Advertisement

ಟ್ಯಾಂಕರ್‌ ನೀರು ಸರಬರಾಜು ದಂಧೆ

12:13 PM Jul 27, 2019 | Suhan S |

ಕುಣಿಗಲ್: ಟ್ಯಾಂಕರ್‌ ನೀರು ಸರಬರಾಜು ದಂಧೆ ಯಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಇಒಗೆ ಶಾಸಕ ಡಾ.ಎಚ್.ಡಿ.ರಂಗನಾಥ್‌ ಎಚ್ಚರಿಸಿದರು.

Advertisement

ತಾಪಂ ಸಭಾಂಗಣದಲ್ಲಿ ನಡೆದ ಬರ ನಿರ್ವಹಣೆ, ಕುಡಿಯುವ ನೀರು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಲುಷಿತ ಟ್ಯಾಂಕರ್‌ ನೀರು ಪೂರೈಸಲಾಗುತ್ತಿದ್ದು, ಸದಂಧೆಯಲ್ಲಿ ಪಾಲ್ಗೊಂಡ ಅಧಿಕಾರಿಗಳನ್ನು ಸುಮ್ಮನೆ ಬಿಡುವುದಿಲ್ಲ, ಅವ್ಯವಹಾರ, ಅಕ್ರಮ ಕಂಡು ಬಂದಲ್ಲಿ ತನಿಖೆಗೆ ಲೋಕಾಯುಕ್ತಕ್ಕೆ ವಹಿ ಸುತ್ತೇನೆ. ತಾಪಂ ಕಾರ್ಯನಿರ್ವಹಣಾಧಿಕಾರಿ ಕೆಲಸ ಮಾಡಿದರೆ ನಾನು ಇಷ್ಟೊಂದು ಶ್ರಮಪಡುವ ಅಗತ್ಯ ವಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಣ್ಣ ನೀರಿನ ಸಮಸ್ಯೆ ಬಗೆಹರಿಸದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಶಾಸಕ, ಗ್ರಾಮೀಣ ಭಾಗಕ್ಕೆ ಹೋದರೆ ಕುಡಿಯುವ ನೀರು, ರಸ್ತೆ, ಚರಂಡಿ ಸೇರಿ ಹಲವು ಸಮಸ್ಯೆಗಳ ಬಗ್ಗೆ ಜನರು ದೂರು ಹೇಳುತ್ತಾರೆ. ಸಣ್ಣ ಸಮಸ್ಯೆ ಬಗೆಹರಿಸಲು ನಿಮ್ಮಿಂದ ಸಾಧ್ಯವಾಗ ದಿದ್ದರೆ ಸರ್ಕಾರಿ ಕೆಲಸದಲ್ಲಿ ಯಾಕಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಿಡಿಒಗೆ ತರಾಟೆ: ಅಮೃತೂರಿನ ಹಲವು ಬಡಾವಣೆ ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಈ ಸಂಬಂಧ ಕ್ರಮಕೈಗೊಳ್ಳುವಂತೆ ಜನಸ್ಪಂದನಾ ಕಾರ್ಯಕ್ರಮದಲ್ಲಿ ತಿಳಿಸಿ ತಿಂಗಳು ಕಳೆದರೂ ಕ್ರಮ ಕೈಗೊಂಡಿಲ್ಲ. ಬೇಜವಾಬ್ದಾರಿಯಿಂದ ಕೆಲಸ ಮಾಡಿದರೆ ಕ್ರಮ ಕೈಗೊಳ್ಳಲಾಗುವುದೆಂದು ಪಿಡಿಒ ಲತಾಗೆ ಎಚ್ಚರಿಸಿದರು.

Advertisement

3.45 ಕೋಟಿ ಅವಶ್ಯಕ: ತಾಲೂಕಿನಲ್ಲಿ 753 ಗ್ರಾಮ ಗಳು ಇವೆ. ಈ ಪೈಕಿ 105 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಈ ಸಮಸ್ಯೆ ಪರಿ ಹರಿಸಲು 3.43 ಕೋಟಿ ರೂ. ಅಗತ್ಯ. ಈ ಸಂಬಂಧ ಅಂದಾಜು ಪಟ್ಟಿ ತಯಾರಿಸಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಿರಣ್‌ಕುಮಾರ್‌ ತಿಳಿಸಿದರು. ದಾಖಲೆ ಗಳೊಂದಿಗೆ ಸೋಮವಾರ ವಿಧಾನಸೌಧಕ್ಕೆ ಬರುವಂತೆ ಶಾಸಕರು ಸೂಚಿಸಿದರು.

ಬೆಸ್ಕಾಂ ಸಹಕಾರವಿಲ್ಲ: ಗ್ರಾಮಗಳಲ್ಲಿ ಸಾರ್ವಜನಿಕರಿಗೆ ನೀರು ಪೂರೈಸಲು ವಿದ್ಯುತ್‌ ಅವಶ್ಯಕ. ಆದರೆ ಬೆಸ್ಕಾಂ ಅಧಿಕಾರಿಗಳು ಸಹಕರಿಸುತ್ತಿಲ್ಲ ಎಂದು ದೂರಿದ ಬಹುತೇಕ ಪಿಡಿಒಗಳು, ಬೀದಿದೀಪ, ಕಚೇರಿಯಲ್ಲಿ ಬಳಸುವ ವಿದ್ಯುತ್‌ ಸರಬರಾಜಿಗೆ ತಿಂಗಳಿಗೆ 6ಂದ 7 ಸಾವಿರ ಬಿಲ್ ಬರಬೇಕು. ಆದರೆ 70 ಸಾವಿರದಿಂದ ಒಂದು ಲಕ್ಷದವರೆಗೆ ಬಿಲ್ ಬರುತ್ತಿದೆ. ಅಲ್ಲದೆ ಬಿಲ್ನ ಬಡ್ಡಿ ಹಣ ಸರ್ಕಾರ ಪಾವತಿಸುತ್ತಿದೆ.

ಹೀಗಿದ್ದರೂ ಬೆಸ್ಕಾಂ ಅಧಿಕಾರಿಗಳು ಮನಬಂದಂತೆ ಬಿಲ್ ನೀಡುತ್ತಿ ದ್ದಾರೆ, ಇದರಿಂದ ಹಣ ಕಟ್ಟಲು ಸಾಧ್ಯ ವಾಗುತ್ತಿಲ್ಲ ಎಂದು ದೂರಿದರು. ಕೂಡಲೇ ಸಮಸ್ಯೆ ಬಗೆಹರಿಸ ಬೇಕೆಂದು ಬೆಸ್ಕಾಂ ಎಇ ವೀರಭದ್ರಯ್ಯಗೆ ಶಾಸಕರು ಸೂಚಿಸಿದರು.

90 ಸಾವಿರ ಜಾನುವಾರುಗಳು: ತಾಲೂಕಿನಲ್ಲಿ 90,600 ಜಾನುವಾರುಗಳಿವೆ. ಮೇವಿನ ಸಮಸ್ಯೆ ಸದ್ಯಕ್ಕಿಲ್ಲ. ಒಂದು ತಿಂಗಳಿಗೆ ಆಗುವಷ್ಟು ಮೇವು ಇದೆ ಎಂದು ಪಶು ಇಲಾಖೆ ಸಹಾಯಕ ನಿರ್ದೇಶಕ ಶಶಿಕಾಂತ್‌ ಬೂದಾಳ್‌ ಹೇಳಿದರು.

ಇದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ ಶಾಸಕ ಡಾ.ರಂಗನಾಥ್‌, ತಾಲೂಕಿನಲ್ಲಿ 2.5 ಲಕ್ಷ ಜನರಿದ್ದಾರೆ. ಆದರೆ 90 ಸಾವಿರಕ್ಕೂ ಅಧಿಕ ಜಾನುವಾರುಗಳು ಇವೆ ಎಂದರೆ ಹೇಗೆ ನಂಬುವುದು ಎಂದು ಪ್ರಶ್ನಿಸಿದರು. ಪಟ್ಟಣದಲ್ಲಿ ಮೇವು ಬ್ಯಾಂಕ್‌ ತೆರೆ ಯುವಂತೆ ಸೂಚಿಸಿದರು.

ಪುರಸಭಾ ಮುಖಾಧಿಕಾರಿ ಆರ್‌.ರಮೇಶ್‌, ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ಹಿರಿಯ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next