Advertisement
ಶ್ರೀಕೃಷ್ಣ ಮಠದಲ್ಲಿ ಬೆಳಗ್ಗೆ ಬೇಗ ಮಹಾ ಪೂಜೆಯನ್ನು ಪೂರೈಸಿದ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಮತ್ತು ಶ್ರೀ ಅದಮಾರು ಕಿರಿಯ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು, ಶ್ರೀಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಅಪರಾಹ್ನದವರೆಗೆ ಸಾವಿರಾರು ಭಕ್ತರಿಗೆ ನಿರಂತರ ಮುದ್ರಾಧಾರಣೆ ನಡೆಸಿದರು. ಮಧ್ಯಾಹ್ನದ ಅನಂತರ ಜನಸಂದಣಿ ಕಡಿಮೆಯಾಯಿತಾದರೂ ಸಂಜೆವರೆಗೂ ಮತ್ತು ರಾತ್ರಿ ಪೂಜೆ ಸಮಯದಲ್ಲಿ ಮತ್ತೆ ತಪ್ತ ಮುದ್ರಾಧಾರಣೆ ನಡೆಸಿದರು.
ಧಾರಣೆ ನಡೆಸಿದರು. ಸುರತ್ಕಲ್ ಸಮೀಪದ ಚಿತ್ರಾಪುರ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಚಿತ್ರಾಪುರ ಮಠಾಧೀಶರು ಮುದ್ರಾಧಾರಣೆ ನಡೆಸಿದರು.
Related Articles
Advertisement
ಬೆಂಗಳೂರು, ಮೈಸೂರು ಮೊದಲಾದೆಡೆ ಮಠಾಧೀಶರು ವಿವಿಧೆಡೆ ಮುದ್ರಾಧಾರಣೆ ನಡೆಸಿದರು. ಹಲವು ದೇವಸ್ಥಾನಗಳಲ್ಲಿ ನಿರಂತರ ಭಜನೆ, ಪೂಜಾದಿಗಳು ನಡೆದವು. ವಿವಿಧೆಡೆ ಶನಿವಾರವೂ ಮುದ್ರಾಧಾರಣೆ ನಡೆಯಲಿದೆ.
ಸರ್ವಜ್ಞ ಪೀಠದಲ್ಲಿ ಮೊದಲ ಬಾರಿ ಮುದ್ರಾಧಾರಣೆಇದೇ ಮೊದಲ ಬಾರಿಗೆ ಶ್ರೀ ಪಲಿಮಾರು ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಸರ್ವಜ್ಞ ಸಿಂಹಾಸನದಲ್ಲಿದ್ದು ಮುದ್ರಾಧಾರಣೆ ನಡೆಸಿದರು. ಗರ್ಭಗುಡಿ ಆವರಣದಲ್ಲಿ ಅದಮಾರು ಮತ್ತು ಪಲಿಮಾರು ಕಿರಿಯ ಶ್ರೀಗಳು ಮುದ್ರಾಧಾರಣೆ ನಡೆಸಿದರು.