Advertisement

Viral: ನಿಮ್ಮಿಂದಾಗಿ ನಮ್ಮ ಜನರಿಗೆ ಕೆಲಸವಿಲ್ಲ…ರೈಲಿನೊಳಗೆ ವಲಸೆ ಕಾರ್ಮಿಕರ ಮೇಲೆ ಹಲ್ಲೆ

05:08 PM Feb 17, 2023 | Team Udayavani |

ಚೆನ್ನೈ: ನೀವು ತಮಿಳರಾ ಅಥವಾ ಹಿಂದಿ ಮಾತನಾಡುವವರಾ? ಹೀಗೆಂದು ಪ್ರಶ್ನಿಸಿದ ಪ್ರಯಾಣಿಕನೊಬ್ಬ ರೈಲ್ವೆ ಬೋಗಿಯೊಳಗೆ ಮೂವರು ವಲಸೆ ಕಾರ್ಮಿಕರ ಮೇಲೆ ಹಿಗ್ಗಾಮುಗ್ಗಾ ಥಳಿಸಿ, ಕೆಟ್ಟ ಶಬ್ದದಿಂದ ಬೈಯುತ್ತಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Advertisement

ಈ ಘಟನೆಯ ವಿಡಿಯೋ ವೈರಲ್ ಆದ ನಂತರ ತಮಿಳುನಾಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪ್ರಯಾಣಿಕನಿಗಾಗಿ ಶೋಧ ಕಾರ್ಯ ನಡೆಸುತ್ತಿರುವುದಾಗಿ ವರದಿ ತಿಳಿಸಿದೆ.

ವಿಡಿಯೋದಲ್ಲೇನಿದೆ?

ರೈಲಿನಲ್ಲಿ ಬೋಗಿಯೊಳಗೆ ಪ್ರಯಾಣಿಕರ ಗುಂಪು ನಿಂತಿದ್ದು, ವ್ಯಕ್ತಿಯೊಬ್ಬ ವಲಸಿಗ ಯುವಕನ ಬೆನ್ನುತಟ್ಟಿ ಕರೆದು ನೀನು ತಮಿಳಾ ಅಥವಾ ಹಿಂದಿಯೋ ಅಂತ ಪ್ರಶ್ನಿಸುತ್ತಾನೆ. ಬಳಿಕ ಆತನ ಸಮೀಪದಲ್ಲಿದ್ದಾತ ನಾವೆಲ್ಲರೂ ಹಿಂದಿ, ಹಿಂದಿ ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.


ಹಿಂದಿ ಅಂತ ಹೇಳಿದ ಕೂಡಲೇ ವಲಸಿಗ ಕಾರ್ಮಿಕರನ್ನು ಹಿಗ್ಗಾಮುಗ್ಗಾ ಥಳಿಸಿ…ಕೆಟ್ಟ ಭಾಷೆಯಲ್ಲಿ ಬೈಯ್ಯುತ್ತಿರುವುದು ವಿಡಿಯೋದಲ್ಲಿದೆ. ನಾನು ನಿಮ್ಮನ್ನೆಲ್ಲಾ ಹೊಡೆದು ಬಿಡುತ್ತೇನೆ…ಸೂ..ಮಕ್ಕಳಾ…ನಿಮ್ಮಿಂದಾಗಿ ನಮ್ಮ ಜನರಿಗೆ (ತಮಿಳರಿಗೆ) ಕೆಲಸ ಇಲ್ಲದಂತಾಗಿದೆ. ಕೊನೆಗೆ ಪ್ರಧಾನಿ ಮೋದಿ ವಿರುದ್ಧವೂ ಕೆಟ್ಟ ಭಾಷೆ ಬಳಸಿರುವ ಆತ ಮತ್ತೊಬ್ಬ ವಲಸಿಗ ಕಾರ್ಮಿಕನ ಮೇಲೆ ಹಲ್ಲೆ ನಡೆಸಿರುವುದು ವಿಡಿಯೋದಲ್ಲಿದೆ.

Advertisement

ಚಲಿಸುತ್ತಿದ್ದ ರೈಲಿನ ಜನರಲ್ ಕಂಪಾರ್ಟ್ ಮೆಂಟ್ ನೊಳಗೆ ಈ ಇಡೀ ಘಟನೆ ನಡೆದಿದ್ದು, ಈ ಬಗ್ಗೆ ಎಫ್ ಐಆರ್ ದಾಖಲಾಗಿದ್ದು, ಆರೋಪಿಯನ್ನು ಕೂಡಲೇ ಬಂಧಿಸುವುದಾಗಿ ತಮಿಳುನಾಡು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next