Advertisement

Movie: ಬಿಗ್‌ ಬಾಸ್‌ ವಿನ್ನರ್‌ ಕಾರ್ತಿಕ್‌ ಸಿನಿಮಾಕ್ಕೆ ನಿರ್ಮಾಪಕಿ ಆಗಲಿದ್ದಾರೆ ತನಿಷಾ

02:57 PM Feb 24, 2024 | Team Udayavani |

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ ಸೀಸನ್‌ -10 ನ ವಿನ್ನರ್‌ ಆದ ಬಳಿಕ  ಕಾರ್ತಿಕ್‌ ಮಹೇಶ್‌ ಅವರು ಸಿಕ್ಕಾಪಟ್ಟೆ ಬ್ಯುಸಿಯಾಗಿ ಬಿಟ್ಟಿದ್ದಾರೆ. ನಾನಾ ಸಂದರ್ಶನ ಹಾಗೂ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿದ್ದಾರೆ.

Advertisement

ಮತ್ತೊಂದೆಡೆ ಬಿಗ್‌ ಬಾಸ್‌ ಸ್ಪರ್ಧಿಗಳೆಲ್ಲ ಗೆಟ್‌ ಟು ಗೆದರ್ ಮಾಡಿದ್ದಾರೆ. ವಿನಯ್ & ಗ್ಯಾಂಗ್‌ ಇತ್ತೀಚೆಗೆ ಪಾರ್ಟಿ ಮಾಡಿದೆ. ದೊಡ್ಮನೆಯಲ್ಲಿ ಜೊತೆಯಾಗಿದ್ದ ತನಿಷಾ ಕುಪ್ಪಂಡ ಹಾಗೂ ಕಾರ್ತಿಕ್‌ ಮಹೇಶ್‌ ಸ್ನೇಹ ಮನೆಯಾಚೆಯೂ ಹಾಗೆಯೇ ಇದೆ. ಇವರಿಬ್ಬರು ಮತ್ತೊಮ್ಮೆ ಸಿನಿಮಾವೊಂದರ ಮೂಲಕ ಜೊತೆಯಾಗುತ್ತಿದ್ದಾರೆ ಎನ್ನುವ ಸುದ್ದಿಯೊಂದು ಹೊರಬಿದ್ದಿದೆ.

ಬಿಗ್‌ಬಾಸ್‌ ಬಳಿಕ ಕಾರ್ತಿಕ್‌ ಮಹೇಶ್‌ ಅವರಿಗೆ ಅನೇಕ ಆಫರ್‌ ಗಳು ಬಂದಿವೆ. ಇದರಲ್ಲಿ ಬಿಡುವು ಮಾಡಿಕೊಂಡು ಅವರು ಕಥೆ ಕೇಳುವುದಾಗಿ ಹೇಳಿದ್ದಾರೆ. ಇದೀಗ ತನಿಷಾ ಅವರು ಕಾರ್ತಿಕ್‌ ಅವರಿಗೆ ಸಿನಿಮಾವೊಂದನ್ನು ಮಾಡಲಿದ್ದಾರೆ ಎನ್ನಲಾಗಿದೆ.

ತನಿಷಾ ಅವರ ಬ್ಯಾನರ್‌ ನಲ್ಲಿ ಕಾರ್ತಿಕ್‌ ನಟಿಸಲಿದ್ದಾರೆ ಎನ್ನುವ ಸುದ್ದಿಯೊಂದು ಹೊರಬಿದ್ದಿದೆ. ನಮ್ಮದೇ ಬ್ಯಾನರ್‌ ನಲ್ಲಿ ಪುಟ್ಟ ಪ್ರಾಜೆಕ್ಟ್‌ ವೊಂದನ್ನು ಮಾಡಲಿದ್ದೇವೆ. ಇದಕ್ಕಾಗಿ ಕಾರ್ತಿಕ್‌ ಅವರ ಕಾಲ್‌ ಶೀಟ್‌ ಕೇಳಿದ್ದೇವೆ ಎಂದು ಮಾಧ್ಯಮದ ಮುಂದೆ ತನಿಷಾ ಹೇಳಿದ್ದಾರೆ.

ಸದ್ಯ ಯಾವ ಸಿನಿಮಾ, ಕಥೆಯೇನು ಇದ್ಯಾವುದರ ಬಗ್ಗೆಯೂ ತನಿಷಾ ಮಾಹಿತಿ ನೀಡಿಲ್ಲ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ಬರುವ ಸಾಧ್ಯತೆಯಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next