Advertisement

ನೇಣು ಬಿಗಿದ ಸ್ಥಿತಿಯಲ್ಲಿ ಖ್ಯಾತ ಕಿರುತೆರೆ ನಟಿ, ನಿರೂಪಕಿ ಮೃತದೇಹ ಪತ್ತೆ: ಆತ್ಮಹತ್ಯೆ ಶಂಕೆ

09:40 AM Dec 09, 2020 | Mithun PG |

ಚೆನ್ನೈ: ತಮಿಳಿನ ಖ್ಯಾತ ಕಿರುತೆರೆ ನಟಿ, ವಿಜೆ ಚಿತ್ರಾ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದ್ದು, ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

Advertisement

ಚೆನ್ನೈನ ನಜರೀತ್ ಪೆಟೈ ಎಂಬಲ್ಲಿನ ಖಾಸಗಿ ಹೊಟೇಲ್ ಒಂದರಲ್ಲಿ ಚಿತ್ರಾ ಮೃತದೇಹ ಪತ್ತೆಯಾಗಿದೆ.

ಚಿತ್ರಾ ತಮಿಳಿನ ಖಾಸಗಿ ವಾಹಿನಿಯಲ್ಲಿ ಮೂಡಿಬರುತ್ತಿದ್ದ ಪಾಂಡಿಯನ್ ಸ್ಟೋರ್ಸ್ ಎಂಬ ಧಾರವಾಹಿಯಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದರು.  ಇತ್ತೀಚಿಗಷ್ಟೇ ಇವರ ನಿಶ್ಚಿತಾರ್ಥ ಉದ್ಯಮಿ ಹೇಮಂತ್ ಅವರೊಂದಿಗೆ ನೆರವೇರಿತ್ತು ಎಂದು ವರದಿಯಾಗಿದೆ.

ವರದಿಗಳ ಪ್ರಕಾರ  ಇವಿಪಿ ಫಿಲ್ಮ್ ಸಿಟಿಯಲ್ಲಿ ಚಿತ್ರಿಕರಣ ಮುಗಿಸಿಕೊಂಡು ಬುಧವಾರ (ಡಿ. 9) ನಸುಕಿನ ಜಾವ 2:30ರ ವೇಳೆಗೆ ಚಿತ್ರಾ ತಮ್ಮ ಹೊಟೇಲ್ ರೂಂಗೆ ಹಿಂದಿರುಗಿದ್ದರು.  ಇವರು ತಮ್ಮ ಭಾವೀ ಪತಿ ಹೇಮಂತ್ ಅವರೊಂದಿಗೆ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ.

Advertisement

ಈ ಕುರಿತು ಪ್ರತಿಕ್ರಿಯೆ ನೀಡಿದ ಹೇಮಂತ್, ಚಿತ್ರಿಕರಣ ಮುಗಿಸಿಕೊಂಡು ಹಿಂದಿರುಗಿದ ಚಿತ್ರಾ ಸ್ನಾನಕ್ಕೆಂದು ತೆರಳಿದ್ದರು. ಆದರೇ ಬಹು ಸಮಯವಾದರೂ ತನ್ನ ರೂಂನಿಂದ ಹೊರಬರಲಿಲ್ಲ.  ಬಾಗಿಲು ಬಡಿದರೂ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಕೂಡಲೇ ಹೊಟೇಲ್ ಸಿಬ್ಬಂದಿಗೆ ಮಾಹಿತಿ ತಿಳಿಸಿ, ನಕಲಿ ಕೀ ಬಳಸಿ ಬಾಗಿಲು ತೆರೆಯಲಾಗಿತ್ತು. ಈ ವೇಳೆ ಚಿತ್ರಾ ತಮ್ಮ ರೂಂ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next