Advertisement

Supreme Court; ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಆಶಿಶ್ ಮಿಶ್ರಾಗೆ ಜಾಮೀನು

05:34 PM Jul 22, 2024 | Team Udayavani |

ಹೊಸದಿಲ್ಲಿ : 8 ಮಂದಿಯನ್ನು ಬಲಿತೆಗೆದುಕೊಂಡ 2021ರ ಲಖಿಂಪುರ ಖೇರಿ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮಾಜಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರಿಗೆ ಸುಪ್ರೀಂ ಕೋರ್ಟ್ ಸೋಮವಾರ ಷರತ್ತುಬದ್ಧ ಜಾಮೀನು ನೀಡಿದೆ. ದೆಹಲಿ ಅಥವಾ ಲಕ್ನೋಗೆ ತೆರಳದಂತೆ ನಿರ್ಬಂಧ ವಿಧಿಸಿದೆ.

Advertisement

ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರ ಪೀಠ ಪ್ರಕರಣದಲ್ಲಿ ನಾಲ್ವರು ರೈತರಾದ ಗುರುವಿಂದರ್ ಸಿಂಗ್, ಕಮಲ್ಜೀತ್ ಸಿಂಗ್, ಗುರುಪ್ರೀತ್ ಸಿಂಗ್ ಮತ್ತು ವಿಚಿತ್ರಾ ಸಿಂಗ್ ಅವರಿಗೂ ಜಾಮೀನು ನೀಡಿ ವಿಚಾರಣೆಯನ್ನು ತ್ವರಿತಗೊಳಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿತು.

ಅಕ್ಟೋಬರ್ 3, 2021 ರಂದು, ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಟಿಕುನಿಯಾದಲ್ಲಿ ನಾಲ್ಕು ರೈತರು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದರು. SUV ಕಾರು ನಾಲ್ವರು ರೈತರ ಮೇಲೆ ಹರಿದಿದ್ದು ಆ ಬಳಿಕ ರೊಚ್ಚಿಗೆದ್ದ ಪ್ರತಿಭಟನಾ ನಿರತ ರೈತರು ಒಬ್ಬ ಚಾಲಕ ಮತ್ತು ಇಬ್ಬರು ಬಿಜೆಪಿ ಕಾರ್ಯಕರ್ತರನ್ನು ಹತ್ಯೆಗೈದಿದ್ದರು ಎಂದು ಆರೋಪಿಸಲಾಗಿದೆ. ಹಿಂಸಾಚಾರದಲ್ಲಿ ಒರ್ವ ಪತ್ರಕರ್ತ ಸಾವನ್ನಪ್ಪಿದ್ದರು.
ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರ ಭೇಟಿಯನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾಗ ಹಿಂಸಾಚಾರ ಭುಗಿಲೆದ್ದಿತ್ತು. ಪ್ರಕರಣಕ್ಕೆ ಸಂಬಂಧಿಸಿ ಕಳೆದ ವರ್ಷ ಜನವರಿ 25 ರಂದು ಆಶಿಶ್ ಮಿಶ್ರಾಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು.

ವಿಚಾರಣೆ ಆರಂಭವಾಗುತ್ತಿದ್ದಂತೆ ಮಿಶ್ರಾ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ ದೇವ್, ಆರೋಪಿಯ ತಂದೆ ಈಗ ಸಂಸದ ಅಥವಾ ಸಚಿವರಲ್ಲ.ಅವರು ಚುನಾವಣೆಯಲ್ಲಿ ಸೋತಿದ್ದಾರೆ. ಹಾಗಾಗಿ ಎಷ್ಟು ಪ್ರಭಾವಿ ಎಂಬುದಕ್ಕೆ ಸೃಷ್ಟಿಯಾದ ಸಂಪೂರ್ಣ ವಿವಾದ ದೂರವಾಗಿದೆ ಎಂದು ದೇವ್ ಹೇಳಿದ್ದಾರೆ.

ಸಂತ್ರಸ್ತರೊಬ್ಬರ ಪರ ವಾದ ಮಂಡಿಸಿದ ವಕೀಲ ಪ್ರಶಾಂತ್ ಭೂಷಣ್, 19 ತಿಂಗಳ ನಂತರ 200 ಸಾಕ್ಷಿಗಳ ಪೈಕಿ ಕೇವಲ ಏಳು ಮಂದಿಯ ವಿಚಾರಣೆ ಮಾತ್ರ ನಡೆಸಲಾಗಿದೆ. ಈ ರೀತಿ ನಡೆದರೆ ವಿಚಾರಣೆ ಕೊನೆಗೊಳ್ಳುವುದಿಲ್ಲ ಎಂದು ವಾದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next