Advertisement

ಪಾಟೇಕರ್‌, ಅಗ್ನಿಹೋತ್ರಿಯಿಂದ ತನುಶ್ರೀ ದತ್ತಾಗೆ ಲೀಗಲ್‌ ನೊಟೀಸ್‌

12:15 PM Oct 04, 2018 | udayavani editorial |

ಮುಂಬಯಿ : ಹಿರಿಯ ಬಾಲಿವುಡ್‌ ನಟ ನಾನಾ ಪಾಟೇಕರ್‌ ಮತ್ತು ಚಿತ್ರ ನಿರ್ಮಾಪಕ ವಿವೇಕ್‌ ಅಗ್ನಿಹೋತ್ರಿ ಅವರಿಂದ ನನಗೆ ಎರಡು ಲೀಗಲ್‌ ನೊಟೀಸ್‌ಗಳು ಬಂದಿವೆ ಎಂದು “ಲೈಂಗಿಕ ಕಿರುಕುಳ ಹಗರಣ’ದ ಸಂತ್ರಸ್ತೆ ನಟಿ ತನುಶ್ರೀ ದತ್ತ ಇಂದು ಗುರುವಾರ ಹೇಳಿದ್ದಾರೆ. 

Advertisement

ಹತ್ತು ವರ್ಷಗಳ ಹಿಂದೆ “ಹಾರ್ನ್ ಓಕೆ ಪ್ಲೀಸ್‌’ ಎಂಬ ಚಿತ್ರದ ವಿಶೇಷ ಹಾಡಿನ ಚಿತ್ರೀಕರಣದ ವೇಳೆ ತನಗೆ ಪಾಟೇಕರ್‌ ಲೈಂಗಿಕ ಕಿರುಕುಳ ನೀಡಿದ್ದರು ಇಂದು ತನುಶ್ರೀ ಅವರು ಈಚೆಗೆ ಟಿವಿ ಸಂದರ್ಶನವೊಂದರಲ್ಲಿ ಆರೋಪಿಸಿದ್ದರು. ನನ್ನ  ಈ ಆರೋಪಕ್ಕೆ ನಾನು ಇಂದಿಗೂ ಬದ್ಧನಿದ್ದೇನೆ ಎಂದು ತನುಶ್ರೀ ಇವತ್ತು ಪುನಃ ಹೇಳಿದ್ದಾರೆ. 

2005ರಲ್ಲಿ ಚಾಕೋಲೇಟ್‌ ಎಂಬ ಸಿನೆಮಾ ನಿರ್ಮಾಣದ ವೇಳೆ ನಿರ್ಮಾಪಕ ಅಗ್ನಿಹೋತ್ರಿ ಕೂಡ ನನ್ನೊಂದಿಗೆ ಲೈಂಗಿಕವಾಗಿ ಅನುಚಿತ ವರ್ತನೆ ತೋರಿದ್ದರು ಎಂದು ತನುಶ್ರೀ ಆರೋಪಿಸಿದ್ದರು. 

ಇದೀಗ ತನುಶ್ರೀ ಅವರಿಗೆ ಇಂದು ಗುರುವಾರ ಪಾಟೇಕರ್‌ ಮತ್ತು ವಿವೇಕ್‌ ಅಗ್ನಿಹೋತ್ರಿ ಅವರಿಂದ ಲೀಗಲ್‌ ನೊಟೀಸ್‌ ಬಂದಿದೆ ಎಂದು ಮಾಧ್ಯಮ ವರದಿ ತಿಳಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next