ಮುದ್ದೇಬಿಹಾಳ: ಮೈಸೂರು ಮಹಾನಗರ ಪಾಲಿಕೆ ಮೇಯರ್ ವಿಷಯದಲ್ಲಿ ಮಾಜಿ ಸಚಿವ, ಹಾಲಿ ಶಾಸಕ ತನ್ವೀರ್ ಸೇಠ್ ಅವರ ತೇಜೋವಧೆ ಖಂಡಿಸಿ ಕರ್ನಾಟಕ ಮುಸ್ಲಿಂ ಕೌನ್ಸಿಲ್, ಶಾಸಕ ತನ್ವಿರ್ ಸೇಠ್ ಅಭಿಮಾನಿ ಬಳಗದಿಂದ ಪಟ್ಟಣದ ಇಂದಿರಾ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭ ಕೌನ್ಸಿಲ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ರಿಸಾಲ್ದಾರ್ ಮಾತನಾಡಿ, ತೇಜೋವಧೆ ಯತ್ನ ಖಂಡಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಶೀಘ್ರವೇ ನಿಯೋಗದಲ್ಲಿ ಭೇಟಿ ಮಾಡಿ ತೇಜೋವಧೆ ಮಾಡುತ್ತಿರುವವರ ಮೇಲೆ ಕ್ರಮಕ್ಕೆ ಒತ್ತಾಯಿಸಲಾಗುತ್ತದೆ. ಕಾಂಗ್ರೆಸ್ ನ ಕೆಲವರು ಮುಸ್ಲಿಂ ನಾಯಕತ್ವ ಮುಗಿಸಲು ಸಂಚು ನಡೆಸುತ್ತಿದ್ದಾರೆ.
ಈಗಾಗಲೇ ರೋಷನ್ ಬೇಗ್, ಸಿ.ಎಂ. ಇಬ್ರಾಹಿಂ, ಹಿಂಡಸಗೇರಿ ಮತ್ತಿತರರನ್ನುಕಡೆಗಣಿಸಿದ್ದಾರೆ. ಅದೇ ಹಾದಿಯಲ್ಲಿ ತನ್ವೀರ್ ಸೇಠ್ ರ ನಾಯಕತ್ವವನ್ನೂ ಮುಗಿಸಲು ಸಂಚು ನಡೆಸುತ್ತಿದ್ದಾರೆ ಎಂದರು. ಕಾಂಗ್ರೆಸ್‌ಗೆ ಮುಸ್ಲಿಮರ ಕಾಣಿಕೆ ಅಮೋಘವಾದದ್ದು. ಕಾಂಗ್ರೆಸ್‌ನ ಕೆಲ ಮುಖಂಡರ ವರ್ತನೆ ಇದೇ ರೀತಿ ಮುಂದುವರಿಸಿದಲ್ಲಿ ಮುಂಬರುವ ದಿನಗಳಲ್ಲಿ ಮುಸ್ಲಿಂ ಸಮಾಜದವರು ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕೌನ್ಸಿಲ್ ಮುಖಂಡ ಎಂ.ಸಿ. ಮ್ಯಾಗೇರಿ ವಕೀಲರು ಮಾತನಾಡಿ, ತೇಜೋವಧೆಯಂಥ ಹೇಯ ಕೃತ್ಯವನ್ನು ಕೂಡಲೇ ಕೈಬಿಡಬೇಕು. ತನ್ವೀರ್ ಸೇಠ್ ಹಿಂದೆ ರಾಜ್ಯದ ಇಡಿ ಮುಸ್ಲಿಂ ಸಮುದಾಯ ಇದೆ ಎನ್ನುವುದನ್ನು ಅರಿತುಕೊಳ್ಳಬೇಕು ಎಂದರು.
ಅಲ್ಪಸಂಖ್ಯಾತ ಸಮುದಾಯದ ಹಿರಿಯ ಮುಖಂಡರಾದ ಎಲ್.ಎನ್. ನಾಯೊRàಡಿ, ಮಾಜಿ ಸೈನಿಕ ಎಲ್.ಕೆ. ನದಾಫ್, ಕಾರ್ಮಿಕ ಘಟಕದ ಅಧ್ಯಕ್ಷ ಎಂ.ಆರ್. ಕುಂಟೋಜಿ, ಯುವ ಮುಖಂಡರಾದ ಐ.ಕೆ. ಸಾಸನೂರ ವಕೀಲರು, ಎಲ್.ಎನ್. ಮುದ್ನಾಳ, ಎಸ್.ಆರ್. ನಾಗರಾಳ, ರಹಿಮಾನ್ ಟಕ್ಕಳಕಿ, ಜಬ್ಟಾರ್ ಗೋಲಂದಾಜ್, ಖಾಜಾ ಹುನಕುಂಟಿ, ಶೇಕ್ ಮ್ಯಾಗೇರಿ, ರಜಾಕ್ ಮಕಾಂದಾರ, ಅಬ್ಬು ನಾಲತವಾಡ ಮತ್ತಿತರರು ಪಾಲ್ಗೊಂಡಿದ್ದರು.