Advertisement

Kannada Cinema; ಪುನೀತ್ ಹಾಡುಗಳಿಗೆ ತಾನ್ಯಾ ಸ್ಟೆಪ್ಸ್; ಗೌರಿ ತಂಡದಿಂದ ಸ್ಪೆಷಲ್ ಹಾಡು

04:33 PM Feb 25, 2024 | Team Udayavani |

ಇಂದ್ರಜಿತ್‌ ಲಂಕೇಶ್‌ ನಿರ್ದೇಶನದ “ಗೌರಿ’ ಚಿತ್ರದ ಹಾಡೊಂದರಲ್ಲಿ ತಾನ್ಯಾ ಹೋಪ್‌ ಹೆಜ್ಜೆ ಹಾಕಿದ್ದಾರೆ. ಈ ಚಿತ್ರದ ಮೂಳಕ ಇಂದ್ರಜಿತ್‌ ಪಯತ್ರ ಸಮರ್ಜಿತ್‌ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

Advertisement

ಪುನೀತ್‌ ಅವರ ಹುಟ್ಟುಹಬ್ಬಕ್ಕೆ ಗೌರಿ ತಂಡದಿಂದ ವಿಶೇಷ ಗೀತೆಯೊಂದು ನೀಡಲಿದೆ. ನಟಿ ತಾನ್ಯ ಹೋಪ್‌ ಹೆಜ್ಜೆ ಹಾಕಲಿದ್ದಾರೆ. ಮೋಹನ್‌ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ. “ನಾನು ಅಪ್ಪು ಅವರ ಅಭಿಮಾನಿ. ಪುನೀತ್‌ ಅವರ ಡ್ಯಾನ್ಸ್‌ ನನಗೆ ಸ್ಪೂರ್ತಿ. ಹಾಗಾಗಿ ಅವರ ಹುಟ್ಟುಹಬ್ಬದಂದು ಗೌರಿ ಚಿತ್ರತಂಡದಿಂದ ಈ ಹಾಡನ್ನು ಬಿಡುಗಡೆ ಮಾಡುವ ಮೂಲಕ ಅವರಿಗೆ ನಮನ ಸಲ್ಲಿಸುತ್ತಿದ್ದೇವೆ’ ಎನ್ನುವುದು ನಾಯಕ ನಟ ಸಮರ್ಜಿತ್‌ ಮಾತು.

“ಈಗಾಗಲೇ ಗೌರಿ ಚಿತ್ರದ ಚಿತ್ರೀಕರಣ  ಮುಕ್ತಾಯ ಹಂತ ತಲುಪಿದೆ. ಪುನೀತ್‌ ಅವರ ಹುಟ್ಟುಹಬ್ಬಕ್ಕೆ ಗೌರಿ ಚಿತ್ರತಂಡದಿಂದ ವಿಶೇಷ ಹಾಡೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಪುನೀತ್‌ ರಾಜಕುಮಾರ್‌ ಅವರ ಚಿತ್ರಗಳ ಪ್ರಸಿದ್ದ ಹಾಡುಗಳಿಗೆ ಸಮರ್ಜಿತ್‌ ಹಾಗೂ ತಾನ್ಯ ಹೋಪ್‌ ಹೆಜ್ಜೆ ಹಾಕಲಿದ್ದಾರೆ. ಈ ವಿಶೇಷ ಗೀತೆಯ ತಾಲೀಮು ನಡೆಯುತ್ತಿದೆ. ಸದ್ಯದಲ್ಲೇ ಚಿತ್ರೀಕರಣವಾಗಲಿದೆ’ಎನ್ನುತ್ತಾರೆ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌.

Advertisement

Udayavani is now on Telegram. Click here to join our channel and stay updated with the latest news.

Next