ನೆಲಮಂಗಲ: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತದ ನೂತನ ಆಡಳಿತ ಮಂಡಳಿ ಚುನಾವಣೆ ನ.15ರಂದು ನಡೆಯಲಿದೆ. ಗ್ರಾಮೀಣ ಭಾಗದಲ್ಲಿ ಚುನಾವಣೆ ಕಾವು ರಂಗೇರುತ್ತಿದೆ.
ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿಯ 13 ಸ್ಥಾನಗಳಲ್ಲಿ ಎ ತರಗತಿಯಿಂದ ಅಂದರೆ ತಾಲೂಕಿನ 19 ವಿಎಸ್‌ಎಸ್‌ಎನ್ ಸಂಘಗಳು ಮತಚಲಾಯಿಸುವ ಮೂಲಕ ಆಯ್ಕೆಯಾಗುವ 6 ಸ್ಥಾನಗಳಿಗೆ ಹಾಗೂ ಬಿ ತರಗತಿಯಿಂದ ಅಂದರೆ ತಾಲೂಕಿನ ತ್ಯಾಮಗೊಂಡ್ಲು, ಕಸಬಾ ಮತ್ತು ಸೋಂಪುರ ಹೋಬಳಿಯ ಬಿಡಿ ಸದಸ್ಯರಿಂದ ಆಯ್ಕೆಯಾಗುವ 7 ಸ್ಥಾನಗಳು ಒಟ್ಟುಗೂಡಿ ಆಡಳಿ ತಮಂಡಳಿ ರಚನೆಯಾಗಬೇಕಿದೆ.
ಮತದಾರರು: ತಾಲೂಕಿನ 19 ಸಹಕಾರ ಸಂಘಗಳ ಸಂಘಗಳ ಪೈಕಿ ಶ್ರೀನಿವಾಸ್‌ಪುರ ಸಹಕಾರ ಸಂಘಮತದಾನದ ಅರ್ಹತೆಕಳೆದುಕೊಂಡಿದ್ದು, ನ್ಯಾಯಾಲಯದ ಮೆಟ್ಟಿಲೇರಿದೆ. ಉಳಿದ 18 ವಿಎಸ್‌ಎಸ್‌ಎನ್ ಸಂಘಗಳು 6 ಸ್ಥಾನಗಳಿಗೆ ಮತದಾನ ಮಾಡಬೇಕಾಗಿದೆ. ಕಸಬಾ ಹೋಬಳಿಯ 1 ಸಾಮಾನ್ಯ ಸ್ಥಾನ, ಪರಿಶಿಷ್ಟ ಪಂಗಡದ 1 ಸ್ಥಾನಕ್ಕೆ 198 ಮಂದಿ ಸದಸ್ಯರು ಮತದಾನ ಮಾಡಲಿದ್ದಾರೆ.
ಅವಿರೋಧ ಆಯ್ಕೆ: ಕಸಬಾ ಹೋಬಳಿಯ ಹಿಂದುಳಿದ ಪ್ರವರ್ಗ ಎ ಸ್ಥಾನಕ್ಕೆ ಎ.ಪಿಳ್ಳಪ್ಪ, ತ್ಯಾಮಗೊಂಡ್ಲು ಹಿಂದುಳಿದ ವರ್ಗದ 1 ಸ್ಥಾನಕ್ಕೆ ಮಹಮದ್ ಸಿರಾಜ್ ಅಹಮದ್, ಪರಿಶಿಷ್ಟ ಜಾತಿ ಮೀಸಲು ಸ್ಥಾನಕ್ಕೆ ಹನುಮಂತಯ್ಯ ಹಾಗೂ ಸೋಂಪುರ ಹೋಬಳಿ 2 ಮಹಿಳಾ ಮೀಸಲು ಸ್ಥಾನಕ್ಕೆ ಮಂಜುಳಾ.ಜಿ ಮತ್ತು ಸಿಂಧು ಎಚ್.ಎಂ ಅವರು ಅವಿ ರೋಧವಾಗಿ ಆಯ್ಕೆಯಾಗಿದ್ದಾರೆ.
ಅಭ್ಯರ್ಥಿಗಳು: ಟಿಎಪಿಸಿಎಂಎಸ್‌ನ ಆಡಳಿತ ಮಂಡಳಿ ಉಳಿದ ಎಂಟು ಸ್ಥಾನಗಳಲ್ಲಿ ಎ.ತರಗತಿಯಿಂದ ಸ್ಪರ್ಧೆಗೆ ಮುಂದಾಗಿದ್ದ13 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಅಂತಿಮವಾಗಿ 5 ಮಂದಿ ನಾಮಪತ್ರ ಹಿಂಪಡೆದಿದ್ದಾರೆ. ಕೆ.ಆರ್.ಗುರುಪ್ರಕಾಶ್, ಜಿ.ಗಂಗರಾಜು, ಬಿ.ಎನ್.ಗಂಗರಾಜು, ಜಗಜ್ಯೋತಿ ಬಸವೇಶ್ವರ, ಎಚ್.ನಾಗಭೂಷಣ್, ಟಿಎಸ್.ಮೋಹನ್‌ಕುಮಾರ್, ವೀರಮಾರೇಗೌಡ, ಶಿವರಾಮಯ್ಯ ಅವರು ಚುನಾವಣೆ ಎದುರಿಸಲಿದ್ದಾರೆ.ಕಸಬಾ ಹೋಬಳಿಯ ಸಾಮಾನ್ಯ ಸ್ಥಾನಕ್ಕೆ9 ಮಂದಿ ನಾಮಪತ್ರ ಸಲ್ಲಿಸಿದ್ದು, 6 ಮಂದಿ ನಾಮಪತ್ರ ವಾಪಾಸ್Õ ಪಡೆದಿದ್ದಾರೆ.ಕುಮಾರ್.ಎಂ. ವೆಂಕಟೇಶ್, ಜಿ.ಸಂಪತ್‌ಕಣದಲ್ಲಿದ್ದರೆ, ಪರಿಶಿಷ್ಟ ಪಂಗಡದಿಂದ ನರಸಿಂಹಮೂರ್ತಿ ಹಾಗೂ ನರಸಿಂಹರಾಜು ಚುನಾವಣೆ ಎದುರಿಸಲಿದ್ದಾರೆ. ಚುನಾವಣೆ: ನ.15ರ ಬೆಳ್ಳಗ್ಗೆ10 ರಿಂದ ಮಧ್ಯಾಹ್ನ3 ಗಂಟೆವರೆಗೂ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಚುನಾವಣೆ ನಡೆಯಲಿದೆ. ಮಧ್ಯಾಹ್ನ 3 ಗಂಟೆ ನಂತರ ಮತ ಎಣಿಕೆ ಕಾರ್ಯ ನಡೆಯಲಿದೆ. ತಹಶೀಲ್ದಾರ್ ಎಂ. ಶ್ರೀನಿವಾಸಯ್ಯ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.