Advertisement
ಬೈಪಾಸ್‌ನ ತೆಂಕಿಲ ಕರ್ನಾಟಕ ವಸತಿ ನಿಗಮದ ನಿವೇಶನ ಹಾಗೂ ನೆಹರೂ ನಗರ ಬಳಿಯ ಸೀಟಿ ಗುಡ್ಡೆ ಬಳಿಯಲ್ಲಿ 2 ಜಾಗಗಳನ್ನು ಗುರುತಿಸಲಾಗಿತ್ತು. ಸೀಟಿಗುಡ್ಡೆ ಜಾಗದ ಮಾಲಕರು ಭೂಸ್ವಾಧೀನಕ್ಕೆ ಹೆಚ್ಚಿನ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ತೆಂಕಿಲದ ಜಾಗವನ್ನೇ ಅಂತಿಮ ಮಾಡಲಾಯಿತು. ಉಪ್ಪಿನಂಗಡಿಯ ನೆಕ್ಕಿಲಾಡಿ ಪಂಪ್‌ಹೌಸ್‌ನಲ್ಲಿ ನೀರು ಶುದ್ಧೀಕರಣವಾಗಿ, ಬೊಳುವಾರು ಬೈಪಾಸ್ ಮೂಲಕ ತೆಂಕಿಲದ ಟ್ಯಾಂಕ್‌ಗೆ ಸಂಗ್ರಹವಾಗಲಿದೆ. ಇಲ್ಲಿಂದ ಪುತ್ತೂರು ನಗರಸಭೆ ವ್ಯಾಪ್ತಿಯ ನಿವಾಸಿಗಳಿಗೆ 24×7 ಮಾದರಿಯಲ್ಲಿ ನೀರು ಪೂರೈಕೆಯಾಗಲಿದೆ.
ನಗರಸಭೆ ಸದಸ್ಯ ಜೀವಂಧರ್ ಜೈನ್ ಮಾತನಾಡಿ, ಕಳೆದ ಅವಧಿಯಲ್ಲಿ ನೀಡಿರುವ ಕುಡಿಯುವ ನೀರು ಪೂರೈಕೆಯ ಯೋಜನೆಯನ್ನೇ ಈ ಬಾರಿಯೂ ಬಳಸಿಕೊಳ್ಳಲಾಗಿದೆ. ಅದರಲ್ಲಿ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ. ಕುಡ್ಸೆಂಪ್ ಯೋಜನೆಯಲ್ಲಿ ನೀರು ಪೂರೈಸಲು ಸೀಟಿ ಗುಡ್ಡೆಯಲ್ಲಿ ಟ್ಯಾಂಕ್ ನಿರ್ಮಿಸಿದ್ದು, ಇದನ್ನೇ ಈ ಯೋಜನೆಗೂ ಬಳಸಿಕೊಳ್ಳಲಾಗಿದೆ. ಇದರಿಂದ ಎಲ್ಲ ಕಡೆ ನೀರು ಪೂರೈಕೆ ಮಾಡುವುದು ಕಷ್ಟವಾಗಲಿದೆ ಎಂದು ತಿಳಿಸಿದರು.
Related Articles
ನಗರಸಭೆ ಸದಸ್ಯ ರಾಜೇಶ್ ಬನ್ನೂರು ಮಾತನಾಡಿ, ನೀರಾವರಿಗಾಗಿ ಕುಡ್ಸೆಂಪ್ ಯೋಜನೆಯನ್ನು ಜಾರಿಗೆ ತರಲಾಗಿದೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಬೇಸಗೆಯಲ್ಲಿ ಜನರಿಗೆ ಕುಡಿಯಲು ನೀರು ಸಿಗುತ್ತಿರುವುದು ಬೋರ್‌ವೆಲ್ ಗಳಿಂದ ಮಾತ್ರ. ಟ್ಯಾಂಕರ್‌ಗೆ ತುಂಬಿಸಿ ಕೆಲ ಪ್ರದೇಶಗಳಿಗೆ ಪೂರೈಕೆ ಮಾಡಿದ್ದೂ ಇದೆ. ವಿದ್ಯುತ್ ನಿಲುಗಡೆಯಾದ ಸಂದರ್ಭ ಬೋರ್‌ವೆಲ್, ಟ್ಯಾಂಕರ್ ಮೂಲಕವೂ ನೀರು ಪೂರೈಕೆ ಮಾಡಲು ಸಾಧ್ಯವಾಗಿಲ್ಲ ಎಂದು ಜಿಲ್ಲಾಧಿಕಾರಿಗಳ ಗಮನ ಸೆಳೆದರು.
Advertisement
ಪ್ರಭಾರ ಸಹಾಯಕ ಆಯುಕ್ತೆ ಪ್ರಮೀಳಾ, ಕುಡ್ಸೆಂಪ್‌ನ ಪ್ರಭಾಕರ ಶರ್ಮ, ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡು, ಉಪಾಧ್ಯಕ್ಷ ವಿಶ್ವನಾಥ ಗೌಡ, ಸದಸ್ಯರಾದ ಮಹಮ್ಮದ್ ಆಲಿ, ಯಶೋದಾ ಹರೀಶ್, ಜೋಹರಾ ನಿಸಾರ್, ಚಂದ್ರ ಸಿಂಗ್, ಬಾಲಚಂದ್ರ, ಶಕ್ತಿ ಸಿನ್ಹಾ, ಮುಖೇಶ್ ಕೆಮ್ಮಿಂಜೆ, ಜೆಸಿಂತಾ ಮಸ್ಕರೇನಸ್, ಜಯಲಕ್ಷ್ಮೀ ಸುರೇಶ್, ರಾಮಣ್ಣ ಗೌಡ, ಉಷಾ, ಸ್ವರ್ಣಲತಾ ಹೆಗ್ಡೆ, ಅನ್ವರ್ ಖಾಸಿಂ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಗುಡ್ಡ ಪ್ರದೇಶಕ್ಕೆ ಸಂಪ್ಜನಸಂಖ್ಯೆ ಅಧಿಕವಾಗಿರುವ ಪ್ರದೇಶಗಳಿಗೆ ಆದ್ಯತೆ ನೀಡಬೇಕಿದೆ. ಬೇಸಗೆ ಕಾಲದಲ್ಲಿ ಇದೇ ಭಾಗದ ಜನರು ನೀರಿಗೆ ಹೆಚ್ಚಿನ ಬವಣೆ ಪಡುತ್ತಾರೆ. ಆದ್ದರಿಂದ ಗುಡ್ಡಗಾಡು ಪ್ರದೇಶಗಳಿಗೆ ಸಂಪ್ ನಿರ್ಮಿಸಿ, ಅಲ್ಲಿಂದ ನೀರು ಪೂರೈಕೆ ಮಾಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.