Advertisement

ವಿವಿಧೆಡೆ ಇಂದು ತಪ್ತಮುದ್ರಾಧಾರಣೆ

03:45 AM Jul 04, 2017 | Karthik A |

ಉಡುಪಿ/ಮಂಗಳೂರು: ಪ್ರಥಮನ ಏಕಾದಶಿಯ ಜು. 4ರಂದು ನಾಡಿನ ವಿವಿಧೆಡೆ ಮಠಾಧೀಶರಿಂದ ತಪ್ತಮುದ್ರಾಧಾರಣೆ ನಡೆಯಲಿದೆ. ಸುದರ್ಶನ ಹೋಮದ ಶಾಖದಲ್ಲಿ ಶಂಖ ಚಕ್ರದ ಮುದ್ರೆಯನ್ನು ಬಿಸಿ ಮಾಡಿ ಅದರ ಲಾಂಛನವನ್ನು ತೋಳಿನಲ್ಲಿ ಮುದ್ರಿಸಿಕೊಳ್ಳುವುದು ತಪ್ತಮುದ್ರಾಧಾರಣೆಯಾಗಿದೆ.

Advertisement

ಶ್ರೀಕೃಷ್ಣ ಮಠದಲ್ಲಿ ಜು. 4ರ ಬೆಳಗ್ಗೆ 9ರಿಂದ ಪರ್ಯಾಯ ಶ್ರೀ ಪೇಜಾವರ ಉಭಯ ಶ್ರೀಗಳು ಮುದ್ರಾಧಾರಣೆ ನಡೆಸುವರು. ಶ್ರೀ ಕೃಷ್ಣಾಪುರ ಮತ್ತು ಶ್ರೀ ಶೀರೂರು ಮಠಾಧೀಶರು ಸ್ವಮಠದಲ್ಲಿ, ಶ್ರೀ ಸುಬ್ರಹ್ಮಣ್ಯ ಮಠಾಧೀಶರು ಬೆಳಗ್ಗಿನಿಂದ ಕ್ರಮವಾಗಿ ಉಜಿರೆ ಜನಾರ್ದನ ದೇವಸ್ಥಾನ, ಕೆಮ್ಮಾಯಿ ವಿಷ್ಣುಮೂರ್ತಿ ದೇವಸ್ಥಾನ, ಪುತ್ತೂರು ಕೆಮ್ಮಿಂಜೆ ಸುಬ್ರಹ್ಮಣ್ಯ ದೇವಸ್ಥಾನ, ಸುಬ್ರಹ್ಮಣ್ಯ ಮಠದಲ್ಲಿ, ಬಾಳೆಗಾರು ಶ್ರೀಗಳು ಕ್ರಮವಾಗಿ ಪೆರ್ಡೂರು ದೇವಸ್ಥಾನ, ಪಾವಂಜೆ ಮಹಾಲಿಂಗೇಶ್ವರ ದೇವಸ್ಥಾನ, ಮಂಗಳೂರು ನೆಲ್ಲಿಕಾಯಿ ರಾಘವೇಂದ್ರ ಮಠ, ಬನ್ನಡ್ಕ ರಾಘವೇಂದ್ರ ಮಠ, ಕಾರ್ಕಳ ಅನಂತಶಯನ ದೇವಸ್ಥಾನ, ಅಜೆಕಾರು, ಪಲಿಮಾರು ಮಠದಲ್ಲಿ, ಪುತ್ತೂರು ತಾ| ಉಪ್ಪಿನಂಗಡಿ ಸಮೀಪದ ಎರ್ಕಿ ಮಠದಲ್ಲಿ ಮುದ್ರಾಧಾರಣೆ ನಡೆಸುವರು.

ಶ್ರೀ ಕಾಣಿಯೂರು ಶ್ರೀಗಳು ಚೆನ್ನೈ ಟಿ. ನಗರ ರಾಘವೇಂದ್ರ ಮಠ, ಶ್ರೀ ಪುತ್ತಿಗೆ ಶ್ರೀಗಳು ಬೆಂಗಳೂರು ಬಸವನಗುಡಿ ಪುತ್ತಿಗೆ ಮಠ, ಶ್ರೀ ಅದಮಾರು ಶ್ರೀಗಳು ಬಳ್ಳಾರಿ, ಕಿರಿಯ ಶ್ರೀಗಳು ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠ, ಶ್ರೀ ಪಲಿಮಾರು ಶ್ರೀಗಳು ಕ್ರಮವಾಗಿ ಮಲ್ಲೇಶ್ವರಂ ಸ್ವಮಠ, ಮೈಸೂರಿನಲ್ಲಿ 4 ಸ್ಥಳಗಳಲ್ಲಿ, ಕೆ.ಆರ್‌. ನಗರಕೃಷ್ಣ ಮಂದಿರದಲ್ಲಿ, ಶ್ರೀಸೋದೆ ಸ್ವಾಮೀಜಿ ಬೆಂಗಳೂರು ಚಾಮರಾಜಪೇಟೆ ಕಲ್ಯಾಣ ಮಂಟಪದಲ್ಲಿ, ಶ್ರೀ ಭಂಡಾರಕೇರಿ ಶ್ರೀಗಳು ಹುಬ್ಬಳ್ಳಿ ದೇಶಪಾಂಡೆ ನಗರ ರಾಘವೇಂದ್ರ ಮಠ, ಧಾರವಾಡ, ಬೆಳಗಾವಿಯಲ್ಲಿ, ಶ್ರೀ ಭೀಮನಕಟ್ಟೆ ಶ್ರೀಗಳು ತುಮಕೂರಿನಲ್ಲಿ ಮುದ್ರಾಧಾರಣೆ ನಡೆಸುವರು.

ಕಾಶೀ, ಗೋಕರ್ಣ ಶ್ರೀಗಳು
ಶ್ರೀ ಕಾಶೀ ಮಠಾಧೀಶರು ಮಂಗಳೂರು ಕೊಂಚಾಡಿ ಸ್ವಮಠದಲ್ಲಿ, ಶ್ರೀ ಗೋಕರ್ಣ ಪರ್ತಗಾಳಿ ಮಠಾಧೀಶರು ಪರ್ತಗಾಳಿ ಸ್ವಮಠದಲ್ಲಿ ಚಾತುರ್ಮಾಸ್ಯವ್ರತ ಆರಂಭಿಸುವ ಜು. 14ರಂದು ತಪ್ತಮುದ್ರಾಧಾರಣೆ ನಡೆಸುವರು.

Advertisement

Udayavani is now on Telegram. Click here to join our channel and stay updated with the latest news.

Next