Advertisement

Tamil ಸಿನೆಮಾ ನಿರ್ಮಾಪಕ ಡ್ರಗ್ಸ್‌ ಜಾಲದ ಮಾಸ್ಟರ್‌ಮೈಂಡ್!

12:25 AM Feb 26, 2024 | Team Udayavani |

ಹೊಸದಿಲ್ಲಿ: ಇತ್ತೀಚೆಗೆ ದೆಹಲಿಯಲ್ಲಿ ಮಾದಕದ್ರವ್ಯ ತಯಾರಿಕೆಗೆ ಬಳಸುತ್ತಿದ್ದ ಭಾರೀ ಪ್ರಮಾಣದ ರಾಸಾಯನಿಕಗಳನ್ನು ವಶಕ್ಕೆ ಪಡೆದಿದ್ದ ಎನ್‌ಸಿಬಿ(ಮಾದಕವಸ್ತು ನಿಯಂತ್ರಣ ಸಂಸ್ಥೆ) ಅಧಿಕಾರಿಗಳು ಈಗ ಈ ಜಾಲದ ಹಿಂದಿನ ಮಾಸ್ಟರ್‌ಮೈಂಡ್‌ ಯಾರೆಂದು ಪತ್ತೆಹಚ್ಚಿದ್ದಾರೆ.

Advertisement

ತಮಿಳು ಸಿನೆಮಾ ರಂಗದ ಖ್ಯಾತ ನಿರ್ಮಾ ಪಕನೇ ಈ ಅಂತಾರಾಷ್ಟ್ರೀಯ ಡ್ರಗ್ಸ್‌ ಜಾಲದ ರೂವಾರಿಯಂತೆ! ಹೀಗೆಂದು ರವಿವಾರ ಮಾದಕವಸ್ತು ನಿಯಂತ್ರಣ ಸಂಸ್ಥೆ(ಎನ್‌ಸಿಬಿ) ತಿಳಿಸಿದೆ. ಆದರೆ, ಆ ನಿರ್ಮಾಪಕ ಈಗ ನಾಪತ್ತೆಯಾಗಿದ್ದು, ಆತನನ್ನು ಬಂಧಿಸಲು ಬಲೆ ಬೀಸಲಾಗಿದೆ ಎಂದೂ ಎನ್‌ಸಿಬಿ ಮಾಹಿತಿ ನೀಡಿದೆ.

ದಿಲ್ಲಿ ಪಶ್ಚಿಮ ಭಾಗದ ಗೋದಾಮಿನ ಮೇಲೆ ಫೆ.15ರಂದು ಜಂಟಿ ದಾಳಿ ನಡೆಸಿದ್ದ ಎನ್‌ಸಿಬಿ ಮತ್ತು ದಿಲ್ಲಿ ಪೊಲೀಸರು. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗೆ ಸಾಗಿಸಲಾಗುತ್ತಿದ್ದ ಸುಮಾರು 50 ಕೆ.ಜಿ. ತೂಕದ ಸೂಡೊಎಫಿಡ್ರೈನ್‌ ಮಾಲ್‌ ಅನ್ನು ವಶಪಡಿಸಿಕೊಂಡು, ಮೂವರನ್ನು ಬಂಧಿಸಿದ್ದರು.

ಈ ಜಾಲವು ಕಳೆದ 3 ವರ್ಷಗಳಲ್ಲಿ ಸುಮಾರು 3,500 ಕೆ.ಜಿ. ತೂಕದ ಸೂಡೊಎಫಿಡ್ರೈನ್‌ ಡ್ರಗ್ಸ್‌ ಅನ್ನು ವಿದೇಶಗಳಿಗೆ ಕಳ್ಳಸಾಗಣೆ ಮಾಡಿದ್ದು, ಇದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು ಎರಡು ಸಾವಿರ ಕೋಟಿ ರೂ. ಮೌಲ್ಯದ್ದಾಗಿದೆ. ಆಹಾರ ಪದಾರ್ಥಗಳಲ್ಲಿ ಅಡಗಿಸಿಟ್ಟು ಭಾರತದಿಂದ ಡ್ರಗ್ಸ್‌ ಸಾಗಿಸುತ್ತಿರುವ ಬಗ್ಗೆ 4 ತಿಂಗಳುಗಳ ಹಿಂದೆಯೇ ಅಧಿಕಾರಿಗಳು ಸುಳಿವು ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next