Advertisement
ತಾಲೂಕಿನ ಸತ್ತೇಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಜಾಗೇರಿ ಸಮೀಪದಲ್ಲಿ ಹಳೇಕೋಟೆ, ಶಾಂತಿನಗರ, ಟಿ.ಜಿ.ದೊಡ್ಡಿ, ಆರ್.ಬಿ.ತಾಂಡ, ಫಾಸ್ಕಲ್‌ನಗರ, ಸೆಲ್ವಿಪುರ, ಸಿ.ಆರ್.ನಗರ ಎಂದು ಏಳು ಗ್ರಾಮಗಳಿದ್ದು ಸುತ್ತ ಅರಣ್ಯ ಮಧ್ಯೆ ಗ್ರಾಮವಿದ್ದು, ಆರ್.ಬಿ.ತಾಂಡ ಮತ್ತು ಬಿ.ಜಿ.ದೊಡ್ಡಿ ಎರಡು ಗ್ರಾಮಗಳಿಂದ ಸುಮಾರು 180ಕ್ಕೂ ಹೆಚ್ಚು ಜನರಿಗೆ ವಿಚಿತ್ರ ಜ್ವರ ಕಾಣಿಸಿಕೊಂಡು ಯಾವುದೇ ಔಷಧಿಗೆ ಜಗ್ಗದೆ ಕಳೆದು ನಾಲ್ಕು ತಿಂಗಳಿನಿಂದ ಬಳಲುತ್ತಿದ್ದಾರೆ.
Related Articles
Advertisement
ಯಾವುದೇ ಚೇತರಿಕೆ ಇಲ್ಲ: ಅದೇ ಗ್ರಾಮದ ಪಳನಿಯಮ್ಮ ಅಪಾರ ಜ್ವರದಿಂದ ಹಾಸಿಗೆ ಹಿಡಿದಿದ್ದು, ಹಾಸಿಗೆ ಯಿಂದ ಮೇಲೆ ಏಳಲು ಶಕ್ತಿಹೀನರಾಗಿರುವುದಾಗಿ ತಿಳಿಸಿರುವ ಅವರು ಈಗಾಗಲೇ ರಕ್ತ ಪರೀಕ್ಷೆ ಮತ್ತು ಇನ್ನಿತರ ಪರೀಕ್ಷೆಗಳನ್ನು ಮಾಡಿಸಿದ್ದರೂ ಸಹ ಕಾಲು, ತಲೆ, ಕಾಲಿನ ಪಾದ, ಮಂಡಿ ಸೇರಿದಂತೆ ವಿವಿಧ ಭಾಗಗಳ ನೋವಿನಿಂದ ಬಳಲುತ್ತಿದ್ದೇನೆ. ಸರ್ಕಾರಿ ಆಸ್ಪತ್ರೆಯ ವೈದ್ಯರು ನೀಡಿದ ಚಿಕಿತ್ಸೆ ಯಾವುದೇ ತರಹದ ಚೇತರಿಗೆ ಕಾಣದಂತೆ ಆಗಿದೆ ಎಂದು ಕಣ್ಣೀರಿಟ್ಟರು.
ವೈರಲ್ ಫೀವರ್ ಎಂದ ವೈದ್ಯರು: ಗ್ರಾಮದಲ್ಲಿ ನೂರಾರು ಜನರಿಗೆ ಬಂದ ಜ್ವರದಿಂದಾಗಿ ಇಡೀ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಸಂಬಂಧಿಸಿದ ಸರ್ಕಾರಿ ವೈದ್ಯರಿಗೆ ವಿಷಯ ಮುಟ್ಟಿಸಿದರೂ ಸಹ ವೈದ್ಯರು ಇದು ಚಿಕ್ಯೂನ್ ಗುನ್ಯಾ ಅಲ್ಲ, ಇದು ವೈರಲ್ ಜ್ವರ ಆಗಿದ್ದು, ಭಯಪಡಬಾರದು ಎಂದು ಹೇಳಿದರೇ ಹೊರತು ಕಾಯಿಲೆ ಮಾತ್ರ ಗುಣ ಆಗಿಲ್ಲ ಎಂದು ಗ್ರಾಮಸ್ಥರು “ಉದಯವಾಣಿ’ಗೆ ತಿಳಿಸಿದ್ದಾರೆ.
ಗ್ರಾಮದಲ್ಲಿ ನೂರಾರು ಜನರಿಗೆ ಜ್ವರ ಕಾಣಿಸಿಕೊಂಡ ಬಗ್ಗೆ ವೈದ್ಯರ ತಂಡವೊಂದನ್ನು ಕಳುಹಿಸಿ ಚಿಕಿತ್ಸೆ ನೀಡಲಾಗಿದ್ದು, ಶೀಘ್ರದಲ್ಲಿ ಗರಾಮಸ್ಥರೆಲ್ಲರೂ ಗುಣಮುಖರಾಗುತ್ತಾರೆ.-ಪ್ರಸಾದ್, ಜಿಲ್ಲಾ ಆರೋಗ್ಯಾಧಿಕಾರಿ ಗ್ರಾಮಸ್ಥರು ವಿಪರೀತಿ ಜ್ವರದಿಂದ ಕಳೆದ 4 ತಿಂಗಳಿನಿಂದ ಬಳಲುತ್ತಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕೂಡಲೇ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಚಿಕಿತ್ಸೆ ಕೊಡಿಸಿ ಕಾಯಿಲೆಯಿಂದ ಗುಣಮುಖರಾಗುವಂತೆ ಮಾಡುವುದು ನನ್ನ ಕರ್ತವ್ಯ.
-ಆರ್.ನರೇಂದ್ರ, ಶಾಸಕ * ಡಿ.ನಟರಾಜು