ಎಚ್.ಡಿ.ಕೋಟೆ: ತಾಲೂಕಿನ ಪ್ರಮುಖ ಜಲಾಶಯಗಳಲ್ಲೊಂದಾದ ತಾರಕ ಜಲಾಶಯವೂ ಕೂಡ 5 ವರ್ಷಗಳ ನಂತರ ಭರ್ತಿಯಾಗಿದೆ, 350 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ತಾರಕ ಜಲಾಶಯ ಭರ್ತಿಯಾಗಿರುವ ಕಾರಣ ತಾಲೂಕಿನ ರೈತರಲಿ ಸಂತಸ ಮೂಡಿದೆ.
ತಾರಕ ಜಲಾಶಯ 17400 ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿದ್ದು, 5 ವರ್ಷಗಳ ನಂತರ ಅವಧಿಗೂ ಮುನ್ನವೇ ಜಲಾಶಯ ಭರ್ತಿಯಾಗಿರುವುದರಿಂದ ತಾಲೂಕಿನ ಸಾವಿರಾರು ಎಕರೆ ಪ್ರದೇಶ ನೀರಾವರಿ ಭಾಗ್ಯ ಕಾಣಲಿದೆ. ತಾಲೂಕಿನ ರೈತರ ಸಾವಿರಾರು ಎಕರೆ ಕೃಷಿ ಭೂಮಿ ನೀರಾವರಿ ಪ್ರದೇಶವಾಗಿ ಪರಿವರ್ತನೆಯಾಗಲಿದೆ.
ಕಳೆದ ಒಂದು ತಿಂಗಳಿನಿಂದ ಜಲಾಶಯದ ಹಿನ್ನೀರು ವ್ಯಾಪ್ತಿ ಸೇರಿದಂತೆ ಸಾರಥಿಹೊಳೆ ವ್ಯಾಪ್ತಿ ಪ್ರದೇಶದಲ್ಲಿ ಹೆಚ್ಚಿನ ಮಳೆಯಾದ ಪರಿಣಾಮ ಜೊತೆಗೆ ಕಬಿನಿ ಜಲಾಶಯ ಬೇಗ ಭರ್ತಿಗೊಂಡು ತಾರಕ ಜಲಾಶಯಕ್ಕೆ ಏತ ನೀರಾವರಿ ಮೂಲಕ ದಿನಲೂ 150 ಕ್ಯೂಸೆಕ್ ನೀರನ್ನು ಇಂದಿನವರೆಗೂ ಲಿಪ್ಟ್ ಮಾಡಿರುವ ಕಾರಣ.
ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದು ಜಲಾಶಯದ ನೀರಿನ ಸಂಗ್ರಹ ಗರಿಷ್ಟ ಮಟ್ಟ 2425 (3.947,ಟಿಎಂಸಿ) ಅಡಿಗಳನ್ನು ತಲುಪಿದೆ. 5 ವರ್ಷಗಳ ನಂತರ ಜಲಾಶಯ ಭರ್ತಿಯಾಗಿರುವುದರಿಂದ ಅಚ್ಚುಕಟ್ಟು ವ್ಯಾಪ್ತಿಯ ಎಡ ಹಾಗೂ ಬಲದಂಡೆ ನಾಲೆಗಳ ವ್ಯಾಪ್ತಿಯ 17400 ಸಾವಿರ ಎಕರೆ ಪ್ರದೇಶದ ರೈತರ ಹೊಲ ಗದ್ದೆಗಳಲ್ಲಿ ಬೆಳೆದ ಬೆಳೆಗಳಿಗೆ ನೀರು ಹರಿಸಬಹುದಾಗಿದೆ.
ಜಲಾಶಯ ಭರ್ತಿಯಾಗಿ ಹೆಚ್ಚಿನ ನೀರನ್ನು ಹೊರ ಬಿಡುತ್ತಿರುವುದರಿಂದ ಜಲಾಶಯದ ಅಧಿಕಾರಿಗಳು ಜಲಾಶಯದ ಭದ್ರತೆ ದೃಷ್ಟಿಯಿಂದ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಒಟ್ಟಾರೆ ತಾರಕ ಜಲಾಶಯ ಭರ್ತಿಯಾಗುವ ಮೂಲಕ ಕಾವೇರಿ ಕಣಿವೆಗೆ ಸೇರಿದ ತಾಲೂಕಿನ ಮೂರು ಜಲಾಶಯಗಳು ಭರ್ತಿಯಾಗಿವೆ. ತಾಲೂಕಿನ ರೈತರಲ್ಲಿ ಸಂತ ಮೂಡಿಸಿದೆ.
ಜಲಾಶಯದ ಹಿನ್ನೀರು ವ್ಯಾಪ್ತಿ ಸೇರಿದಂತೆ ನಾರಹೊಳೆ ಹಾಗೂ ಸಾರಥಿಹೊಳೆ ವ್ಯಾಪ್ತಿ ಪ್ರದೇಶದಲ್ಲಿ ಹೆಚ್ಚಿನ ಮಳೆಯಾದ ಪರಿಣಾಮ ಜಲಾಶಯ ಭರ್ತಿಯಾಗಿದೆ, ಮುಂದಿನ ಆಗಸ್ಟ್.1ರಂದು ಕ್ಷೇತ್ರದ ಸಂಸದ ಆರ್.ಧƒವನಾರಾಯಣ್ ಹಾಗೂ ಶಾಸಕ ಸಿ.ಅನಿಲ್ ಚಿಕ್ಕಮಾದು ಅವರು ಪೂಜೆ ಸಲ್ಲಿಸಿ ಭಾಗಿನ ಆರ್ಪಿಸಲಿದ್ದಾರೆ, ನಂತರ ಜಲಾಶಯದ ಅಚ್ಚುಕಟ್ಟು ರೈತರು ಬೆಳೆದ ಬೆಳೆಗಳಿಗೆ ಈ ಬಾರಿ ನೀರು ಹರಿಸಲಾಗುತ್ತದೆ.
-ನಾಗರಾಜು. ಜಲಾಶಯ ಎಇಇ
* ಬಿ.ನಿಂಗಣ್ಣಕೋಟೆ