾಘನೀಯ. ಸಂಸ್ಥೆ ಇನ್ನಷ್ಟು ಅಭಿವೃದ್ಧಿಯಾಗಲಿ ಎಂದರು.

Advertisement

ಎಸ್‌.ಎಲ್‌. ಶೇಟ್‌ ಜುವೆಲರ್ ಆ್ಯಂಡ್‌ ಡೈಮಂಡ್‌ ಹೌಸ್‌ನ ಮಾಲಕ ಪ್ರಶಾಂತ್‌ ಶೇಟ್‌ ಮಾತನಾಡಿ, “ಉದಯವಾಣಿ’, “ತರಂಗ’ ಮತ್ತು ಎಸ್‌.ಎಲ್‌.ಶೇಟ್‌ ಜುವೆಲರ್ ಆ್ಯಂಡ್‌ ಡೈಮಂಡ್‌ ನಡುವೆ ಅವಿನಾಭಾವ ಸಂಬಂಧವಿದೆ. ನಮ್ಮ ಹಿರಿಯರ ಕಾಲದಿಂದಲೂ “ಉದಯ ವಾಣಿ’ಯೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇವೆ. ಇದು ಯಶಸ್ವಿಯಾಗಿ ಮುನ್ನಡೆಯಲು ಸ್ಫೂರ್ತಿಯನ್ನೂ ನೀಡಿದೆ ಎಂದರು.

“ಉದಯವಾಣಿ’ ಮ್ಯಾಗಝಿನ್ಸ್‌ ಮತ್ತು ಸ್ಪೆಷಲ್‌ ಇನಿಶಿಯೇಟಿವ್ಸ್‌ ಉಪಾಧ್ಯಕ್ಷ ರಾಮಚಂದ್ರ ಮಿಜಾರ್‌ ಸ್ವಾಗತಿಸಿ, “ತರಂಗ’ 42 ವರ್ಷಗಳಿಂದ ನಂ.1 ವಾರಪತ್ರಿಕೆಯಾಗಿ ಮೂಡಿ ಬಂದಿದೆ. ಬಹುಮಾನ ವಿಜೇತರ ಆಯ್ಕೆಯಲ್ಲೂ ಪಾರದರ್ಶಕತೆ ಕಾಯ್ದುಕೊಂಡಿದ್ದು, ಅದೃಷ್ಟಶಾಲಿಗಳಿಗೆ ಅರ್ಹವಾಗಿಯೇ ಬಹುಮಾನಗಳು ಒಲಿದು ಬಂದಿದೆ ಎಂದರು.

ಅದೃಷ್ಟಶಾಲಿಗಳ ವಿವರವನ್ನು “ಉದಯವಾಣಿ’ಯ ಮಂಗಳೂರು ವಿಭಾಗದ ರೀಜನಲ್‌ ಮ್ಯಾನೇಜರ್‌ ಸತೀಶ್‌ ಮಂಜೇಶ್ವರ ನೀಡಿದರು. ಮಂಗಳೂರು ಸುದ್ದಿ ವಿಭಾಗದ ಮುಖ್ಯಸ್ಥ ವೇಣು ವಿನೋದ್‌ ಕೆ.ಎಸ್‌. ವಂದಿಸಿದರು. ಹಿರಿಯ ವರದಿಗಾರ ದಿನೇಶ್‌ ಇರಾ ನಿರೂಪಿಸಿದರು.

ಅದೃಷ್ಟಶಾಲಿ ಬಹುಮಾನ ವಿಜೇತರು

ಬಂಪರ್‌ ಬಹುಮಾನ (8 ಗ್ರಾಂ ಚಿನ್ನದ ನಾಣ್ಯ) ವೀರೇಶ್‌ ಆರ್‌. ಪರಿತ್‌ -ಕಲ್ಮೂಡ, ಕಲಬುರಗಿ.
ಪ್ರಥಮ (4 ಗ್ರಾಂ ಚಿನ್ನದ ನಾಣ್ಯ) ಮಮತಾ ಕೊಡಚವಾಡ- ಮಿಶ್ರಿಕೋಟೆ, ಧಾರವಾಡ, ಎಸ್‌.ಚಂದ್ರಾಯ ಆಚಾರ್‌-ತಡಂಬೈಲ್‌, ಸುರತ್ಕಲ್‌.

ದ್ವಿತೀಯ (2 ಗ್ರಾಂ ಚಿನ್ನದ ನಾಣ್ಯ) ಅಕ್ಷರಾ ಕುಂದರ್‌ ಕೊಕ್ಕರ್ಣೆ- ಹುಬ್ಬಳ್ಳಿ-ಧಾರವಾಡ, ಚನ್ನಪ್ಪ ಮಲ್ಲದ – ಶಾನವಾಡ, ಧಾರವಾಡ, ರತ್ನಾ ಎಂ.ಕೆ. – ಹುಬ್ಬಳ್ಳಿ.

ತೃತೀಯ (1 ಗ್ರಾಂ ಚಿನ್ನದ ನಾಣ್ಯ) ಎಂ.ಶಕುಂತಳಾ- ನಾಗರಬಾವಿ, ಬೆಂಗಳೂರು, ಸಚಿನ್‌ ರಮೇಶ್‌ ಜಾಧವ್‌ – ಸಾವಳಗಿ ಬಾಗಲಕೋಟೆ, ಶ್ರೀಕಾಂತ್‌ ಪಿ.ಚಿತ್ರಗಿ – ಕುಮಟಾ ಉ.ಕ, ಪ್ರಕಾಶ್‌ ರಾಥೋಡ್‌- ವಿಜಯಪುರ.

ಪ್ರೋತ್ಸಾಹಕರ ಬಹುಮಾನ (10 ಗ್ರಾಂ- ಬೆಳ್ಳಿ ನಾಣ್ಯ) ಶಶಾಂಕ್‌ ಎಸ್‌. ಭಟ್‌- ಸಿದ್ದಾಪುರ, ಎಚ್‌. ಎಸ್‌. ಅರವಿಂದ -ಬಸವನಹಳ್ಳಿ, ಚಿಕ್ಕಮಗಳೂರು, ಶಾಂತಾ ಉಮೇಶ್‌ ಕಾಮತ್‌- ಮೂಡುಬಿದಿರೆ, ಭರತ್‌ ನಾಯಕ್‌ ಎಂ.- ಬೆಳ್ಳಂದೂರು, ಬೆಂಗಳೂರು, ಜಾಸ್ಮಿನ್‌ ಡಿ’ಸೋಜಾ- ಉಳ್ಳಾಲಬೈಲ್‌, ಮಂಗಳೂರು, ಅಮೆಲಿಯಾ ಸಾರಾ ಡಯಾಸ್‌- ಕೋರ್ಟ್‌ ರೋಡ್‌, ಉಡುಪಿ, ಸಚಿನ್‌- ಒರ್ರ ಫೈನ್‌ ಜುವೆಲ್ಲರಿ, ಉಡುಪಿ, ವಿಜೇತಾ – ಚಾಮರಾಜಪೇಟೆ, ಬೆಂಗಳೂರು, ಸುಪ್ರೀತಾ – ಬಿಜೂರು, ಬೈಂದೂರು, ಶಾರದಾ ಕೃಷ್ಣಮೂರ್ತಿ – ಗೋರೆಗಾಂವ್‌, ಮುಂಬಯಿ, ನಂದೀಶ್‌ ಬಿ.ಯು.- ಬಿದರಕೋಟೆ, ಮಂಡ್ಯ, ಉಷಾ ಕಾವೇರಿ – ಗುಡ್ಡಡ್ಕ, ಸುಳ್ಯ, ಎಂ.ಆರ್‌.ಜಯಶ್ರೀ- ಉತ್ತರ ಬಡಾವಣೆ ಹಾಸನ, ಕಲ್ಪನಾ ಬಾಪಟ್‌ – ಸಾಗರ, ಶಿವಮೊಗ್ಗ, ಬಾಬು ಎಸ್‌.ಕೆ.- ಇರ್ವತ್ತೂರು, ಕಾರ್ಕಳ, ಎ. ಶಂಕರನಾರಾಯಣ ಭಟ್ಟ- ಮಧೂರು, ಅಳಕ್ಕೆ ಕಾಸರಗೋಡು, ಗಾಯತ್ರಿ ಪಿ. ದಾಮ್ಲೆ- ಪಡೀಲ್‌, ವಿಶ್ವನಾಥ್‌ ಎಂ.- ಕೊಟ್ಟಾರ ಚೌಕಿ, ಮಂಗಳೂರು, ಕೆ.ಪಿ. ವಿದ್ಯಾರ್ಥಿ – ಸುರತ್ಕಲ್‌, ಮಂಗಳೂರು, ನವಿಕಾ ಡಿ. ಶೆಟ್ಟಿ – ಐರೋಡಿ, ಸಾಸ್ತಾನ, ಮೋಹಿನಿ – ಮಣ್ಣಗುಡ್ಡೆ, ಮಂಗಳೂರು, ತೀರ್ಥ ಪ್ರಸಾದ್‌ -ಹೊಳಲ್ಕೆರೆ, ಚಿತ್ರದುರ್ಗ, ಎ. ಅಬೂಬಕ್ಕರ್‌ -ಅನಿಲಕಟ್ಟೆ, ವಿಟ್ಲ, ಅಕ್ಷತಾ ಜಿ. ಎಸ್‌. – ಪಾವಗಡ, ತುಮಕೂರು, ಬಾಲಚಂದ್ರ – ಬಜ್ಪೆ, ಎಂ. ಎ. ದೇವಯ್ಯ – ಮಡಿಕೇರಿ, ಕೊಡಗು, ವಿಸ್ಮಿತಾ ಎಸ್‌. ಪಿ. – ಬಂಟ್ವಾಳ, ನಾಗೇಶ್‌ ಆಚಾರ್ಯ – ಗುರುಶಾಂತ್‌ ಆಶ್ರಮ, ದಾವಣಗೆರೆ, ಕಸ್ತೂರಿ ಎಸ್‌. ಶೇಟ್‌ – ಕೊಯ್ಯರು, ಬೆಳ್ತಂಗಡಿ, ಪ್ರಾಪ್ತಿ ಎಸ್‌. ಶೆಟ್ಟಿ – ಮೂಡುಬೆಳ್ಳೆ ಅವರು ಬಹುಮಾನ ಗಳಿಸಿದ್ದಾರೆ.

ವಿಜೇತರ ಅನಿಸಿಕೆಗಳು
“ತರಂಗ’ ಯುಗಾದಿ ವಿಶೇಷಾಂಕವನ್ನು ಓದಿ ಅದರಲ್ಲಿ ಕೇಳಿದ ಪ್ರಶ್ನೆಗಳಿಗೆ ಸೂಕ್ತ ಉತ್ತರ ಬರೆದು ಕಳುಹಿಸಿದ್ದೆ. ಬಹುಮಾನದ ನಿರೀಕ್ಷೆ ಇರಲಿಲ್ಲ. ಬಂಪರ್‌ ಬಹುಮಾನ ಖುಷಿ ತಂದಿದೆ.
– ವೀರೇಶ್‌ ಆರ್‌. ಪರಿತ್‌, ಕಲ್ಮೂಡ, ಕಲಬುರಗಿ.

ಆರಂಭದಿಂದಲೂ “ತರಂಗ- ಉದಯ ವಾಣಿ’ ಪತ್ರಿಕೆಯನ್ನು ವಿಶೇಷ ಆಸಕ್ತಿಯಿಂದ ಓದುತ್ತಿದ್ದೇನೆ. ಜ್ಞಾನದ ವೃದ್ಧಿಯ ಜತೆಗೆ ಭಾಷೆಯ ಶುದ್ಧತೆಗೂ ಇದು ಸಹಕಾರಿಯಾಗಿದೆ.
– ಕೆ.ಪಿ. ವಿದ್ಯಾರ್ಥಿ, ಸುರತ್ಕಲ್‌, ಮಂಗಳೂರು

“ತರಂಗ’ ಯುಗಾದಿ ಧಮಾಕದಿಂದ ಬಹು ಮಾನ ಮಾತ್ರವಲ್ಲದೆ, ಜ್ಞಾನ ಹೆಚ್ಚಿಸಲು ಅವಕಾಶವಾಗಿದೆ. “ಉದಯವಾಣಿ’ ಮತ್ತು “ತರಂಗ’ ಓದಿ ಸಾಕಷ್ಟು ಅನುಭವ ಪಡೆಯುತ್ತಿದ್ದೇನೆ.
-ಎ. ಶಂಕರನಾರಾಯಣ ಭಟ್ಟ, ಮಧೂರು

ಸಣ್ಣವನಿದ್ದಾಗ ಪಕ್ಕದ ಮನೆಯಿಂದ “ಉದಯವಾಣಿ -ತರಂಗ’ ಪಡೆದು ಓದುತ್ತಿದ್ದೆ. ಅನಿಲಕಟ್ಟೆ ಎನ್ನುವ ಕುಗ್ರಾಮದ ರಸ್ತೆಗೆ ಡಾಮರು, ಬೀದಿದೀಪ ಸಹಿತ ಅನೇಕ ಸೌಕರ್ಯಗಳು ಲಭಿಸಲು “ಉದಯವಾಣಿ’ ಕಾರಣವಾಗಿದೆ.
– ಎ. ಅಬೂಬಕ್ಕರ್‌, ಅನಿಲಕಟ್ಟೆ, ವಿಟ್ಲ

 

Advertisement

Udayavani is now on Telegram. Click here to join our channel and stay updated with the latest news.

Next