Advertisement
ತಮಿಳಿಗರು ಕನ್ನಡ ವಿರೋಧಿಗಳಲ್ಲ: ಹಿಂದುತ್ವ ತಮಿಳಿಗರ ರಕ್ತದಲ್ಲಿದೆ. ಭಾಷಾ ಸಮಸ್ಯೆಯನ್ನು ಅಪಹಾಸ್ಯ ಮಾಡಲಿಲ್ಲ: ಪ್ರೋತ್ಸಾಹಿಸಿದರು…. ತಮಿಳುನಾಡಿನಲ್ಲಿ ಜನ ಸಾಮಾನ್ಯರು ಬಹಳ ಒಳ್ಳೆಯವರಿದ್ದಾರೆ. ಸುಸಂಸ್ಕೃತರಿದ್ದಾರೆ.
Related Articles
Advertisement
ಜನರ ಜತೆ ಭಾವನಾತ್ಮಕವಾಗಿ ಬೆರೆ ಯಲು ಏನು ಬೇಕೋ ಅದನ್ನು ಮಾಡುವ ಪ್ರಯತ್ನ ನಡೆಸುತ್ತಿದ್ದೇನೆ. ನಮ್ಮ ಊರು ಪೊಂಗಲ್ ಅಂತ ಪ್ರತೀ ಊರಿನಲ್ಲೂ ಪೊಂಗಲ್ ಉತ್ಸವ ಮಾಡಿದೆವು. ಕೆಲವು ಕಡೆಗಳಲ್ಲಿ ಜಲ್ಲಿ ಕಟ್ಟು ಉತ್ಸವ ಸಂಘಟಿಸಿದೆವು. ತಮಿಳುನಾಡಿನ ಸಾಮಾಜಿಕ ಸ್ಥಿತಿ ಅಧ್ಯಯನ ಮಾಡಿ ಕುರುಬ, ಒಕ್ಕಲಿಗ, ಭೋವಿ, ವೀರಶೈವ ಸಮಾಜದ ಸಮಾವೇಶ ಮಾಡಿದೆವು. ಊಟಿ, ಕೊನ್ನೂರು ಪ್ರದೇಶದಲ್ಲಿ ಬಡಗ ಸಮಾವೇಶ ಮಾಡಿದೆವು. ಅದು ನಮ್ಮ ಕೊಡಗಿನ ಭಾಷೆಯ ರೀತಿಯಲ್ಲಿದೆ.
ಪರ್ಯಾಯ ಸ್ವೀಕರಿಸುವ ಗುಣವಿದೆನಾವು ರಾಜಕೀಯವಾಗಿ ನಮ್ಮ ಹಿತಾಸಕ್ತಿ ಕಾಪಾಡಿಕೊಂಡು ಜನರಿಗೆ ಹತ್ತಿರ ಆಗುವ ಪ್ರಯತ್ನ ಮಾಡುತ್ತಿದ್ದೇವೆ. ಸುಮಾರು 53 ವರ್ಷದಿಂದ ಎಐಎಡಿಎಂಕೆ ಮತ್ತು ಡಿಎಂಕೆ ಅಧಿಕಾರ ನಡೆಸಿವೆ. 1965ರಲ್ಲಿ ನಡೆದ ಹಿಂದಿ ವಿರೋಧಿ ಚಳವಳಿ ನಡೆದ ಅನಂತರ ಡಿಎಂಕೆ ಉದಯವಾಯಿತು. ಆಗ ಪರ್ಯಾಯ ರಾಷ್ಟ್ರೀಯ ಪಕ್ಷ ಇಲ್ಲದ ಕಾರಣ ಸ್ಥಳಿಯ ರಾಜ ಕೀಯ ಪಕ್ಷಗಳು ಬಲ ಗೊಂಡವು. ಈಗ ತಮಿಳುನಾ ಡಿನ ಜನರು ಬಲವಾದ ರಾಷ್ಟ್ರೀಯ ಪಕ್ಷವನ್ನು ಹುಡುಕುತ್ತಿ ದ್ದಾರೆ. ಅವರೇನು ರಾಷ್ಟ್ರೀಯ ಪಕ್ಷಗಳ ವಿರೋಧಿಗಳಲ್ಲ. ತಮಿಳಿಗರು ಹಿಂದುತ್ವ ವಿರೋಧಿಗಳಲ್ಲ. ಜಗತ್ತಿನಲ್ಲಿ ಎಷ್ಟು ದೇವಸ್ಥಾನಗ ಳಿವೆಯೋ ಅದರ ಅರ್ಧ ಭಾಗ ತಮಿಳುನಾಡಿನಲ್ಲಿವೆ. ಭಾಷೆ ಸಮಸ್ಯೆಯಾಗಲಿಲ್ಲ
ತಮಿಳು ಭಾಷೆಯಲ್ಲಿಯೇ ಸುಮಾರು ಮೂವತ್ತು ನಲವತ್ತು ಪದಗಳು ಕನ್ನಡ ಪದಗಳೇ ಇವೆ. ಕರ್ನಾಟಕ ದಲ್ಲಿಯೇ ಉತ್ತರ ಕರ್ನಾಟಕ ಕನ್ನಡ, ಮಂಗ ಳೂರು ಕನ್ನಡ, ಮಂಡ್ಯ ಕನ್ನಡ ಹೇಗೆ ವ್ಯತ್ಯಾಸ ಆಗುತ್ತದೊ ಅದೇ ರೀತಿ ಅಲ್ಲಿಯೂ ಭಾಷೆಯಲ್ಲಿ ವ್ಯತ್ಯಾಸ ಇದೆ. ಸುಮಾರು ಏಳೆಂಟು ಕ್ಷೇತ್ರಗಳಲ್ಲಿ ಕನ್ನಡ ಭಾಷಿಕರೆ ಇದ್ದಾರೆ. ಹೊಸೂರು, ಊಟಿ, ಥೇಣಿ, ಭವಾನಿ ಕ್ಷೇತ್ರಗಳಲ್ಲಿ ಕನ್ನಡಿಗರೇ ಹೆಚ್ಚಿದ್ದಾರೆ. ಸಾಂಸ್ಕೃತಿಕವಾಗಿ ಹಾಗೂ ಚಾರಿತ್ರಿಕ ವಾಗಿಯೂ ನಾವು ಅವರಿಗೆ ಬಹಳ ಹತ್ತಿರ ಇದ್ದೇವೆ. ನಾವು ಯುಗಾದಿ ಆಚರಿಸುತ್ತೇವೆ. ಅವರು ಆಚರಿಸುತ್ತಾರೆ. ಅವರು ಸಂಕ್ರಾಂತಿ ಆಚರಿಸುತ್ತಾರೆ. ನಾವೂ ಆಚರಿಸುತ್ತೇವೆ. ಭೇದಗಳನ್ನು ಹುಟ್ಟು ಹಾಕಲು ರಾಜಕೀಯ ಪ್ರೇರಿತ ಪ್ರಯತ್ನ ನಡೆದಿದೆ. ಕನ್ನಡಿಗರು ಮತ್ತು ತಮಿಳು ನಾಡಿನ ವಿರೋಧದ ಬಗ್ಗೆ ಕಾವೇರಿ ಸಂದರ್ಭದಲ್ಲಿ ನಾನು ನೀಡಿದ ಹೇಳಿಕೆಯನ್ನು ಮುಂದಿಟ್ಟು ಅಲ್ಲಿ ಸಂಘರ್ಷ ಹುಟ್ಟು ಹಾಕುವ ಪ್ರಯತ್ನ ನಡೆಸಿದರು. ಆಗ ನಾನೊಂದು ಪ್ರಶ್ನೆ ಕೇಳಿದೆ. ನಿಮ್ಮ ಹಾಗೂ ನಿಮ್ಮ ಪಕ್ಕದ ಮನೆಯವರ ನಡುವೆ ಜಗಳ ನಡೆದಾಗ ನೀವು ಯಾರ ಪರ ವಹಿಸುತ್ತೀರಿ ಎಂದೆ. ಅವರು ನಮ್ಮ ಮನೆ ಪರ ಅಂದರು, ನಿಮ್ಮ ಊರು ಹಾಗೂ ಪಕ್ಕದ ಊರಿನವರ ನಡುವೆ ಕಬಡ್ಡಿ ಪಂದ್ಯ ನಡೆದಾಗ ಯಾರ ಪರ ನಿಲ್ಲುತ್ತೀರಿ ಎಂದೆ, ನಮ್ಮ ಊರಿನ ಪರ ನಿಲ್ಲುತ್ತೇವೆ ಎಂದರು. ನಾನೂ ಹಾಗೆ, ನಮ್ಮ ರಾಜ್ಯದ ವಿಷಯ ಬಂದಾಗ ಕರ್ನಾಟಕದ ಪರ ನಿಲ್ಲುತ್ತೇನೆ. ದೇಶದ ವಿಷಯ ಬಂದಾಗ ತಮಿಳುನಾಡು, ಕರ್ನಾಟಕ ಎಲ್ಲರ ಪರವಾಗಿ ನಿಲ್ಲುತ್ತೇನೆ. ತಮಿಳುನಾಡಿ ಗಾಗಲಿ, ಕರ್ನಾಟಕಕ್ಕಾಗಲಿ ಅನ್ಯಾಯವಾಗುವು ದನ್ನು ನಾನು ಬೆಂಬಲಿಸುವುದಿಲ್ಲ ಎಂದು ಹೇಳಿದೆ. ನನ್ನ ವಾದವನ್ನು ಮೆಚ್ಚಿ ಚಪ್ಪಾಳೆ ಹೊಡೆದರು. ಭಾಷೆ ಜಗಳ ಆಡುವ ವಿಷಯವಲ್ಲ. ಅದು ಸಂಬಂಧ ಬೆಸೆಯುವ ವಿಷಯ ಎಂದು ಹೇಳಿದಾಗ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಾಟಾಳ್ ನಾಗರಾಜರನ್ನು ನೋಡಿದಾಗ ತಮಿಳಿಗರಿಗೆ ಕನ್ನಡಿಗರೆಲ್ಲ ಹೀಗೇನಾ ಅಂತ ಅನಿಸುತ್ತದೆ. ವೈಕೋನನ್ನು ನೋಡಿದಾಗ ಕನ್ನಡಿಗರಿಗೂ ತಮಿಳಿಗರೆಲ್ಲ ಹೀಗೇನಾ ಅಂತ ಅನಿಸುತ್ತದೆ. ಆದರೆ ಎಲ್ಲ ಕನ್ನಡಿಗರೂ ಹಾಗೂ ಎಲ್ಲ ತಮಿಳಿಗರು ಹಾಗಿಲ್ಲ ಅನ್ನುವುದು ವಾಸ್ತವ. ಭೇದ ಹುಟ್ಟು ಹಾಕುವವರಿಗೆ ಬೇಧ ಕಾಣಿಸುತ್ತದೆ. ಒಟ್ಟಾಗಿ ನೋಡು ವವರಿಗೆ ಒಟ್ಟಾಗಿ ಕಾಣಿಸುತ್ತದೆ. ನಾವು ತಮಿಳುನಾಡಿನ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಸ್ಪರ್ಧಿಸಿಲ್ಲ. ಕೇವಲ 20 ಕ್ಷೇತ್ರಗಲ್ಲಿ ಸ್ಪರ್ಧಿಸಿದ್ದೇವೆ. ನಾವು ಅವರ ಭಾವನೆ ಗಳನ್ನು ಅರ್ಥ ಮಾಡಿಕೊಂಡು ಅವರಿಗೆ ಹತ್ತಿರವಾಗುವ ಕೆಲಸ ಮಾಡುತ್ತಿದ್ದೇವೆ. ಅರ್ಥವಾಗುತ್ತಿಲ್ಲ..
ನಾವು ತಾಯಿ ಭುವನೇಶ್ವರಿಯನ್ನು ಆರಾಧಿಸುತ್ತೇವೆ. ಭುವನೆೇಶ್ವರಿಯನ್ನು ಆರಾಧಿಸುತ್ತಿರುವವರು ವಿಜಯನಗರದ ಅರಸರು. ವಿಜಯ ನಗರ ಸಾಮ್ರಾಜ್ಯ ಹುಟ್ಟಿಕೊಂಡಿದ್ದೇ ಹಿಂದುತ್ವ ರಕ್ಷಿಸಲು. ಅದು ನಮಗೆ ಅರ್ಥವಾಗುತ್ತದೆ. ಆದರೆ ಸಿದ್ದರಾಮಯ್ಯನವರಿಗೆ ಅದು ಅರ್ಥವಾಗುತ್ತಿಲ್ಲ. – ಸಿ.ಟಿ. ರವಿ, ಬಿಜೆಪಿ ರಾಷ್ಟ್ರೀಯ ಪ್ರ.ಕಾರ್ಯದರ್ಶಿ