Advertisement
“ಓಹ್.. ನೀನು ಹರೀಶ್ ಅಲ್ವಾ..?’ ಒಂದು ದಿನ ಶಿವಮೊಗ್ಗ ಸಿಟಿಯಲ್ಲಿ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಕೇಳಿದಳು ಹುಡುಗಿಯೊಬ್ಬಳು. ನನಗವಳ ಪರಿಚಯವಿರಲಿಲ್ಲ. ಎಲ್ಲೋ ನೋಡಿದ ನೆನಪೂ ಇಲ್ಲ. ಸಾಮಾಜಿಕ ಜಾಲತಾಣದಲ್ಲೂ ಆ ಮುಖವನ್ನು ಎಂದಿಗೂ ನೋಡಿರಲಿಕ್ಕಿಲ್ಲ. ಅವಳು ಮತ್ತೆ ಕೇಳಿದಳು: “ನೀನು ಹರೀಶ್ ಅಲ್ವ?’ ನಾನು ಹೌದೆಂದೆ…ನನ್ನನ್ನು ಅವಳೇ ಮತ್ತೂಮ್ಮೆ ಕೇಳಿದಳು: “ನನ್ನ ನೆನಪಿದೆಯೇ?’. ನಾನು “ಇಲ್ಲ’ ಎಂದೆ. ಅವಳು “ಈ ಹುಡುಗರೇ ಹೀಗಿರಬಹುದು. ಎಷ್ಟೋ ಹುಡುಗಿಯರನ್ನು ದಿನವೂ ನೋಡುವ ನಿನಗೆ ನನ್ನ ನೆನಪೆಲ್ಲಿರಬೇಕು’ ಎಂದು ಹೂಮಳೆಯಂತಹ ಮುಗುಳುನಗೆ ಚೆಲ್ಲಿದಳು… ನಂತರ ಅವಳೇ ನೆನಪಿಸಿದಳು, ಒಂದು ದಿನ, ಎರಡು ವರ್ಷದ ಹಿಂದೆ ನಾನು ಓದಿದ ಕಾಲೇಜಿನಲ್ಲಿ ಜರುಗಿದ ವಿಜ್ಞಾನ ವಸ್ತುಪ್ರದರ್ಶನ ನೋಡಲು ತಾನು ಬಂದಾಗ ನನ್ನನ್ನು ಮಾತನಾಡಿಸಿದ್ದಳೆಂದು… ಆ ನೆನಪೆಲ್ಲಿರಬೇಕು ನನಗೆ? ಆ ದಿನ ಆ ಪ್ರದರ್ಶನ ನೋಡಲು ಬಂದಿದ್ದವರು ಒಬ್ಬರೇ? ಇಬ್ಬರೇ…!?
Related Articles
Advertisement
“ಏನೋ ಹೇಳಬೇಕಿತ್ತು…’
“ಏನು?’
“ಏನಿಲ್ಲ, ನಾಳೆ ಹೇಳುವೆ..!’ ಎಂದು ಮಾತು ಮುಗಿಸಿದ್ದಳು.
ನನ್ನ ಮನದ ಕುತೂಹಲಕ್ಕೆ ಕೊನೆಯೇ ಇಲ್ಲವಾಯಿತು, ಪುಸ್ತಕ ಕೈಯಲ್ಲಿದ್ದರೂ ಓದದಾದೆ, ಕಣ್ಣಲ್ಲಿ ನಿದ್ರೆಯ ಸೂಚನೆಗಳಿದ್ದರೂ ಮಲಗದಾದೆ. ಹೀಗೇಕೆ ಆಗುತ್ತಿದೆ ಎಂದು ಯೋಚಿಸುವ ಮೊದಲೇ ನಾನು ಅವಳ ಮನದೊಳಗೆ ಮುಳುಗಿದ್ದೆ..ನಾಳೆಯವರೆಗೂ ಕಾಯುವುದು ಅತಿ ಕಷ್ಟ, ಮಧ್ಯಾಹ್ನ ಊಟ ಮುಗಿಸಿ ಟಿ.ವಿ ಕಡೆಗೆ ಕಣ್ಣು ಹಾಯಿಸುತ್ತಿದ್ದೆ,ಇನ್ನೊಮ್ಮೆ ಮೊಬೈಲ್ ರಿಂಗಣಿಸಿತು..!!! ಎಂದೂ ಕಾಣದ ಹರುಷ ಇಂದು ನಾನು ಕಂಡೆನಲ್ಲ ಎಂಬ ಸವಿನಾದದ ರಿಂಗ್ ಟೋನ್ ಕೇಳಿಸಿತು.. ನೋಡಿದೆ,sangeeeeeetha, ರಿಸೀವ್ ಮಾಡಿದೆ!
“ಹೇಗಿದಿಯಾ?’ ಎಂದಳು,
“ಚೆನ್ನಾಗಿದ್ದೀನಿ.. ನಿನ್ನೆ ಏನೋ ಹೇಳಬೇಕೆಂದಿದ್ದೆ
ನೀರವ ಮೌನ ಆ ಕಡೆ.
“ನನ್ನ ಜೀವನದ ಕೊನೆಯವರೆಗೂ ಜೊತೆಯಾಗಿರು’
“ಓಕೆ ಆಯಿತು’ ಎಂದೆ. ಆಗಲ್ಲ ಎಂದು ಹೇಳಿ ಯಾರ ಮನಸ್ಸನ್ನೂ ನೋಯಿಸುವ ಮನಸ್ಥಿತಿಯವನಲ್ಲ ನಾನು. ಆದರೆ ಆ ಬೆಡಗಿ ಯಾಕೆ ಹೀಗೆ ಹೇಳಿದಳು? ಎಂದು ಯೋಚಿಸಿದೆ, ಯೋಚಿಸುತ್ತಾ ಕುಳಿತೆ… ವಿಭಿನ್ನ ಪ್ರಶ್ನೆಗಳೇ ಎದುರಾಗತೊಡಗಿದವು… ಇದೆಲ್ಲದರ ನಡುವೆ ಹತ್ತುದಿನಗಳ ಕಾಲ ಅವಳ ಕಡೆಯಿಂದ ಸಂದೇಶಗಳೇ ಇಲ್ಲ. ಎಂದೂ ಕಾಣದ ಹರುಷ ಅಂದು ನಾನು ಕಾಣಲೇ ಇಲ್ಲ’. ಹನ್ನೊಂದನೆಯ ದಿನ ಕಂಡೆ ಆ ಹರುಷವ… ಅವಳ ಕಾಲ್ ಬಂದಿತ್ತು. ಮಾತುಗಳು ಬದಲಾಗಿದ್ದವು, ವಿನೋದದಿಂದ ಮಾತನಾಡಿದೆ. “ಈ ಜನ್ಮದಲ್ಲಿ ನಿನಗೆ ಬುದ್ದಿ ಬರಲ್ಲ’ ಎನ್ನುವ ಅವಳ ಮಾಮೂಲಿ ಡಯಲಾಗ್ ಹೇಳಿದಳು. ಅವಳ ಆ ಮುಗ್ಧತೆಯೇ ನಾನು ಅವಳಿಗೆ ಮನಸೋಲಲು ಕಾರಣವಾಗಿತ್ತು…
ಹೀಗೇ ಮುಂದುವರೆದಿತ್ತು ಟೆಲಿಫೋನ್ ಗೆಳತಿಯ ಮಾತು, ಮುಗುಳು ನಗು, ಮನದ ಮಾತುಗಳು ಬರಲಾರಂಭಿಸಿದ್ದವು. ಆಗಿದ್ದ ಧಾಟಿ, ನಿಸ್ಸಂಕೋಚದ ಮಾತುಗಳು ಇಂದಿಗೂ ಮುಂದುವರೆದಿವೆ. ಪ್ರೀತಿಯ ಮಾತುಗಳಿಗೆ ಮಾತ್ರ ಹೆಚ್ಚಿನ ಪ್ರಾಮುಖ್ಯತೆ. ನಾನೇ ಏಕೋ ಮಾತನಾಡಲು ತಡವರಿಸುತ್ತೇನೆ, ಮನಸ್ಸಿನ ಹಠವೋ? ಗುರಿಯಡೆಗಿನ ಛಲವೋ? ಗೊತ್ತಿಲ್ಲ!! ಒಟ್ಟಿನಲ್ಲಿ ಎಂದಿಗೂ ಅವಳಷ್ಟು ನಾನು ಮಾತನಾಡಲಾರೆ. ನನಗೇನೋ ಅವಳು ಬದಲಾಗಿದ್ದಾಳೆ ಅನಿಸುತ್ತದೆ. ಆದರೆ ಬದಲಾಗಿದ್ದು ಅವಳ್ಳೋ? ನಾನೋ?ತಿಳಿಯದು.. ಬಹುಷಃ ನಾನೇ ಇರಬೇಕು… !!! – ಹರೀಶ್, ಸಾಗರ