ತಮಿಳನಾಡಿನಲ್ಲಿ ವಿಶೇಷವಾಗಿರುವ ಮಾಲಾಡು ಹಬ್ಬಗಳ ಸಮಯದಲ್ಲಿ ಮಾಡುತ್ತಾರೆ. ಕಡಿಮೆ ಸಮಯದಲ್ಲಿ ಸುಲಭವಾಗಿ ಮಾಡಬಹುದಾದ ತಿಂಡಿ ಇದಾಗಿದೆ.
ಮಾಡುವ ವಿಧಾನ
ಮೊದಲು ಹುರಿದ ಕಡಲೆಹಿಟ್ಟನ್ನು ಮಿಕ್ಸಿಗೆ ಹಾಕಿ ಅದನ್ನು ಪೌಡರ್ ಮಾದರಿಯಲ್ಲಿ ಮಾಡಿಕೊಳ್ಳಬೇಕು. ಅನಂತರ ಅದನ್ನು ಜರಡಿ ಹಿಡಿಯಬೇಕು. ಏಲಕ್ಕಿಯನ್ನು ಸಕ್ಕರೆಯೊಂದಿಗೆ ಗುದ್ದಿ ಪುಡಿಮಾಡಬೇಕು. ಇದನ್ನೂ ಬೇಳೆಯ ಮಾದರಿಯಲ್ಲಿ ಜರಡಿ ಹಿಡಿಯಬೇಕು. ಅದಕ್ಕೆ ಜಾಯಿಕಾಯಿಯನ್ನು ಹಾಕಿ.
ಮೊದಲೇ ಜರಡಿ ಹಿಡಿದ ಬೇಳೆ ಮತ್ತು ಸಕ್ಕರೆಯನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಗೇರುಬೀಜವನ್ನು ತುಪ್ಪದಲ್ಲಿ ಹುರಿದುಕೊಳ್ಳಬೇಕು. ಅದನ್ನು ಪಾನ್‌ನಿಂದ ತೆಗೆದು ಮಿಕ್ಸ್ ಮಾಡಿದ ಹಿಟ್ಟಿಗೆ ಹಾಕಿ. ಅನಂತರ ಅದೇ ಪಾನ್‌ಗೆ ಒಣಗಿದ ದ್ರಾಕ್ಷಿ ಹಾಕಿ ಅದು ಉಬ್ಬುವವರೆಗೂ ಹುರಿದುಕೊಳ್ಳಿ. ಅನಂತರ ದ್ರಾಕ್ಷಿಯನ್ನು ತೆಗೆದು ಅದೇ ತುಪ್ಪದಲ್ಲಿ ಹಿಟ್ಟನ್ನು ಹುರಿಯಬೇಕು.
ಕಡಿಮೆ ಉರಿ ಇಟ್ಟುಕೊಂಡು 2- 3 ನಿಮಿಷದ ವರೆಗೂ ಹಾಗೆ ಬಿಡಿ. ನಂತರ ಅದಕ್ಕೆ ಒಣದ್ರಾಕ್ಷಿಯನ್ನು ಹಾಕಿಕೊಂಡು ಲಾಡು ಮಾದರಿಯಲ್ಲಿ ಉಂಡೆ ಮಾಡಬೇಕು. ಈಗ ತಮಿಳನಾಡಿನ ಸುಲಭವಾಗಿ ತಯಾರಿಸಬಲ್ಲ ರುಚಿಕರವಾದ ಮಲಾಡು ತಿನ್ನಲು ಸಿದ್ಧ.
ಬೇಕಾಗಿರುವ ಸಾಮಗ್ರಿ
1 ಕಪ್ ಹುರಿದ ಕಡಲೆಹಿಟ್ಟು
1/2 ಕಪ್ ಸಕ್ಕರೆ
ಸ್ವಲ್ಪ ಏಲಕ್ಕಿ
ಜಾಯಿಕಾಯಿ
10 ರಿಂದ 12 ಗೇರುಬೀಜ ಸ್ವಲ್ಪ ಒಣದ್ರಾಕ್ಷಿ ಕಾಲು ಕಪ್ ತುಪ್ಪ