Advertisement

ತನಾರತಿ ಉತ್ಸವ

10:34 AM Oct 01, 2018 | Team Udayavani |

ಸೇಡಂ: ಮನೆ, ರಸ್ತೆ, ಅಂಗಡಿ ಮುಂಗಟ್ಟುಗಳಲ್ಲಿ ಭವ್ಯ ರಂಗೋಲಿ. ಕುಂಭ-ಕಳಸ ಹೊತ್ತು ಹೆಜ್ಜೆ ಹಾಕಿದ ಹೆಂಗಳೆಯರು. ಎಲ್ಲೆಡೆಯೂ ಭಕ್ತಿಯ ಪರಾಕಾಷ್ಠೆ. ಇದು ರವಿವಾರ ಪಟ್ಟಣದಲ್ಲಿ ಕಂಡು ಬಂದ ದೃಶ್ಯ. ಇತಿಹಾಸದ ಸತ್ಪುರುಷ, ಜೀವಂತ ಸಮಾಧಿಸ್ಥ ಸಪ್ಪಣಾರ್ಯ ಶಿವಯೋಗಿಗಳ ಶತಮಾನೋತ್ಸವ ಸಂಭ್ರಮ ಹಿನ್ನೆಲೆಯಲ್ಲಿ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಸದಾಶಿವ ಸ್ವಾಮೀಜಿ ನೇತೃತ್ವದಲ್ಲಿ ನಡೆದ ತನಾರತಿ ಉತ್ಸವ ಭವ್ಯತೆ ಮತ್ತು ದಿವ್ಯತೆಯ ಪ್ರಮುಖ ಆಕರ್ಷಣೆಯಾಗಿತ್ತು.

Advertisement

ಶ್ರೀ ವೀರಭದ್ರೇಶ್ವರ ದೇವಾಲಯದಿಂದ ತನಾರತಿ ಹೊತ್ತ ಸದಾಶಿವ ಸ್ವಾಮೀಜಿ ಜೊತೆ ಸಾವಿರಾರು ಭಕ್ತರು ಹೆಜ್ಜೆ ಹಾಕಿದರು. ಪೊಲೀಸ್‌ ಪಾಟೀಲಗಲ್ಲಿ, ಸಣ್ಣ ಅಗಸಿ, ತೆಗ್ಗಿನಗೇರಿ, ದೊಡ್ಡ ಅಗಸಿ, ಪುರಾನಾ ಬಜಾರ್‌, ಹಲಕರ್ಟಿಗಲ್ಲಿ ಒಳಗೊಂಡಂತೆ ಅನೇಕ ಬಡಾವಣೆಗಳಲ್ಲಿ ತನಾರತಿ ಉತ್ಸವ ಸಂಚರಿಸಿತು.

ಉತ್ಸವಕ್ಕೆ ಸ್ವಾಗತ ಕೋರಲೆಂದೇ ನೂರಾರು ಮನೆಗಳ ಎದುರು ರಂಗು ರಂಗಿನ ರಂಗೋಲಿ ಕಂಗೊಳಿಸುತ್ತಿದ್ದವು. ಪರಾರಿ, ಹಸಿರು ತೋರಣ ಗಮನಸೆಳೆಯುತ್ತಿದ್ದವು. ಎಲ್ಲೆಡೆಯೂ ಜಯಘೋಷಗಳು ಮೊಳಗಿದವು. ಕುಂಭ-ಕಳಸ ಹೊತ್ತು ನೂರಾರು ಮಹಿಳೆಯರು ಭಕ್ತಿಯ ಪರಾಕಾಷ್ಠೆ ಮೆರೆದರು. ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಸೇರಿದಂತೆ ಅನೇಕರು ತನಾರತಿ ಉತ್ಸವದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next