Advertisement

ಕರ್ನಾಟಕದ ವಿಜ್ಞಾನಿಯಿಂದ ಮಾಸ್ಕ್ ಸ್ಯಾನಿಟೈಸ್‌ ತಂತ್ರಜ್ಞಾನ

08:11 AM May 06, 2020 | Hari Prasad |

ವಾಷಿಂಗ್ಟನ್: ಆರೋಗ್ಯ ಸಿಬ್ಬಂದಿ ಹೆಚ್ಚು ಬಳಸುವ ಎನ್‌- 95 ಮಾಸ್ಕ್ ಅನ್ನು ಸ್ಯಾನಿಟೈಸ್‌ ಮಾಡುವುದು ನಿಜಕ್ಕೂ ಸವಾಲು.

Advertisement

ಎನ್‌- 95 ಮಾಸ್ಕ್ ಗಳ ಕೊರತೆ ಇರುವ ಹಿನ್ನೆಲೆಯಲ್ಲಿ ಇದರ ಮರು ಬಳಕೆಯ ಸರಳವಿಧಾನವೊಂದನ್ನು ಬೆಂಗಳೂರು ಮೂಲದ, ಹಾರ್ವರ್ಡ್‌ ವಿವಿಯ ಸಂಶೋಧನಾ ವಿದ್ಯಾರ್ಥಿ ತನುಷ್‌ ಜಗದೀಶ್‌ ಕಂಡುಹಿಡಿದಿದ್ದಾರೆ.

ತನುಷ್‌ ನಡೆಸಿದ ಪ್ರಯೋಗದಲ್ಲಿ, ಕೋವಿಡ್ ವೈರಸ್ ನ ಸಮೀಪವರ್ತಿ ಎನಿಸಿಕೊಂಡ ‘ಎಂಎಸ್‌ 2’ ವೈರಸ್‌ ಅನ್ನು ಬಳಸಲಾಗಿತ್ತು. ಈ ವೈರಾಣುಗಳನ್ನು ಮಾಸ್ಕ್ ಮೇಲೆ ಹಬ್ಬಿಸಲಾಯಿತು. ನಂತರ ನೀರು ತುಂಬಿದ ಬೌಲ್‌ಗೆ, ಬಲೆಯನ್ನು ಮುಚ್ಚಿ, ಅದರ ಮೇಲ್ಭಾಗದಲ್ಲಿ ವೈರಾಣುಯುಕ್ತ ಮಾಸ್ಕ್ ಇಟ್ಟು, 3 ನಿಮಿಷ ಅದನ್ನು ಮೈಕ್ರೋವೇವ್‌ ಮಾಡಲಾಯಿತು.

ಬಳಿಕ ಮಾಸ್ಕ್ ನ ಮೇಲೆ ಇ- ಕೊಲಿ ಎನ್ನುವ ವಿಜ್ಞಾನಿಗಳ ಪ್ರಯೋಗ ಸ್ನೇಹಿ ಬ್ಯಾಕ್ಟೀರಿಯಾಗಳನ್ನು ಸಿಂಪಡಿಸಲಾಯಿತು. ವೈರಾಣುಗಳು ಜೀವಂತವಿದ್ದರೆ, ಇ- ಕೊಲಿ ಬ್ಯಾಕ್ಟೀರಿಯಾ ಸಂಪರ್ಕ ಬೆಸೆದಾಗ, ಅವು ಸಣ್ಣ ರಂಧ್ರ ರೂಪದ ರಚನೆಗಳನ್ನು ಸೃಷ್ಟಿಸುತ್ತವೆ.

ಅಂಥ ರಚನೆಗಳು ಕಾಣಿಸದೆ ಇದ್ದರೆ, ಮಾಸ್ಕ್ ವೈರಸ್‌ರಹಿತವಾಗಿದೆ ಎಂದರ್ಥ. ‘3 ನಿಮಿಷದ ಹಬೆಗೆ ಬಹುತೇಕ ವೈರಾಣುಗಳು ಸತ್ತುಹೋಗಿರುತ್ತವೆ. ಭಾರತದಂಥ ದೇಶಗಳಲ್ಲಿ ಎನ್‌-95 ಮಾಸ್ಕ್ ಗಳು ಕೊರತೆ ಇರುವುದರಿಂದ ಈ ವಿಧಾನ ಹೆಚ್ಚು ಪ್ರಯೋಜನ ನೀಡಲಿದೆ’ ಎನ್ನುತ್ತಾರೆ, ತನುಷ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next