Advertisement

ಛಲದೊಂದಿಗೆ ಗುರಿ ಇದ್ದರೆ ಸಾಧನೆ ಸಾಧ್ಯ: ಸಚಿವ ಕೆ.ವೆಂಕಟೇಶ್

10:34 PM Jun 24, 2023 | Team Udayavani |

ಪಿರಿಯಾಪಟ್ಟಣ: ಜೀವನದಲ್ಲಿ ಕನಸುಗಳು ಎಷ್ಟು ಮುಖ್ಯವೋ, ಹಾಗೆಯೇ ಗುರಿಯೂ ಅಷ್ಟೇ ಮುಖ್ಯ, ಛಲವಿದ್ದರೂ ಮಾತ್ರ ಗುರಿಯನ್ನು ಮುಟ್ಟೇ ತೀರುತ್ತಾರೆ ಎಂದು ಪಶುಪಾಲನಾ ಹಾಗೂ ರೇಷ್ಮೆ ಖಾತೆ ಸಚಿವ ಕೆ.ವಂಕಟೇಶ್ ತಿಳಿಸಿದರು.

Advertisement

ಪಟ್ಟಣದ ಡಿ.ದೇವರಾಜು ಅರಸು ಕಲಾ ಭವನದಲ್ಲಿ ಶನಿವಾರ ವಾಯುಸೇನೆಯ ಪ್ಲೈಯಿಂಗ್ ಆಫೀಸರ್ ಆಗಿ ಆಯ್ಕೆಯಾದ ತನುಶ್ರೀಗೌಡ ರವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಇಂದು ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲೂ ಪುರುಷರಿಗಿಂತ ಕಡಿಮೆಯಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಹೆಣ್ಣುಮಕ್ಕಳು ಮನದಲ್ಲಿರುವ ಕೀಳರಿಮೆಯನ್ನು ತೊರೆದು ತನ್ನಲ್ಲಿರುವ ಸಾಮರ್ಥ್ಯ ಅರಿತು ಸಾಧನೆ ಮಾಡಲು ಮುಂದಾಗಬೇಕು. ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಬುದ್ದಿವಂತ ಮಕ್ಕಳಿದ್ದಾರೆ ಇವರಿಗೆ ಸರಿಯಾದ ಮಾರ್ಗದರ್ಶನ ದೊರೆತರೆ ಏನು ಬೇಕಾದರೂ ಸಾಧಿಸುತ್ತಾರೆ ಎಂಬುದಕ್ಕೆ ಈ ದಿನದ ಕಾರ್ಯಕ್ರಮವೇ ಸಾಕ್ಷಿ. ವಿದ್ಯಾರ್ಥಿಗಳು ಕಾಲೇಜು ಜೀವನವನ್ನು ಕೇವಲ ಮೋಜಿಗಾಗಿ ಎಂದು ಭಾವಿಸದೇ, ನಮ್ಮ ಮುಂದಿನ ಜೀವನದ ಅಡಿಪಾಯವಿದ್ದಂತೆ ಎಂದು ತಿಳಿದು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಯಾವಾಗಲೂ ದೊಡ್ಡ ದೊಡ್ಡ ಕನಸನ್ನೇ ಕಾಣಬೇಕು. ಇದಕ್ಕಾಗಿ ದುಡ್ಡು ಕೊಡಬೇಕಾಗಿಲ್ಲ. ಪ್ರಾಮಾಣಿಕ ಪ್ರಯತ್ನ, ಕೆಲಸದಲ್ಲಿ ಅರ್ಪಣಾಭಾವ, ದೃಢ ನಿರ್ಧಾರ ಇವುಗಳನ್ನು ಅಳವಡಿಸಿಕೊಂಡರೆ ಜಗತ್ತೇ ಬೆೇರಗುಗೊಳಿಸುವಂತಹ ಸಾಧನೆಯನ್ನು ಮಾಡಬಹುದು ಎಂದರು. ಇದಕ್ಕೆ ಉದಾಹರಣೆಯಾಗಿ ನಮ್ಮ ತಾಲ್ಲೂಕಿನ ಹೆಮ್ಮಯ ಹೆಣ್ಣು ಮಗಳು ತನುಶ್ರೀಗೌಡ ವಾಯುಸೇನೆಯ ಪ್ಲೈಯಿಂಗ್ ಆಫೀಸರ್ ಆಗಿ ಆಯ್ಕೆಯಾಗಿರುವುದೆ ಸಾಕ್ಷಿ ಎಂದರು.

ಕಾರ್ಯಕ್ರಮದಲ್ಲಿ ಕೊಡಗು ಸೈನಿಕ ಶಾಲೆಯ ಆಡಳಿತಾಧಿಕಾರಿ ವಿಂಗ್ ಕಮಾಂಡರ್ ಪ್ರಕಾಶ್ ರಾವ್ ಮಾತನಾಡಿ ಭಾರತೀಯ ಸೇನಾ ಪಡೆಗಳಲ್ಲಿ ಕೆಲವು ದಶಕಗಳ ಕಾಲ ಪುರುಷರ ಪ್ರಾಬಲ್ಯವೇ ಇತ್ತು. ಆದರೆ ಈಗ ಮಹಿಳೆಯರ ಕೈ ಮೇಲಾಗಿದೆ. ಮಹಿಳೆಯರೂ ಹೆಗಲಿಗೆ ಹೆಗಲು ಕೊಟ್ಟು ದೇಶದ ಹೆಮ್ಮೆ, ಕೀರ್ತಿಯನ್ನು ಕಾಪಾಡುತ್ತಿದ್ದಾರೆ. ತಾಲ್ಲೂಕಿನ ಹೆಣ್ಣು ಮಗು ಮೈಸೂರು ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ವಾಯುಪಡೆಯ ಪೈಲಟ್ ಆಗಿ ಸೇರ್ಪಡೆಗೊಂಡು ಐತಿಹಾಸಿಕ ಸಾಧನೆ ಮಾಡಿರುವುದು ಹೆಮ್ಮಯ ವಿಷಯ ಇಂಥ ಸಹಸ್ರಾರು ಮಕ್ಕಳು ದೇಶಸೇವೆಗೆ ಮುಂದೆ ಬರಬೇಕು ಎಂದು ಹರಸಿದರು.

ಮಾಜಿ ಸೈನಿಕರ ಸಂಘದ ಗೌರವಾಧ್ಯಕ್ಷ ವಾಸುಕಿ ಮಾತನಾಡಿ ನಾನು 25 ವರ್ಷಗಳಿಗೂ ಹೆಚ್ಚು ಕಾಲ ದೇಶ ಸೇವೆ ಮಾಡಿ ಬಂದು ಇಂದು ಭೂಮಿತಾಯಿ ಸೇವೆ ಮಾಡುತ್ತಿದ್ದೇನೆ, ಉತ್ತಮ ಆರೋಗ್ಯಕ್ಕಾಗಿ ನಮ್ಮ ರೈತರು ರಾಸಾಯನಿಕ ಗೊಬ್ಬರಗಳ ಬಳಕೆ ಕಡಿಮೆ ಮಾಡಿ ಸಾವಯವ ಕೃಷಿ ಪದ್ದತಿಯಲ್ಲಿ ಬೆಳೆ ಬೆಳೆದರೆ ಆರೋಗ್ಯಪೂರ್ಣ ದೇಹ ಮನಸ್ಸು ದೊರೆಯುತ್ತದೆ. ದಕ್ಷಿಣ ಪ್ರಾಂತ್ಯದ ಜನರು ಸುಖ ಪುರುಷರು ಇವರಿಗೆ ಯಾವುದೇ ಭೀತಿ ಇಲ್ಲ, ಆದರೆ ಉತ್ತರ ಭಾರತ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಜನತೆ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತಿಲ್ಲ ಕಾರಣ ನೆರೆಯವರ ಹಾವಳಿ, ಆದ್ದರಿಂದ ದೇಶ ಸೇವೆಗೆ ಈ ಭಾಗದಲ್ಲಿ ಮುಂದೆ ಬರಬೇಕು. ನಮ್ಮ ಮಾಜಿ ಸೈನಿಕರ ಹೆಣ್ಣು ಮಕ್ಕಳು ಪೈಲೆಟ್ಟಾಗಿ ಸೇವೆಗೆ ಸೇರುವುದು ನಿಜವಾದ ಸಾಧನೆ ಎಂದರು.

Advertisement

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಕುಂಞಿ ಅಹಮದ್, ಮಾಜಿ ಸೈನಿಕ ವಿಕ್ರಂ ರಾಜ್, ವಾಯುಸೇನೆಗೆ ಆಯ್ಕೆಯಾದ ತನು ಶ್ರೀ ಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಪಟ್ಟಣದ ಡಿ.ದೇವರಾಜು ಅರಸು ಕಲಾ ಭವನದಲ್ಲಿ ವಾಯುಸೇನೆಯ ಪ್ಲೈಯಿಂಗ್ ಆಫೀಸರ್ ಆಗಿ ಆಯ್ಕೆಯಾದ ತನುಶ್ರೀಗೌಡರನ್ನು ಸಚಿವ ಕೆ.ವೆಂಕಟೇಶ್ ಅಭಿನಂಧಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next