Advertisement

ಓದುಗರ ಪ್ರೋತ್ಸಾಹವೇ ತರಂಗದ ಜೀವಾಳ: ಡಾ| ಸಂಧ್ಯಾ ಎಸ್‌. ಪೈ

11:54 PM May 12, 2023 | Team Udayavani |

ಮಂಗಳೂರು: ತರಂಗ ವಾರ ಪತ್ರಿಕೆ ಓದುಗರ ಜತೆಗೆ ಭಾವನಾತ್ಮಕ ಬೆಸುಗೆ ಹೊಂದಿದ್ದು, ಓದುಗ ವಲಯದ ಜತೆಗೆ ಅವಿನಾಭಾವ ನಂಟು ಬೆಳೆಸಿದೆ. ಓದುಗರ ನಿರಂತರ ಪ್ರೋತ್ಸಾಹದ ಮೂಲಕ ತರಂಗ ಮನೆ ಮಾತಾಗಿದೆ ಎಂದು ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್‌. ಪೈ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಹಂಪನಕಟ್ಟೆಯ ಎಸ್‌.ಎಲ್‌. ಶೇಟ್‌ ಜುವೆಲರ್ ಆ್ಯಂಡ್‌ ಡೈಮಂಡ್‌ ಹೌಸ್‌ನ ಪ್ರಾಯೋಜಕತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ “ತರಂಗ ಯುಗಾದಿ ಧಮಾಕ-2023’ರ ಅದೃಷ್ಟಶಾಲಿಗಳಿಗೆ ಮಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಶುಕ್ರವಾರ ನಡೆದ ಬಹುಮಾನ ವಿತರಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಓದುಗರು ಪತ್ರಿಕೆ ಖರೀದಿಸಿ, ಓದಿ, ಅದರ ಪುಟಗಳಲ್ಲಿ ಉತ್ತರ ಬರೆದು, ಪೋಸ್ಟ್‌ ಮಾಡಿ ಬಹುಮಾನಕ್ಕಾಗಿ ಕಾಯುವ ಅವರ ಪ್ರೀತಿ, ಗೌರವ, ತಾಳ್ಮೆ ನೋಡಿದಾಗ ಅಚ್ಚರಿಯಾಗುತ್ತದೆ. ಫ‌ಲಿತಾಂಶದಲ್ಲಿ ಬಹುಮಾನ ಕೆಲವರಿಗೆ ಮಾತ್ರ ಸಿಗಬಹುದು. ಆದರೆ ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ಎಲ್ಲರೂ ವಿಜೇತರೇ. ಓದುಗರ ಆ ಪ್ರಯತ್ನವೇ ಒಂದು ದೊಡ್ಡ ವಿಜಯ ಎಂದು ವಿಜೇತರ ಜತೆ ಸ್ಪರ್ಧೆಯಲ್ಲಿ ಭಾಗವಹಿಸಿದವರನ್ನೂ ಡಾ| ಸಂಧ್ಯಾ ಎಸ್‌. ಪೈ ಅವರು ನೆನಪಿಸಿಕೊಂಡರು.

ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬ ದಾಸರ ಮಾತಿನಂತೆ ಎಸ್‌.ಎಲ್‌. ಶೇಟ್‌ ಜುವೆಲರ್ ಆ್ಯಂಡ್‌ ಡೈಮಂಡ್‌ ಹೌಸ್‌ನ ಪ್ರಾಯೋಜಕತ್ವ ಈ ಕಾರ್ಯಕ್ರಮದ ಬೆನ್ನೆಲುಬು. ಕಾರ್ಯಕ್ರಮದ ಪ್ರಾಯೋ ಜಕತ್ವ ವಹಿಸಿ ಓದುಗರನ್ನು ಗೌರವಿಸು ತ್ತಿರುವುದು ನಮಗೂ ಹೆಮ್ಮೆಯ ಸಂಗತಿ ಎಂದವರು ಹೇಳಿದರು.

ಈ ಕಾರ್ಯಕ್ರಮ ಹಮ್ಮಿಕೊಳ್ಳು ವಲ್ಲಿ ತರಂಗ ವಾರಪತ್ರಿಕೆ ಬಳಗದ ಶ್ರಮ ಅಪಾರ ಎಂದು ಹೇಳಿದ ಡಾ| ಸಂಧ್ಯಾ ಎಸ್‌. ಪೈ, ಈ ಕಾರ್ಯಕ್ರಮ ಓದುಗರದೊಂದಿನ ಕೊಂಡಿಯಾಗಿರುವುದು ನಮಗೆಲ್ಲರಿಗೆ ಸಂತಸದ ವಿಚಾರ ಎಂದರು.

Advertisement

ಎಸ್‌.ಎಲ್‌. ಶೇಟ್‌ ಜುವೆಲರ್ ಆ್ಯಂಡ್‌ ಡೈಮಂಡ್‌ ಹೌಸ್‌ನ ಮಾಲಕ ಪ್ರಶಾಂತ್‌ ಶೇಟ್‌ ಮಾತನಾಡಿ, ಚಿನ್ನಾಭರಣ ಕ್ಷೇತ್ರದಲ್ಲಿ ಗುಣಮಟ್ಟ ಮತ್ತು ನಂಬಿಕೆಗೆ ಹೆಸರುವಾಸಿಯಾಗಿರುವ ನಮ್ಮ ಸಂಸ್ಥೆ, ಉದಯವಾಣಿ ಜತೆ ಉತ್ತಮ ಸಂಬಂಧ ಹೊಂದಿದೆ ಎಂದರು.

ಉದಯವಾಣಿ ಪತ್ರಿಕೆಯು ಸುದ್ದಿಗಳ ಗುಣಮಟ್ಟಕ್ಕೆ ಹೆಸರು ಪಡೆದಿರುವಂತೆಯೇ ತರಂಗ ಉತ್ತಮ ಸಂದೇಶಗಳನ್ನು ನೀಡುವ ಮ್ಯಾಗಝಿನ್‌ ಎಂದವರು ಮೆಚ್ಚುಗೆ ವ್ಯಕ್ತಪಡಿಸಿದರು.
ಎಸ್‌.ಎಲ್‌. ಶೇಟ್‌ ಜುವೆಲರ್ ಆ್ಯಂಡ್‌ ಡೈಮಂಡ್‌ ಹೌಸ್‌ನ ಪ್ರಮುಖ ರಾದ ಪದ್ಮಾ ಆರ್‌. ಶೇಟ್‌ ಅವರನ್ನು ತರಂಗ ಹಾಗೂ ಉದಯವಾಣಿ ಬಳಗದಿಂದ ಗೌರವಿಸಲಾಯಿತು.

ತರಂಗ ಸಂಪಾದಕಿ ಡಾ| ಯು.ಬಿ. ರಾಜಲಕ್ಷ್ಮೀ ಪ್ರಾಸ್ತಾವಿಕವಾಗಿ ಮಾತ ನಾಡಿ, ತರಂಗ ಕಳೆದ 41 ವರ್ಷಗಳಿಂದ ನಿರಂತರವಾಗಿ ಜನಮನವನ್ನು, ಹಿರಿಯರಿಂದ ಕಿರಿಯರನ್ನು ತಲುಪುವ ಎಲ್ಲ ರೀತಿಯ ವಿಚಾರಗಳನ್ನು ಒದಗಿಸುವ ಜತೆಗೆ ಈ ಧಮಾಕವನ್ನು ಓದುಗರ ಜತೆಗಿನ ಕೊಂಡಿಯಾಗಿ ನಿರ್ವಹಿಸುತ್ತ ಬರುತ್ತಿದೆ ಎಂದರು.

ಉದಯವಾಣಿ ಮ್ಯಾಗಝಿನ್ಸ್‌ ಮತ್ತು ಸ್ಪೆಷಲ್‌ ಇನಿಶಿಯೇಟಿವ್ಸ್‌ನ ಉಪಾಧ್ಯಕ್ಷ ರಾಮಚಂದ್ರ ಮಿಜಾರ್‌ ಸ್ವಾಗತಿಸಿ, ನಮ್ಮ ಪತ್ರಿಕೆಯ ಓದುಗರ ಪ್ರತಿನಿಧಿಗಳಾಗಿ ಸ್ಪರ್ಧೆಯ ವಿಜೇತರನ್ನು ಗೌರವಿಸುವ ಕಾರ್ಯಕ್ರಮ ಇದಾಗಿದೆ ಎಂದರು.

ಎಸ್‌.ಎಲ್‌. ಶೇಟ್‌ ಜುವೆಲರ್ ಆ್ಯಂಡ್‌ ಡೈಮಂಡ್‌ ಹೌಸ್‌ನ ಪ್ರಮುಖರಾದ ರಾಧಿಕಾ ಶೇಟ್‌, ನಿಶಾಂತ್‌ ಶೇಟ್‌, ಪ್ರಿಯಾ ಶೇಟ್‌ ಉಪಸ್ಥಿತರಿದ್ದರು.

ಅದೃಷ್ಟಶಾಲಿಗಳ ವಿವರವನ್ನು ಮಂಗಳೂರು ಉದಯವಾಣಿಯ ರೀಜನಲ್‌ ಮ್ಯಾನೇಜರ್‌ ಸತೀಶ್‌ ಮಂಜೇಶ್ವರ ನೀಡಿದರು. ಹಿರಿಯ ಛಾಯಾಗ್ರಾಹಕ ಸತೀಶ್‌ ಇರಾ ಪ್ರಾರ್ಥಿಸಿದರು. ಹಿರಿಯ ವರದಿಗಾರ ದಿನೇಶ್‌ ಇರಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಅದೃಷ್ಟಶಾಲಿ ಬಹುಮಾನ ವಿಜೇತರು
ಬಂಪರ್‌ ಬಹುಮಾನ: (8 ಗ್ರಾಂ ಚಿನ್ನದ ನಾಣ್ಯ) ಗೀತಾ ಉರಾಳ ಅನಂತನಗರ-ಮಣಿಪಾಲ.
ಪ್ರಥಮ: (4 ಗ್ರಾಂ ಚಿನ್ನದ ನಾಣ್ಯ) ಮಮತಾ ಉಮೇಶ್‌ ಮೇಸ್ತ ಜಲವಳ್ಳಿ-ಹೊನ್ನಾವರ, ಜಿ.ಬಿ. ಪಾಟೀಲ ಮುದ್ದೇಬಿಹಾಳ-ವಿಜಯಪುರ.
ದ್ವಿತೀಯ: (2 ಗ್ರಾಂ ಚಿನ್ನದ ನಾಣ್ಯ) ಭಾಗ್ಯಲಕ್ಷ್ಮೀ ಕಾಮತ್‌ ಕೊಡಿಯಾಲ್‌ಬೈಲು-ಮಂಗಳೂರು, ಸುಮಂತ್‌ ಶೆಟ್ಟಿ ಬಿ.ಟಿ.ಎಂ. ಲೇಔಟ್‌-ಬೆಂಗಳೂರು, ಸತೀಶ್‌ ಕುಮಾರ್‌ ಯಾದವಾಡ ಸರಸ್ವತಿಪುರ-ಹುಬ್ಬಳ್ಳಿ.
ತೃತೀಯ: (1 ಗ್ರಾಂ ಚಿನ್ನದ ನಾಣ್ಯ) ರಾಜ್‌ಕುಮಾರ್‌ ಪೈ ಕೋಡಿಕಲ್‌-ಮಂಗಳೂರು, ಶಿವಾನಂದ ಹುಕ್ರಟ್ಟೆ ನಲ್ಲೂರು-ಕಾರ್ಕಳ, ಎಸ್‌. ಚಂದ್ರಯ್ಯ ಆಚಾರ್‌ ತಡಂಬೈಲು-ಸುರತ್ಕಲ್‌, ಉಷಾ ಎ. ಸಂತೆಕಟ್ಟೆ-ಉಡುಪಿ.
ಸಮಾಧಾನಕರ: (10 ಗ್ರಾಂ ಬೆಳ್ಳಿ ನಾಣ್ಯ) ಶೋಭಾ ಲೋಕೇಶ್‌ ಮಂಜೇಶ್ವರ-ಕಾಸರಗೋಡು, ಪುರುಷೋತ್ತಮ ಸೆಟ್ಟಿಗಾರ್‌ ಭಾಂಡೂಪ್‌-ಮುಂಬಯಿ, ಕಿರಿಜಾಜಿ ಕೇಶವ್‌ ಹುಣಸೂರು-ಮೈಸೂರು, ವಾಣಿಶ್ರೀ ಭಾಸ್ಕರ ಮಾಂಜರೇಕರ ಚಿಕ್ಕೋಡಿ-ಬೆಳಗಾವಿ, ಕೆ.ಎಂ. ಶ್ರೀನಿವಾಸಮೂರ್ತಿ ದಾವಣಗೆರೆ, ಡಾ| ಕೆ.ಎಸ್‌. ಕುಲಕರ್ಣಿ ಅಡೂರು-ಹಾವೇರಿ, ಸಿ. ಹರೀಶ್‌ ಭದ್ರಾವತಿ, ಬಿ. ಮಂಜುನಾಥ ಭಟ್‌ ಚಿಕ್ಕಪೇಟೆ-ಚಿತ್ರದುರ್ಗ, ಶ್ರೇಯಸ್‌ ಜೆ.ಎನ್‌. ಎಸ್‌.ಎಸ್‌.ಪುರಂ-ತುಮಕೂರು, ವಿಜಯೇಂದ್ರ ಕುಲಕರ್ಣಿ ಕರುಣೇಶ್ವರನಗರ ಕಲಬುರಗಿ, ಜೆಸ್ಲಿನ್‌ ಡಿ’ಸೋಜಾ ದೇರಳಕಟ್ಟೆ-ಮಂಗಳೂರು, ದಿಶಾ ಎ. ಸಜೀಪಮೂಡು-ಬಂಟ್ವಾಳ, ಎ. ಆನಂದನ್‌ ಕುಕಿಕಟ್ಟೆ-ಉಡುಪಿ, ತೇಜಸ್ವಿನಿ ಎ. ಗೋಳಿತಟ್ಟು-ಕಡಬ, ತೇಜಸ್ವಿನಿ ಮಲ್ಯ ಶಿರಿಯಾರ-ಬ್ರಹ್ಮಾವರ, ವಿಶ್ವನಾಥ ಮೊಲಿ ಅರಮನೆಬಾಗಿಲು-ಮೂಡುಬಿದಿರೆ, ಶಿವಾನಿ ಎಸ್‌. ರೈ ನರಿಮೊಗರು-ಪುತ್ತೂರು, ಜಯಲಕ್ಷಿ ¾à ಕೆ. ಉಜಿರೆ-ಬೆಳ್ತಂಗಡಿ, ಐಶಾನಿ ಗರೋಡಿ ಕ್ರಾಸ್‌-ಕಾಪು, ಜಯಮಾಲಾ ಪ್ರಮೋದ್‌ ಕುಮಾರ್‌ ಮಣ್ಣಗುಡ್ಡ-ಮಂಗಳೂರು, ಸುನೀಲ್‌ ಕುಮಾರ್‌ ಜೆಪ್ಪು ಬಪ್ಪಲ್‌-ಮಂಗಳೂರು, ಗಾಯತ್ರಿ ಪಿ. ದಾಮಲೆ ಪಡೀಲ್‌ -ಮಂಗಳೂರು, ತುಳಸೀದಾಸ್‌ ಶ್ರೀಧರ ಆಚಾರ್ಯ ಪಕ್ಷಿಕೆರೆ-ಹಳೆಯಂಗಡಿ, ಗಿರೀಶ್‌ ಎಸ್‌. ಜಾಲಹಳ್ಳಿ-ಬೆಂಗಳೂರು, ಅಮಿತಾ ಎಂ. ಆಚಾರ್ಯ ಅಂಬಲಪಾಡಿ-ಉಡುಪಿ, ಹೇಮಂತ ಕುಮಾರ್‌ ಪುನರೂರು-ಕಿನ್ನಿಗೋಳಿ, ಶ್ರೀಲತಾ ಶ್ರೀಧರ ನಾಯಕ್‌ ನಾಡ-ಬೈಂದೂರು, ಸುಭಾಷಿನಿ ವೈದ್ಯ ಕೋಟೇಶ್ವರ-ಕುಂದಾಪುರ, ನಂದಿನಿ ಡಿ. ಶೇರಿಗಾರ್‌ ಕುಂಜಿಬೆಟ್ಟು-ಉಡುಪಿ, ಸೀತಾ ಬಂಗ್ಲೆಜಡ್ಡು-ಹೆಬ್ರಿ ಅವರು ಬಹುಮಾನ ಗಳಿಸಿದ್ದಾರೆ.

ನಮ್ಮ ಮನೆಯಲ್ಲಿ ಪ್ರತಿನಿತ್ಯ ಶುಭ ಮುಂಜಾನೆಯಾಗುವುದೇ ಉದಯವಾಣಿ ಓದುವುದರೊಂದಿಗೆ. ಕಾಲೇಜು ಸಮಯದಿಂದಲೂ ನಾನು ಉದಯವಾಣಿ ಮತ್ತು ತರಂಗ ಓದುಗಳಾಗಿದ್ದು, ಇದೀಗ ಅದೃಷ್ಟಶಾಲಿಯಾಗಿರುವುದು ಹೆಮ್ಮೆ ಅನಿಸಿದೆ
-ಭಾಗ್ಯಲಕ್ಷ್ಮೀ ಕಾಮತ್‌, ಕೊಡಿಯಾಲ್‌ಬೈಲ್‌, ಮಂಗಳೂರು

ಓದುಗರ ಅಭಿರುಚಿಗೆ ತಕ್ಕಂತೆ ಆಸಕ್ತಿದಾಯಕ ವಿಷಯಗಳನ್ನು ನೀಡುತ್ತ ಬಂದಿರುವ ತರಂಗ ಯುಗಾದಿ ಧಮಾಕದಲ್ಲಿ ಅದೃಷ್ಟಶಾಲಿಯಾಗಿ ಬಹುಮಾನ ಪಡೆದಿರುವುದು ಸಂತಸ ತಂದಿದೆ
-ಶಿವಾನಂದ ಹುಕ್ರಟ್ಟೆ , ನಲ್ಲೂರು, ಕಾರ್ಕಳ

ಉದಯವಾಣಿ, ತರಂಗ, ತುಷಾರ ಸಂಚಿಕೆಗಳನ್ನು ಓದುವ ಹವ್ಯಾಸ ಮೊದಲಿನಿಂದಲೂ ಇದೆ. ಕಳೆದ ಐದಾರು ವರ್ಷಗಳಿಂದ ದೀಪಾವಳಿ, ಯುಗಾದಿ ಧಮಾಕದಲ್ಲಿ ಸ್ಪರ್ಧಿಸುತ್ತಿದ್ದೇನೆ. ಈ ಬಾರಿ ಬಂಪರ್‌ ಬಹುಮಾನವೇ ದೊರಕಿರುವುದು ಖುಷಿ ನೀಡಿದೆ
– ಗೀತಾ ಉರಾಳ ಅನಂತನಗರ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next