Advertisement

ನೀರಿಗಾಗಿ ಪ್ರತಿಭಟಿಸಿದ್ದಕ್ಕೆ ಸೆರೆ : ಕೊಯಮತ್ತೂರಲ್ಲಿ 550 ಮಂದಿ ಅರೆಸ್ಟ್‌

12:32 AM Jun 21, 2019 | Team Udayavani |

ಚೆನ್ನೈ/ಹೊಸದಿಲ್ಲಿ: ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಕೆಲ ದಿನಗಳ ಹಿಂದೆ ನೀರಿ ಗಾಗಿ ಹೊಡೆದಾಟ ಸಂಭವಿಸಿತ್ತು. ಇದೀಗ ಕೊಯಮತ್ತೂರಿನಲ್ಲಿ ಬುಧವಾರ ನೀರು ಪೊರೈಕೆಗಾಗಿ ಒತ್ತಾಯಿಸಿ ಖಾಲಿ ಕೊಡಪಾನ ಹಿಡಿದುಕೊಂಡು ಪ್ರತಿಭಟನೆ ನಡೆಸುತ್ತಿದ್ದ 550 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ “ಸಿಎನ್‌ಎನ್‌’ ವರದಿ ಮಾಡಿದೆ. ನೀರು ಪೂರೈಕೆ ಮಾಡುವ ಬಗ್ಗೆ ಸ್ಥಳೀಯ ಅಧಿಕಾರಿಗಳು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂದು ಪ್ರತಿಭಟನ ಕಾರರು ಆರೋಪಿಸಿದ್ದಾರೆ.

Advertisement

ಇದೇ ವೇಳೆ ಚೆನ್ನೈನಲ್ಲಿ ಗುರುವಾರ ಏಕಾಏಕಿ ಮಳೆಯಾಗಿದೆ. ಒಂದೇ ದಿನ 29 ಮಿ.ಮೀ. ಮಳೆ ಯಾಗಿದೆ. ಮುಂದಿನ 2 ದಿನಗಳ ಕಾಲ ನಗರದಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಗರಿಷ್ಠ 40 ಡಿ.ಸೆ ತಾಪಮಾನ ಇರಲಿದೆ. ಜತೆಗೆ ಕೆಲ ಪ್ರದೇಶ ಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ನಡುವೆ, ತಮಿಳುನಾಡಿಗೆ 20 ಲಕ್ಷ ಲೀ. ಕುಡಿಯುವ ನೀರು ಒದಗಿಸಲು ಕೇರಳ ಸರಕಾರ ಗುರುವಾರ ಮುಂದೆ ಬಂದಿದೆ.

ಮುಂದಿನ ವರ್ಷ ಬೆಂಗ್ಳೂರಲ್ಲಿ ಜಲಕ್ಷಾಮ
ನೀತಿ ಆಯೋಗ ಸಿದ್ಧಪಡಿಸಿದ ವರದಿಯ ಪ್ರಕಾರ 2030ರ ವೇಳೆಗೆ ಬೆಂಗಳೂರಿನಲ್ಲಿ ಕುಡಿವ ನೀರಿಗೆ ಕೊರತೆ ಉಂಟಾದೀತು. ಹೀಗಾಗಿ, ಸ್ಥಳೀಯವಾಗಿ ಇರುವ ಜಲ ಮೂಲ ರಕ್ಷಣೆಗೆ ತ್ವರಿತವಾಗಿ ಕಾರ್ಯೋ ನ್ಮುಖ ವಾಗಲೇಬೇಕೆಂದು ಸಲಹೆ ಮಾಡಿದೆ. ಹೊಸದಿಲ್ಲಿ, ಹೈದರಾಬಾದ್‌, ಚೆನ್ನೈ,

ಬೆಂಗಳೂರಲ್ಲಿ 2020ರ ವೇಳೆ ಅಂತರ್ಜಲ
ಬರಿದಾಗಲಿದೆ. 21 ನಗರಗಳಲ್ಲಿನ ನೀರಿನ ಲಭ್ಯತೆ ಅಧ್ಯಯನದಲ್ಲಿ ಉಲ್ಲೇಖೀ ಸಲಾಗಿದೆ. ಹೊಸದಿಲ್ಲಿಯಲ್ಲಿ ಕೂಡ ಅಂತರ್ಜಲ ಕೊರತೆ ಗಂಭೀರ ವಾಗಿದೆ. ಹೀಗಾಗಿ ಮಳೆ ನೀರಿನ ಕೊಯ್ಲು ವ್ಯವಸ್ಥೆಯನ್ನು ಎಲ್ಲರೂ ಅಳವಡಿಸಿಕೊಳ್ಳ ಬೇಕೆಂದು ತಂಡದ ಸದಸ್ಯ ಪ್ರೊ. ಮನೋಹರ್‌ ಖುಷಲಾನಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next