ಮಹಾನಗರ: ಲಯನ್ಸ್ ಕ್ಲಬ್ ನೇತ್ರಾವತಿ ವತಿಯಿಂದ ವಲಯಾಧ್ಯಕ್ಷ ಮಂದಾಕಿನಿ ಉಪಾಧ್ಯಾಯ ಅವರ ನೇತೃತ್ವದಲ್ಲಿ 2ಲಕ್ಷ ರೂ. ವೆಚ್ಚದಲ್ಲಿ ತಣ್ಣೀರುಬಾವಿ ಬೀಚಿನಲ್ಲಿ ನಿರ್ಮಿಸಲ್ಪಟ್ಟ ಲಯನ್ಸ್ ಬೀಚ್ ಪಾರ್ಕನ್ನು ಇತ್ತೀಚೆಗೆ ಲಯನ್ಸ್ ಗವರ್ನರ್ ಹೆಚ್.ಆರ್ ಹರೀಶ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇದೊಂದು ಅತ್ಯಂತ ಜನೋಪಯೋಗಿ ಪರಿಸರ ಸ್ನೇಹಿ ಸೇವಾ ಕಾರ್ಯವಾಗಿದ್ದು, ಇಂತಹ ಕಾರ್ಯಕ್ರಮಗಳು ಮುಂದೆಯೂ ನಡೆಯಲಿ ಎಂದು ಹೇಳಿದರು. ಪಾರ್ಕ್‌ನ ಮಕ್ಕಳ ಆಟದ ಪ್ರಧಾನ ಸ್ಥಳವನ್ನು ಲಯನ್ಸ್ ಜಿಲ್ಲಾಧ್ಯಕ್ಷ ಕೆ.ಸದಾನಂದ ಉಪಾಧ್ಯಾಯ ಉದ್ಘಾಟಿಸಿದರು.
ಮೇ.ಯೋಜಕ ಇಂಡಿಯಾ ಲಿಮಿಟೆಡ್‌ನ ನಿರ್ದೇಶಕಿ ಭಾರತಿ ಜಗದೀಶ್, ಬೀಚ್ ಡೆವಲಪ್‌ಮೆಂಟ್ ಸಂಯೋಜಕ ಕೆ.ಪಿ.ಪಣಿಕ್ಕರ್, ಲಯನ್ಸ್ ಜಿಲ್ಲಾ ಸಂಪುಟ ಕಾರ್ಯದರ್ಶಿ ವಸಂತ್ ಶೆಟ್ಟಿ, ಪ್ರಾಂತೀಯ ಅಧ್ಯಕ್ಷೆ ಆಶಾ ಶೆಟ್ಟಿ, ನೇತ್ರಾವತಿ ಕ್ಲಬಿನ ಅಧ್ಯಕ್ಷೆ ಸಬಿತಾ ಶೆಟ್ಟಿ, ಕಾರ್ಯದರ್ಶಿ ವಿಜಯಲಕ್ಷ್ಮೀ ರೈ, ಖಜಾಂಚಿ ಪದ್ಮಿನಿ ರಾವ್, ನೇತ್ರಾವತಿ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.
ಡಸ್ಟ್ ಬಿನ್ ಕೊಡುಗೆ
ಈ ಸಂದರ್ಭದಲ್ಲಿ ನೇತ್ರಾವತಿ ಲಿಯೋ ಕ್ಲಬ್ಬಿನ ವತಿಯಿಂದ ಎರಡು ಡಸ್ಟ್ ಬಿನ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು.