Advertisement

ನಿವೃತ್ತಿಯಿಂದ ಹಿಂದೆ ಸರಿದ ಬೆನ್ನಲ್ಲೇ ಏಕದಿನ ನಾಯಕತ್ವ ತೊರೆದ ತಮಿಮ್‌

11:01 PM Aug 04, 2023 | Team Udayavani |

ಢಾಕಾ: ಬೆನ್ನುನೋವು ಮರುಕಳಿಸಿದ ಕಾರಣ ತಮಿಮ್‌ ಇಕ್ಬಾಲ್‌ ಬಾಂಗ್ಲಾದೇಶ ಏಕದಿನ ಕ್ರಿಕೆಟ್‌ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಮುಂಬರುವ ಏಷ್ಯಾ ಕಪ್‌ ಕ್ರಿಕೆಟ್‌ ಪಂದ್ಯಾವಳಿಯಿಂದಲೂ ಹೊರಗುಳಿಯಲಿದ್ದಾರೆ.

Advertisement

34 ವರ್ಷದ ತಮಿಮ್‌ ಇಕ್ಬಾಲ್‌ ಅಫ್ಘಾನಿಸ್ಥಾನ ವಿರುದ್ಧದ ತವರಿನ ಸರಣಿ ವೇಳೆ ದಿಢೀರ್‌ ಕ್ರಿಕೆಟ್‌ ನಿವೃತ್ತಿ ಘೋಷಿಸಿದ್ದರು. ಕೊನೆಗೆ ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ ಮಧ್ಯಸ್ಥಿಕೆ ವಹಿಸಿದ ಪರಿಣಾಮ ತಮಿಮ್‌ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರು. ಇದೀಗ ಮತ್ತೆ ಕಾಡಿದ ಬೆನ್ನುನೋವಿನ ಪರಿಣಾಮ, ಅವರ ಪುನರಾಗಮನಕ್ಕೂ ಸಂಚಕಾರ ಎದುರಾಯಿತು.

“ಈ ವಿಷಯವನ್ನೂ ನಾನು ಪ್ರಧಾನಿಯವರ ಗಮನಕ್ಕೆ ತಂದಿದ್ದೇನೆ. ಅವರು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿದ್ದಾರೆ’ ಎಂಬುದಾಗಿ ತಮಿಮ್‌ ಇಕ್ಬಾಲ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next